ಬೈಕ್ ರೇಸರ್ ಅರವಿಂದ್ ದೇಹದಲ್ಲಿ ಸ್ಕ್ರೂ, ರಾಡ್ಗಳೇ ಇವೆಯಂತೆ. ಹೀಗಂತ ಹೇಳಿದ್ದು ಸ್ವತ: ಅರವಿಂದ್. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ರ್ಯಾಲಿಗಳಲ್ಲಿ, ಬೈಕ್ ರೇಸಿಂಗ್ ವೇಳೆ ಹಲವು ಬಾರಿ ಅವರಿಗೆ ಅಪಘಾತ ಆಗಿದೆಯಂತೆ. ಈ ವೇಳೆ ಅವರಿಗೆ ಶಸ್ತ್ರಚಿಕಿತ್ಸೆ ಕೂಡಾ ಆಗಿದೆಯಂತೆ. ಹೀಗಾಗಿ ಅವರ ದೇಹದಲ್ಲಿ ಸಾಕಷ್ಟು ಸ್ಕ್ರೂಗಳಿವೆಯಂತೆ.
ನನ್ನ ದೇಹದಲ್ಲಿ 16 ಸ್ಕ್ರೂಗಳಿವೆ. ಒಂದು ರಾಡ್, ಒಂದು ಪ್ಲೇಟ್ ಇದೆ ಎಂದಾಗ ದಿವ್ಯಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಈ ಸ್ಕ್ರೂ, ರಾಡ್ ಮತ್ತು ಪ್ಲೇಟ್ ತೂಕ ಒಂದು ಕೆಜಿಯಷ್ಟು ಇರಬಹುದಾ ಎಂದು ದಿವ್ಯ ಕೇಳಿದಾಗ, ಇಲ್ಲ ಅವು ಕೇವಲ ಗ್ರಾಂಗಳಷ್ಟೇ ಎಂದು ಅರವಿಂದ್ ಹೇಳಿದರು. ಇನ್ನು ಯಾವಾಗಲೂ ಪಟ ಪಟ ಮಾತನಾಡುತ್ತಿದ್ದ ಪ್ರಶಾಂತ್ ಸಂಬರಗಿ ಅಳುತ್ತಿದ್ದನ್ನು ನೋಡಿ ಬಿಗ್ಬಾಸ್ ಅವರನ್ನು ಕನ್ಫೆಷನ್ ರೂಮ್ಗೆ ಬರಲು ಹೇಳಿದ್ದಾರೆ. "ನನ್ನ ಪತ್ನಿ ಆಯುರ್ವೇದಿಕ್ ವೈದ್ಯೆ. ಅವರಿಗೆ ನನ್ನ ಧ್ವನಿ ಹೋಗಿರುವುದು ನೋಡಿ ಔಷಧ ಕಳುಹಿಸಿಕೊಟ್ಟಿದ್ದಾರೆ. ಇಷ್ಟು ದಿನ ಅವರ ನೆನಪು ಆಗುತ್ತಾ ಇರಲಿಲ್ಲ. ಈಗ ಔಷಧ ಕಳುಹಿಸಿಕೊಟ್ಟಿದ್ದರಿಂದ ಅವಳ ನೆನಪಾಗುತ್ತಿದೆ ಎಂದರು. ನಂತರ ಕಣ್ಣು ಒರಿಸಿಕೊಂಡು ಸುಧಾರಿಸಿಕೊಂಡರು.