ಪರಭಾಷೆಯ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಹಾಗೂ ರಿಮೇಕ್ ಆಗಿ ಪ್ರಸಾರವಾಗುತ್ತಿವೆ. ಕೊರೊನಾ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ 'ಪೈಲ್ವಾನ್' ನಿರ್ಮಾಪಕಿ ಸ್ವಪ್ನಕೃಷ್ಣ ನಿರ್ಮಾಣದ ರೀಮೇಕ್ ಧಾರಾವಾಹಿಯ ಚಿತ್ರೀಕರಣ ಮತ್ತೆ ಆರಂಭವಾಗಿದೆ.
'ಸತ್ಯ' ಧಾರಾವಾಹಿಯಲ್ಲಿ ನಾಯಕಿಯಾಗಿ ಗೌತಮಿ ಜಾಧವ್ - Tamil remake serial Satya
ಕೊರೊನಾ ಲಾಕ್ಡೌನ್ನಿಂದ ಸ್ಥಗಿತಕೊಂಡಿದ್ದ 'ಸತ್ಯ' ಧಾರಾವಾಹಿ ಚಿತ್ರೀಕರಣ ಮತ್ತೆ ಆರಂಭವಾಗಿದ್ದು ಈ ಧಾರಾವಾಹಿಯಲ್ಲಿ ನಾಯಕಿ ಆಗಿ ಗೌತಮಿ ಜಾಧವ್ ನಟಿಸುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ.
ಈ ಧಾರಾವಾಹಿಯನ್ನು ಸ್ವಪ್ನಕೃಷ್ಣ ಜೀ ವಾಹಿನಿಗಾಗಿ ತಯಾರಿಸುತ್ತಿದ್ದಾರೆ. ಬೆಂಗಳೂರಿನ ಯಲಹಂಕದ ಬಂಗಲೆಯಲ್ಲಿ ಈ ಚಿತ್ರೀಕರಣ ನಡೆಯುತ್ತಿದೆ. ಈ ಮೆಗಾ ಧಾರಾವಾಹಿಗೆ 'ಸತ್ಯ' ಎಂದು ಹೆಸರಿಡಲಾಗಿದೆ. ಈ ಧಾರಾವಾಹಿಯನ್ನು ಸ್ವಪ್ನಕೃಷ್ಣ ಅವರೇ ನಿರ್ದೇಶಿಸುತ್ತಿದ್ದಾರೆ. ಹಾಗೂ ಅವರ ಪತಿ ಕೃಷ್ಣ ಛಾಯಾಗ್ರಾಹಕರು. ಇದು ತಮಿಳಿನ ಸತ್ಯ ಧಾರಾವಾಹಿಯ ರೀಮೇಕ್. ತೆಲುಗಿನಲ್ಲಿ ಈ ಧಾರಾವಾಹಿ 'ಸೂರ್ಯಕಾಂತಮ್' ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಸತ್ಯ ಧಾರಾವಾಹಿಲ್ಲಿ 'ಕಿನಾರೆ' ಹಾಗೂ 'ಆದ್ಯ' ಚಿತ್ರಗಳ ನಟಿ ಗೌತಮಿ ಜಾಧವ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ನಾಯಕಿ ಪ್ರಧಾನ ಧಾರಾವಾಹಿ. ಹೆಸರಾಂತ ಹರಿಕಥಾ ವಿದ್ವಾನ್ ಗುರುರಾಜಲು ನಾಯ್ಡು ಮೊಮ್ಮಗಳು ಅಮೃತ ಕೂಡಾ ಅಭಿನಯಿಸುತ್ತಿದ್ದಾರೆ. ಮನೆಯ ಹಿರಿಯನ ಪಾತ್ರದಲ್ಲಿ ಶ್ರೀನಿವಾಸಮೂರ್ತಿ ಹಾಗೂ ಅವರ ಮಡದಿ ಪಾತ್ರದಲ್ಲಿ ಮಾಲತಿ ಸರ್ದೇಶ್ಪಾಂಡೆ ಅಭಿನಯಿಸುತ್ತಿದ್ದಾರೆ.
ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರಕ್ಕೂ ಮುನ್ನವೇ ಸ್ವಪ್ನಕೃಷ್ಣ ಗೃಹಲಕ್ಷ್ಮಿ, ಗಂಗ, ಸುಬ್ಬುಲಕ್ಷ್ಮಿ ಸಂಸಾರ ಧಾರಾವಾಹಿಗಳನ್ನು ನಿರ್ಮಿಸಿ ಹಾಗೂ ನಿರ್ದೇಶನ ಮಾಡಿ ಅನುಭವ ಉಳ್ಳವರು.