ಕರ್ನಾಟಕ

karnataka

ETV Bharat / sitara

ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಸಾಲಿಗೆ ಹೊಸ ಒಟಿಟಿ ಸೇರ್ಪಡೆ.. ಭಾರತದಲ್ಲಿ ‘ಹೇಯು’ ಸೇವೆ ಆರಂಭ

ಭಾರತದಲ್ಲಿ ರಿಯಾಲಿಟಿ ಶೋಗಳಿಗೆ ಹೆಚ್ಚು ಮನ್ನಣೆ ಇದೆ. ಹೀಗಾಗಿ ಜನರನ್ನು ರಂಜಿಸುವ ಉದ್ದೇಶದಿಂದ ಕೆಲವು ಜನಪ್ರಿಯ ರಿಯಾಲಿಟಿ ಶೋಗಳನ್ನು ಹೇಯುನಲ್ಲಿ ಪ್ರಸಾರ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hayu OTT service launches in India
ಭಾರತದಲ್ಲಿ ‘ಹೇಯು’ ಸೇವೆ ಆರಂಭ

By

Published : Dec 3, 2021, 8:28 PM IST

ಬೆಂಗಳೂರು: ರಿಯಾಲಿಟಿ ಶೋ, ವೆಬ್‌ಸೀರಿಸ್ ನೋಡುವ ಹವ್ಯಾಸ ಇರುವವರಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮಾದರಿಯ ಮತ್ತೊಂದು ಓಟಿಪಿ ಫ್ಲಾಟ್‌ಫಾರ್ಮ್ ಭಾರತದಲ್ಲಿ ಪ್ರಾರಂಭಗೊಂಡಿದೆ.

ಬೆಂಗಳೂರಲ್ಲಿ ಭಾರತದ ಕೇಂದ್ರ ಕಚೇರಿ ಹೊಂದಿರುವ ‘ಹೇಯು‘ (Hayu.) ಹೆಸರಿನ ಈ ಪ್ಲಾಟ್‌ಫಾರ್ಮ್ ಈಗ ಭಾರತದಲ್ಲಿಯೂ ತನ್ನ ಸ್ಟ್ರೀಮಿಂಗ್ ಆರಂಭಿಸಿದೆ. ಹೇಯು ಈಗಾಗಲೇ 27 ದೇಶಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದ್ದು, ಅತ್ಯಂತ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಆಗಿ ರೂಪುಗೊಂಡಿದೆ. ಇದೀಗ ಭಾರತದಲ್ಲಿ ತನ್ನ ಸೇವೆ ಪ್ರಾರಂಭಿಸಿದೆ.

ಹೇಯು ಹೆಚ್ಚಾಗಿ ರಿಯಾಲಿಟಿ ಶೋಗಳಿಗೆ ಆದ್ಯತೆ ನೀಡುತ್ತಿದೆ. ಭಾರತದಲ್ಲಿ ರಿಯಾಲಿಟಿ ಶೋಗಳಿಗೆ ಹೆಚ್ಚು ಮನ್ನಣೆ ಇದೆ. ಹೀಗಾಗಿ ಜನರನ್ನು ರಂಜಿಸುವ ಉದ್ದೇಶದಿಂದ ಕೆಲವು ಜನಪ್ರಿಯ ರಿಯಾಲಿಟಿ ಶೋಗಳನ್ನು ಹೇಯುನಲ್ಲಿ ಪ್ರಸಾರ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿ ರಿಯಲ್ ಹೌಸ್‌ವೈಫ್ಸ್​, ಫ್ಯಾಮಿಲಿ ಕರ್ಮಾ ಇತ್ಯಾದಿ ಇಂಗ್ಲಿಷ್ ಭಾಷೆಯ ರಿಯಾಲಿಟಿ ಶೂಗಳು ಪ್ರಸಾರಗೊಳ್ಳಲಿದೆ. ಪ್ರಸ್ತುತ ಇಂಗ್ಲಿಷ್ ಭಾಷೆಯಲ್ಲಿ ಈ ಓಟಿಟಿ ಇರಲಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳ ರಿಯಾಲಿಟಿ ಶೋ ಹಾಗೂ ವೆಬ್‌ಸೀರಿಸ್ ಪ್ರಾರಂಭಿಸುವುದಾಗಿ ಹೇಯು ಡೈರೆಕ್ಟರ್ ಹೆಂಡ್ರಿಕ್ ಮೆಕ್ಡರ್ಮಾಟ್ ಹೇಳಿದ್ದಾರೆ.

ಇದನ್ನೂ ಓದಿ:ಪ್ಯಾನ್ ಇಂಡಿಯಾ 'ಮಡ್ಡಿ' ಸಿನಿಮಾಗೆ ಸೌತ್ ಸ್ಟಾರ್​ಗಳ ಸಾಥ್

ABOUT THE AUTHOR

...view details