ಕರ್ನಾಟಕ

karnataka

ETV Bharat / sitara

ಸಿನಿಮಾ ಹಾಲ್​ ಒಪನ್ ಸದ್ಯಕ್ಕಿಲ್ಲ : ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ ಫಿಲ್ಮ್ ಚೇಂಬರ್

ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​ಗಳನ್ನ ತೆರೆಯೋದಕ್ಕೆ ಸಹ ಅನುಮತಿ ನೀಡಿಲ್ಲ. ಶೂಟಿಂಗ್ ಕೆಲಸಗಳು ಯಥಾಪ್ರಕಾರ ಮುಂದುವರೆಯುತ್ತಿವೆ. ಆದರೆ, 5 ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಸಿದ್ಧವಿದ್ದು, ಸರ್ಕಾರ ಚಿತ್ರಮಂದಿರಗಳನ್ನ ಒಪನ್ ಮಾಡದಿರುವುದಕ್ಕೆ ಚಿತ್ರತಂಡಕ್ಕೆ ನಿರಾಶೆ ಮೂಡಿಸಿದೆ..

By

Published : Jul 3, 2021, 9:13 PM IST

Cinema Hall
ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನ್​ಲಾಕ್ 3.0 ಮಾರ್ಗಸೂಚಿಯನ್ನು ಇಂದು ಬಿಡುಗಡೆಗೊಳಿಸಿದ್ದಾರೆ. ಆದರೆ, ಈ ಬಾರಿಯೂ ಸಹ ಅನ್​ಲಾಕ್ ಮಾರ್ಗಸೂಚಿಯಿಂದ ಚಿತ್ರರಂಗಕ್ಕೆ ಸಂತಸದ ಸುದ್ದಿ ಸಿಕ್ಕಿಲ್ಲ.

ಕೊರೊನಾದಿಂದಾಗಿ ಕಳೆದ ಎರಡುವರೆ ತಿಂಗಳಿಂದ ಕನ್ನಡ ಚಿತ್ರರಂಗ ಸಂಪೂರ್ಣ ಸ್ತಬ್ಧವಾಗಿದೆ. ಲಾಕ್​ಡೌನ್​ನಿಂದಾಗಿ ಚಿತ್ರಮಂದಿರದ ಕಾರ್ಮಿಕರು, ಸಿನಿಮಾ ತಂತ್ರಜ್ಞಾನರು ಸೇರಿದಂತೆ ಇಡೀ ಚಿತ್ರರಂಗ ಸಂಕಷ್ಟದಲ್ಲಿದೆ. ಯಾವಾಗ ಸಹಜ ಸ್ಥಿತಿಗೆ ಬರುತ್ತೆ ಅಂತಾ ಕನ್ನಡ ಚಿತ್ರರಂಗ ಎದುರು ನೋಡುತ್ತಿತ್ತು. ಆದರೆ, ಅನ್‌ಲಾಕ್ 3.0ನಲ್ಲಿ ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಕ್ಕೂ ಕೆಲ ನಿಯಮಗಳನ್ನು ಸಡಲಿಕೆ ಮಾಡಿ, ಕನ್ನಡ ಚಿತ್ರರಂಗಕ್ಕೆ ನಿರಾಶೆ ಮೂಡಿಸಿದೆ.

ಚಿತ್ರಮಂದಿರಗಳನ್ನು ತೆರೆಯುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡದಿರುವುದು ಚಿತ್ರರಂಗದವರ ಕೋಪಕ್ಕೆ ಕಾರಣವಾಗಿದೆ‌. ಸಿನಿಮಾ ಮಂದಿರ ತೆರೆಯಲು ಅನುಮತಿ ನೀಡದೇ ಹೊಸ ಮಾರ್ಗಸೂಚಿ ಹೊರಡಿಸಲು ನಿರ್ಧರಿಸಿದೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​ಗಳನ್ನ ತೆರೆಯೋದಕ್ಕೆ ಸಹ ಅನುಮತಿ ನೀಡಿಲ್ಲ. ಶೂಟಿಂಗ್ ಕೆಲಸಗಳು ಯಥಾಪ್ರಕಾರ ಮುಂದುವರೆಯುತ್ತಿವೆ. ಆದರೆ, 5 ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಸಿದ್ಧವಿದ್ದು, ಸರ್ಕಾರ ಚಿತ್ರಮಂದಿರಗಳನ್ನ ಒಪನ್ ಮಾಡದಿರುವುದಕ್ಕೆ ಚಿತ್ರತಂಡಕ್ಕೆ ನಿರಾಶೆ ಮೂಡಿಸಿದೆ.

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ಉದ್ಯಮಕ್ಕೆ ಅನುಮತಿ ನೀಡಿ, ಚಿತ್ರರಂಗಕ್ಕೆ ಮಾತ್ರ ವಿನಾಯಿತಿ ನೀಡಿಲ್ಲ. ಇದರಿಂದಾಗಿ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಪಕರಿಗೆ ತೊಂದರೆ ಆಗುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನು, ಈ ಕುರಿತು ಸೋಮವಾರ ಫಿಲ್ಮ್ ಚೇಂಬರ್​ನಲ್ಲಿ ಸಭೆ ಮಾಡಿ, ಸಿಎಂ ಯಡಿಯೂರಪ್ಪನವರಿಗೆ ಚಿತ್ರಮಂದಿರ ಓಪನ್ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಲಾಗುವುದು ಎಂದು ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ.

ABOUT THE AUTHOR

...view details