ತಮ್ಮ ವಿಶಿಷ್ಟ ನಟನೆಯ ಮೂಲಕ ಹಲವಾರು ಧಾರಾವಾಹಿ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ಧಾರವಾಡದ ಪ್ರತಿಭೆ ನಟ ರಾಜ್ ಕವಡೆನ್ನವರ್ ಸದ್ಯ 'ಗಿಣಿರಾಮ'ನ ಕತೆಯಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ನಿನಾಸಂದಲ್ಲಿ ನಟನೆ, ನಿರ್ದೇಶನ, ನೃತ್ಯದಲ್ಲಿ ತರಬೇತಿ ಪಡೆದು ರಂಗ ಕಲಾವಿದ, ನಾಟಕ ನಿರ್ದೇಶನ ಮಾಡಿದ ಅನುಭವ ಹೊಂದಿರುವ ರಾಜ್, ಪಾಪ ಪಾಂಡು, ಪಾರ್ವತಿ ಪರಮೇಶ್ವರ, ಪಂಚರಂಗಿ ಪಾವ್ ಪಾವ್, ಪದ್ಮಾವತಿ, ಸೇರಿದಂತೆ ಹಲವಾರು ದಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಐರಾವತ್' ಚಿತ್ರದಲ್ಲಿಯೂ ಕೂಡಾ ಪಾತ್ರ ನಿರ್ವಹಿಸಿದ್ದಾರೆ.
ಗಿರಿರಾಮ ಧಾರಾವಾಹಿಯಲ್ಲಿ ರಾಜ್ ಕವಡೆನ್ನವರ್ ಅಭಿನಯ ಮೈಗೂಡಿಸಿಕೊಂಡಿರುವ ರಾಜ್ 'ನೂರೊಂದು ನೆನಪು' ಚಿತ್ರದಲ್ಲಿ ಪುಲ್ ಪ್ರೇಮ್ ನಟನಾಗಿ ಆ್ಯಕ್ಟ್ ಮಾಡಿದ್ದಾರೆ. ನಟ ಚೇತನ್, ಮೇಘನಾ ರಾಜ್ ಮುಖ್ಯ ಭೂಮಿಯಲ್ಲಿ ಮೂಡಿ ಬಂದ ಚಿತ್ರದಲ್ಲಿ ಮೇಟನಾ ರಾಜ್ ಅಣ್ಣನಾಗಿ ಅಚ್ಚುಕಟ್ಟಾಗಿ ಪಾತ್ರ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ 'ಅಮೃತ್ ಅಪಾರ್ಟ್ಮೆಂಟ್' ಚಿತ್ರದಲ್ಲಿ ಖಾಕಿ ತೊಟ್ಟು ಖಡತ್ ಲುಕ್ನಲ್ಲಿ ತೆರೆ ಮೇಲೆ ಬರಲು ರೇಡಿಯಾಗಿದ್ದಾರೆ.
ನೂರೊಂದು ನೆನಪು ಚಿತ್ರದಲ್ಲಿ ರಾಜ್ ಕವಡೆನ್ನವರ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಗಸ್ಟ್ 17 ರಿಂದ ಪ್ರಸಾರವಾಗಲಿರುವ 'ಗಿಣಿರಾಮ' ಧಾರಾವಾಹಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ರಾಜ್ ಕಾಣಿಸಿಕೊಳ್ಳಲಿದ್ದಾರೆ.