ಕರ್ನಾಟಕ

karnataka

ETV Bharat / sitara

ಪುತ್ತೂರಿನಲ್ಲಿ ಮನದಾಳ ತೆರೆದಿಟ್ಟ 'ಗಿಣಿರಾಮ' ರಿತ್ವಿಕ್ ಮಠದ್

ನನ್ನ ಸ್ನೇಹಿತ ರಫೀಕ್ ಪರ್ಲಡ್ಕ ಎಂಬವರಿಂದ ಮಹಾಲಿಂಗೇಶ್ವರ ದೇವರ ಬಗ್ಗೆ ತಿಳಿದ ಬಳಿಕ ಪ್ರತಿ ವರ್ಷವೂ ಇಲ್ಲಿಗೆ ಆಗಮಿಸುತ್ತಿದ್ದೇನೆ. ಯಾವಾಗ ಬಂದಾಗಲೂ ಇಲ್ಲಿಂದ ಧನಾತ್ಮಕವಾದ ಶಕ್ತಿಯೊಂದು ನನ್ನಲ್ಲಿ‌ ಅಡಕವಾಗುತ್ತದೆ ಎಂದು ನಟ ರಿತ್ವಿಕ್ ಮಠದ್ ಹೇಳಿದರು.

Ritvvikk Mathad
'ಗಿಣಿರಾಮ' ಖ್ಯಾತಿಯ ರಿತ್ವಿಕ್ ಮಠದ್

By

Published : Jul 11, 2021, 4:44 PM IST

ಪುತ್ತೂರು: ರಗಡ್ ಲುಕ್, 'ಮಾಸ್ತರ ಮಗಳೇ' ಎಂಬ ಗಡಸು ದನಿಯ ಡೈಲಾಗ್​​ನಿಂದಲೇ ಜನಪ್ರಿಯರಾದ 'ಗಿಣಿರಾಮ' ಧಾರವಾಹಿ‌ ಖ್ಯಾತಿಯ ಶಿವರಾಮ್ ಅಲಿಯಾಸ್ ರಿತ್ವಿಕ್ ಮಠದ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದಿದ್ದು, ಕ್ಯಾಮೆರಾ ಮುಂದೆ ಒಂದಿಷ್ಟು ಮನಬಿಚ್ಚಿ ಮಾತನಾಡಿದ್ದಾರೆ.

'ಗಿಣಿರಾಮ' ಖ್ಯಾತಿಯ ರಿತ್ವಿಕ್ ಮಠದ್

ಪುತ್ತೂರು ಮಹಾಲಿಂಗೇಶ್ವರ ದೇವರ ಭಕ್ತರಾಗಿರುವ ರಿತ್ವಿಕ್ ಮಠದ್ 4ನೇ ಬಾರಿ ಪುತ್ತೂರಿನೊಡೆಯ ಮಹಾಲಿಂಗೇಶ್ವರನ ದರ್ಶನ ಮಾಡಿದ್ದಾರಂತೆ. ಈ ಬಗ್ಗೆ ಮಾತನಾಡುತ್ತಾ, ನನ್ನ ಸ್ನೇಹಿತ ರಫೀಕ್ ಪರ್ಲಡ್ಕ ಎಂಬವರಿಂದ ಮಹಾಲಿಂಗೇಶ್ವರ ದೇವರ ಬಗ್ಗೆ ತಿಳಿದ ಬಳಿಕ ಪ್ರತೀ ವರ್ಷವೂ ಇಲ್ಲಿಗೆ ಆಗಮಿಸುತ್ತಿದ್ದೇನೆ. ಯಾವಾಗ ಬಂದಾಗಲೂ ಇಲ್ಲಿಂದ ಧನಾತ್ಮಕವಾದ ಶಕ್ತಿ ನನ್ನಲ್ಲಿ‌ ಅಡಕವಾಗುತ್ತದೆ. ಹಾಗಾಗಿ ಇಲ್ಲಿಗೆ ವರ್ಷಂಪ್ರತಿ ಬರುತ್ತೇನೆ. ಕಳೆದ ಎರಡು ದಿನಗಳಿಂದ ಪುತ್ತೂರಿನಲ್ಲಿಯೇ ಇದ್ದು ಇಲ್ಲೊಂದಿಷ್ಟು ಅಡ್ಡಾಡಿ ಸಾಹಿತಿ ಡಾ.ಶಿವರಾಮ ಕಾರಂತರ ಬಾಲವನ, ಕ್ಯಾಂಪ್ಕೊ ಚಾಕಲೇಟ್ ಫ್ಯಾಕ್ಟರಿ, ಪಂಚಮುಖಿ‌ ಆಂಜನೇಯ ದೇವಾಲಯದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ 'ಗಿಣಿರಾಮ' ಸೀರಿಯಲ್ ಡೈಲಾಗ್ ಅನ್ನು ಹೇಳಿದ ರಿತ್ವಿಕ್ ಮಠದ್ ಲಾಕ್ ಡೌನ್ ಸಂದರ್ಭದಲ್ಲಿ ಮಡದಿಗೆ ಮನೆಗೆಲಸದಲ್ಲಿ ಸಹಕಾರ ನೀಡುವುದರೊಂದಿಗೆ ಒಂದಷ್ಟು ಓದು, ಬರಹ, ಪೆಯಿಂಟಿಂಗ್ ಮಾಡುತ್ತಾ ಕಾಲ ಕಳೆದಿರುವುದನ್ನು ನೆನಪಿಸಿದರು‌. ಜತೆಗೆ ವಾರ ಪೂರ್ತಿ ಸೀರಿಯಲ್ ಕೆಲಸ ಇರೋದರಿಂದ ಮಡದಿಗೆ ಸಮಯ ಮೀಸಲಿರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವೀಕೆಂಡ್ ಸಮಯದಲ್ಲಾದರೂ ತಮಗೆ ರಜೆ ನೀಡಬೇಕೆಂದು ಈ ಮೂಲಕವೇ 'ಗಿಣಿರಾಮ' ಸೀರಿಯಲ್ ನಿರ್ದೇಶಕ, ನಿರ್ಮಾಪಕರಲ್ಲಿ ವಿನಂತಿಸಿದರು.

ಉತ್ತರ ಕನ್ನಡ ಭಾಷೆಯನ್ನು ಒಳಗೊಂಡಿರುವ ತಮ್ಮ 'ಗಿಣಿರಾಮ' ಸೀರಿಯಲ್​ಗೆ ಪುತ್ತೂರಿನಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ರಿತ್ವಿಕ್ ಸಂಭ್ರಮಪಟ್ಟರು. ಜತೆಗೆ ಬಿಗ್ ಬಾಸ್​​ಗೆ ಹೋಗಲು ಮನಸಿಲ್ಲ. ಚುನಾವಣಾ ಪ್ರಚಾರಕ್ಕೆ ಕರೆ ಬಂದಿತ್ತು. ಆದರೆ ಹೋಗಬೇಕೆಂದು ಅಂದುಕೊಂಡಿದ್ದರೂ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದುದರಿಂದ ಹೋಗಲು‌ ಸಾಧ್ಯವಾಗಿರಲಿಲ್ಲ ಎಂದರು.

ಇದನ್ನೂ ಓದಿ:ಕರ್ಫ್ಯೂ ಸಮಯದ ಸದುಪಯೋಗ: ಬರವಣಿಗೆಯಲ್ಲಿ ತೊಡಗಿಕೊಂಡ ನಟ ರಿತ್ವಿಕ್ ಮಠದ್

ABOUT THE AUTHOR

...view details