ಕರ್ನಾಟಕ

karnataka

ETV Bharat / sitara

ಕಿರುತೆರೆಗೆ ಮರಳಿದ ಮುರಳಿ: 'ಸೂಪರ್ ದಂಪತಿ' ಕಾರ್ಯಕ್ರಮಕ್ಕೆ ಸಿಕ್ತು ಚಾಲನೆ..ನಿಮ್ಮೂರಿಗೂ ಬರಲಿದೆ ಸವಾರಿ - undefined

'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ ನಡೆಸಿಕೊಡುತ್ತಿರುವ ಹೊಸ ಕಾರ್ಯಕ್ರಮ 'ಸೂಪರ್ ದಂಪತಿ' ಶೋಗೆ ಚಾಲನೆ ದೊರೆತಿದೆ. ಬಹುತೇಕ ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ.

'ಸೂಪರ್ ದಂಪತಿ'

By

Published : Jul 5, 2019, 11:23 AM IST

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಸೂಪರ್ ದಂಪತಿ' ಮನರಂಜನೆ ಕಾರ್ಯಕ್ರಮ ಬೆಂಗಳೂರಿನಿಂದ ಹೊರಗೆ ನಡೆಯಲಿದೆ. ಇತ್ತೀಚೆಗೆ ನಗರದ ಮಲ್ಲೇಶ್ವರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ರಾಜ್ಯಾದ್ಯಂತ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಕಾರ್ಯಕ್ರಮ ನಡೆಸಲು ಪ್ಲ್ಯಾನ್ ಮಾಡಿದ್ದಾರೆ 'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ.

ಜುಲೈ 10 ರಿಂದ 14 ವರೆಗೆ ತುಮಕೂರು, ಶಿರಾ, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆಗಳಲ್ಲಿ ಮೊದಲ ಹಂತದ ಶೂಟಿಂಗ್ ನಡೆಯಲಿದೆ. ಮತ್ತೆ ಎರಡನೇ ಹಂತದ ಶೂಟಿಂಗ್ ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಜಗಳೂರು ತಾಲೂಕುಗಳಲ್ಲಿ ನಡೆಯಲಿದೆ. ಎಲ್ಲಾ ತಾಲೂಕುಗಳಲ್ಲಿ ಈ ಕಾರ್ಯಕ್ರಮ ನಡೆಯುವುದರಿಂದ ಚಲಿಸುವ ಸ್ಟೇಜ್ ಸಿದ್ಧಪಡಿಸಲಾಗಿದೆ. ಪ್ರತಿದಿನ ಸಂಜೆ ವೇಳೆ 3 ಎಪಿಸೋಡ್ ಅಂದರೆ 6 ಗಂಟೆಗಳ ಕಾಲ ಶೂಟಿಂಗ್ ಮಾಡಲಾಗುವುದು ಎನ್ನುತ್ತಾರೆ ಕಾರ್ಯಕ್ರಮ ನಿರ್ಮಾಪಕ ಹಾಗೂ ನಿರೂಪಕ ಬಿ.ಆರ್. ಮುರಳೀಧರ್ (ಮುರಳಿ).

ನಿರೂಪಕ ಮುರಳೀಧರ್​​

ಈ ಗೇಮ್ ಶೋಗಾಗಿ ಮುರಳಿ ಡ್ರೆಸ್​​​​​​ಕೋಡ್ ಕೂಡಾ ರೆಡಿಮಾಡಿಕೊಂಡಿದ್ದಾರೆ. ರಾಜ್ಯದ ಎಲ್ಲಾ ಭಾಗಗಳಿಗೂ ಅನ್ವಯವಾಗುವಂತಹ ಉಡುಪು ಧರಿಸಲಿದ್ದಾರೆ. ಈ ಗೇಮ್ ಶೋನಲ್ಲಿ ಹಾಸ್ಯ, ಆಟ, ಮನರಂಜನೆ ಎಲ್ಲವೂ ಇರಲಿದೆ. ಇದಕ್ಕಾಗಿ 3 ತಿಂಗಳಿನಿಂದಲೇ ಸಿದ್ಧತೆ ನಡೆದಿದೆ. ಕಿರುತೆರೆಯಲ್ಲೇ ಮೊದಲ ಬಾರಿಗೆ ಈ ರೀತಿಯ ವಿಭಿನ್ನ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ಮುರಳಿ. ಜುಲೈ 29 ರಿಂದ ಪ್ರತಿದಿನ ಅಂದರೆ ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಕಲರ್ಸ್​ ಸೂಪರ್​​​​ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

For All Latest Updates

TAGGED:

ABOUT THE AUTHOR

...view details