ಕನ್ನಡದಲ್ಲಿ ಈಗಾಗಲೇ ಸಾಕಷ್ಟು ದೇಶಭಕ್ತಿ ಕುರಿತಂತೆ ಹಾಡುಗಳು ಬಂದಿವೆ. ಆ ಸಾಲಿಗೆ ಈಗ ಮತ್ತೊಂದು ದೇಶಾಭಿಮಾನದ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿಯೇ ತಯಾರಾಗಿರುವ ಈ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಂಗೀತ ನಿರ್ದೇಶಕ ಎಸ್. ಪ್ರದೀಪ್ ವರ್ಮ ಸಂಗೀತ ಸಂಯೋಜಿಸಿರುವ 'ಹೇ ಹೇಳು ದೇಶ ಪ್ರೇಮಿಯೇ ವಂದೇ ಮಾತರಂ ನಮ್ಮ ಕೂಗು..' ಎಂಬ ಹಾಡಿಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ ಈ ಹಾಡಿನಲ್ಲಿ ನಟ ಶ್ರೀಮರಳಿ, ಅನಿರುದ್ಧ್ ಜತ್ಕರ್, ನಟಿಯರಾದ ಪಾರುಲ್ ಯಾದವ್, ನೀತುಶೆಟ್ಟಿ, ಅದ್ವಿತಿ ಶೆಟ್ಟಿ, ಸಂಗೀತ ನಿರ್ದೇಶಕ ವಿ. ಮನೋಹರ್, ನಿರ್ದೇಶಕ ನಾಗೇಂದ್ರ ಅರಸ್, ಯತಿರಾಜ್ ಸೇರಿದಂತೆ ಇನ್ನಿತರ ಸಿನಿಮಾ ತಾರೆಯರು ಕಾಣಿಸಿಕೊಂಡು ದೇಶಾಭಿಮಾನ ಮೆರೆದಿದ್ದಾರೆ.