ಕರ್ನಾಟಕ

karnataka

ETV Bharat / sitara

ಹುಡುಗಿಯರೇ, ನಿಮ್ಮನ್ನು ಗೌರವಿಸುವ ಹುಡುಗನನ್ನ ಪಡೆಯಿರಿ: ಕಾವ್ಯಗೌಡ - Kavya Gowda news

ಮೀರಾ ಮಾಧವ ಧಾರಾವಾಹಿಯ ಮೀರಾಳಾಗಿ ಕಿರುತೆರೆ ಪಯಣ ಶುರು ಮಾಡಿರುವ ಕಾವ್ಯ ಗೌಡ ಹುಡುಗಿಯರಿಗೆ ಸಂಬಂಧಿಸಿದಂತೆ ಉತ್ತಮ ಸಂದೇಶ ಪೋಸ್ಟ್​ ಮಾಡಿದ್ದಾರೆ. ಈ ಸಂದೇಶಕ್ಕೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ.

ಕಾವ್ಯಾ ಗೌಡ
ಕಾವ್ಯಾ ಗೌಡ

By

Published : Sep 10, 2020, 10:33 PM IST

ಮುದ್ದುಮುಖದಿಂದ ಗಮನ ಸೆಳೆಯುವ ಕಿರುತೆರೆ ನಟಿ ಕಾವ್ಯಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಹುಡುಗಿಯರಿಗೆ ಸಂಬಂಧಿಸಿದಂತೆ ಉತ್ತಮ ಸಂದೇಶ ಪೋಸ್ಟ್ ಮಾಡಿರುವ ಕಾವ್ಯಾ ಗೌಡ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ.

ಕಿರುತೆರೆ ನಟಿ ಕಾವ್ಯಾ ಗೌಡ

ಪ್ರೀತಿಯ ಹುಡುಗಿಯರೇ ನಿಮ್ಮ ಪ್ರೀತಿಯನ್ನು ಸಾಬೀತು ಮಾಡಲು ಬೆತ್ತಲಾಗಬೇಡಿ. ಡೇಟ್​​ಗೆ ತೆರಳುವುದು ಓಕೆ. ಆದರೆ ಮದುವೆಗಿಂತ ಮೊದಲು ಮಲಗಲು ಹೋಗಬೇಡಿ. ಸುರಕ್ಷತಾ ಪ್ಯಾಡ್​​ಗಳನ್ನು ಖರೀದಿಸುವ ಹುಡುಗನನ್ನು ಪಡೆಯಿರಿ , ಕಾಂಡೋಮ್ಸ್ ಖರೀದಿಸುವವನಲ್ಲ. ಮನೆಗೆ ಕರೆದುಕೊಂಡು ಹೋಗುವ ಹುಡುಗನನ್ನು ಪಡೆಯಿರಿ. ಹೋಟೆಲ್​ಗೆ ಕರೆದುಕೊಂಡು ಹೋಗುವವನಲ್ಲ. ನಿಮ್ಮ ಮುಟ್ಟಿನ ನೋವನ್ನು ಕೇಳುವ ಹುಡುಗನನ್ನು ಪಡೆಯಿರಿ. ನಿಮ್ಮ ಹೃದಯ ಹಾಗೂ ಆತ್ಮವನ್ನು ಆರಿಸುವ ಹುಡುಗನನ್ನು ಪಡೆಯಿರಿ. ದೇಹವನ್ನು ಆರಿಸುವವನಲ್ಲ" ಎಂದು ಕಾವ್ಯ ಗೌಡ ಬರೆದುಕೊಂಡಿದ್ದಾರೆ.

ಕಾವ್ಯಾ ಗೌಡ

ಜೊತೆಗೆ " ಗೌರವ ಎನ್ನುವುದು ಪ್ರೀತಿಯನ್ನು ತೋರಿಸುವ ಶ್ರೇಷ್ಟವಾದ ಭಾವನೆಗಳಲ್ಲೊಂದು‌. ನಿಜವಾದ ಗಂಡು ಯಾವ ಹೆಣ್ಣಿಗೆ ನೋವು ಕೊಡಲಾರನು. ಹೆಣ್ಣು ನಿಮಗೆ ಅಡುಗೆ ತಯಾರಿಸುವ ಹಾಗೂ ಬಟ್ಟೆ ತೊಳೆಯುವ ಗೃಹಿಣಿ ಮಾತ್ರವಲ್ಲ, ಅವಳು ಮನೆಯನ್ನು ರೂಪಿಸುವವಳು ಕುಟುಂಬವನ್ನು ಒಟ್ಟಿಗೆ ಇಟ್ಟುಕೊಂಡಿದ್ದಾಳೆ. ಮತ್ತು ಮನೆಗೆ ಬಂದ ನಂತರ ಎಲ್ಲವೂ ಪರಿಪೂರ್ಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಮಹಿಳೆಯ ಮೇಲೆ ಗೌರವ ಪುರುಷ ತೋರಿಸುವ ಉತ್ತಮ ಉಡುಗೊರೆಗಳಲ್ಲೊಂದು" ಎಂದಿದ್ದಾರೆ ಕಾವ್ಯಾ ಗೌಡ.

ಕಿರುತೆರೆ ನಟಿ ಕಾವ್ಯಾ ಗೌಡ

ಮೀರಾ ಮಾಧವ ಧಾರಾವಾಹಿಯ ಮೀರಾಳಾಗಿ ಕಿರುತೆರೆ ಪಯಣ ಶುರು ಮಾಡಿರುವ ಕಾವ್ಯ ಗೌಡ ಮುಂದೆ ಗಾಂಧಾರಿ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ಮಿಂಚಿದರು. ತದ ನಂತರ ರಾಧ ರಮಣ ಧಾರಾವಾಹಿಯ ಆರಾಧನಾ ಆಗಿ ಮನೆ ಮಾತಾಗಿರುವ ಕಾವ್ಯ ಗೌಡ ಬಕಾಸುರ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಯಲ್ಲೂ ಕಮಾಲ್ ಮಾಡಿದ್ದಾರೆ.

ಕಾವ್ಯಾ ಗೌಡ

ABOUT THE AUTHOR

...view details