ಕರ್ನಾಟಕ

karnataka

ETV Bharat / sitara

ಸಂಯಮ ಮೀರಿದ ಖಾಸಗಿ ಕಮೆಂಟ್​ಗೆ ನಟಿಯ ಉತ್ತರ ಏನು ಗೊತ್ತಾ? - ಯಶಿಕಾ ಆನಂದ್ ಫೋಟೋಗಳು

ಲಾಕ್​ಡೌನ್​ ಪರಿಣಾಮದಿಂದ ಇತ್ತೀಚೆಗೆ ಸಾಕಷ್ಟು ನಟ-ನಟಿಯರು ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಿದ್ದಾರೆ. ಇಲ್ಲಾಗುವ ವಕ್ರ ಸಂಭಾಷಣೆ ಹಾಗೂ ಕೀಳು ಮಟ್ಟದ ಮಾತುಗಳು ಕೆಲವೊಮ್ಮೆ ಯಾವ ಮಟ್ಟಕ್ಕೆ ಬಂದು ನಿಲ್ಲತ್ತವೆ ಅನ್ನೋದನ್ನು ಊಹಿಸಿಲು ಸಾಧ್ಯವಿಲ್ಲ. ಇಂತಹದ್ದೇ ಘಟನೆಯೊಂದು ನಟಿಯೊಬ್ಬಳು ಎದುರಿಸಿದ್ದು ಅದು ಖಾಸಗಿ ವಿಚಾರದ ವಿಷಯದವರೆಗೂ ಬಂದು ನಿಂತಿದೆ..

Heroine Yashika Annand Gives Befitting Reply
ನಟಿ ಯಶಿಕಾ ಆನಂದ್

By

Published : May 29, 2021, 9:31 PM IST

ತನ್ನ ಖಾಸಗಿ ಅಂಗಾಂಗದ ಬಗ್ಗೆ ಯುವಕ ಕೇಳಿದ ಕೀಳು ಮಟ್ಟದ ಪ್ರಶ್ನೆಗೆ ತಮಿಳಿನ ಬಿಗ್​ ಬಾಸ್​ ಸೀಸನ್​ 3ರ ಸ್ಪರ್ಧಿ, ನಟಿಯೂ ಆಗಿರುವ ಯಶಿಕಾ ಆನಂದ್ ತಕ್ಕ ಉತ್ತರವನ್ನೇ ನೀಡಿದ್ದಾರೆ.

ನಟಿ ಯಶಿಕಾ ಆನಂದ್

ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಸಂಭಾಷಣೆ ನಡೆಸಿದ ಯಶಿಕಾ ಆನಂದ್,​ ಅಭಿಮಾನಿಗಳ ಮುಂದೆ ಕೆಲವು ಪ್ರಶ್ನೆಗಳನ್ನು ಇಟ್ಟಿದ್ದರು. ಅದು ಏನಪ್ಪಾ ಅಂದ್ರೆ ಅಭಿಮಾನಿಗಳು ತನ್ನನ್ನು ಏನು ಬೇಕಾದರೂ ಕೇಳಬಹುದು, ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಿಸಲು ತಯಾರಿದ್ದೇನೆ, ತಾವು ಯಾವುದೇ ಪ್ರಶ್ನೆ ಕೇಳಿದರೂ ನಾನು ಉತ್ತರಿಸುತ್ತೇನೆ ಎಂದಿದ್ದರು.

ನಟಿ ಯಶಿಕಾ ಆನಂದ್

ಈ ಸಲುಗೆಯನ್ನು ಕಂಡ ಕೆಲವರು ನೆಚ್ಚಿನ ಊಟ-ತಿಂಡಿ ಯಾವುದು? ಇಷ್ಟಪಡುವ ಸಿನಿಮಾ ಯಾವುದು? ನೆಚ್ಚಿನ ನಟ ಯಾರು, ನಿಮ್ಮ ದಿನಚರಿ ಹೇಗಿರುತ್ತೆ ಅಂತೆಲ್ಲ ಬಗೆ ಬಗೆಯ ಪ್ರಶ್ನೆಗಳನ್ನು ಹಾಕಿದ್ದರು. ನಟಿ ಯಶಿಕಾ ಅಷ್ಟೇ ಸಲುಗೆಯಿಂದ ಅವುಗಳಿಗೆ ಉತ್ತರ ನೀಡಿದ್ದಳು.

ನಟಿ ಯಶಿಕಾ ಆನಂದ್

ಈ ಮಧ್ಯೆ ಪಡ್ಡೆ ಯುವಕನೊಬ್ಬ ಒಂದು ಹೆಜ್ಜೆ ಮುಂದೆ ಹೋಗಿ ನಟಿಯ ಖಾಸಗಿ ವಿಷಯದ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ನಿಮ್ಮ ಎದೆಯ ಗಾತ್ರ ಎಷ್ಟು ಎಂದು ಸಂಯಮ ಮೀರಿ ಕೇಳಿದ ಕಮೆಂಟ್​ಗೆ ನಟಿ ಯಶಿಕಾ ಅಷ್ಟೇ ಖಡಕ್ಕಾಗಿ ಉತ್ತರ ನೀಡಿದ್ದಾರೆ. ಇಂತಹ ಎಲ್ಲೆ ಮೀರಿದ ಪ್ರಶ್ನೆಗೆ ಉತ್ತರಿಸುವ ಮೂಲಕ ನಟಿ ಯಶಿಕಾ ಆ ಯುವಕನ ಬೆವರಿಳಿಸಿದ್ದಾಳೆ.

ನಟಿ ಯಶಿಕಾ ಆನಂದ್

ಬಾಲಾಜಿ ಮತ್ತು ನಯನತಾರಾ ಅಭಿನಯದ 'ಮೂಕುತಿ ಅಮ್ಮನ್' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಯಶಿಕಾ ಮತ್ತೆ ಯಾವ ಚಿತ್ರದಲ್ಲಿಯೂ ಅಭಿನಯಿಸಿಲ್ಲ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಮದುವೆಯಾಗುವ ಹುಡುಗ ಹೀಗಿರಬೇಕು ಅನ್ನೋದರ ಬಗ್ಗೆ ಕೆಲವು ಅನಿಸಿಕೆ ತಿಳಿಸಿದ್ದಳು.

ನಟಿ ಯಶಿಕಾ ಆನಂದ್

ABOUT THE AUTHOR

...view details