ವಿವಿಧ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ಸೆಳೆದಿರುವ ವಾಹಿನಿಗಳ ಪೈಕಿ ಜೀ ಕನ್ನಡ ಕೂಡಾ ಒಂದು. ವಿಭಿನ್ನ ಕಥೆಗಳ ಮೂಲಕ ಗಮನ ಸೆಳೆಯುವ ಧಾರಾವಾಹಿಗಳು ಒಂದೆಡೆಯಾದರೆ, ವಾರಾಂತ್ಯದಲ್ಲಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುವ ಧಾರಾವಾಹಿಗಳು ಇನ್ನೊಂದೆಡೆ.
ನೀವು ಅವಳಿ-ಜವಳಿಗಳಾಗಿದ್ದಲ್ಲಿ ನೀವೂ ಕೂಡಾ 'ಜೀನ್ಸ್'ನಲ್ಲಿ ಭಾಗವಹಿಸಬಹುದು.. - ಶೀಘ್ರದಲ್ಲೇ ಪ್ರಸಾರವಾಗಲಿದೆ ಜೀನ್ಸ್ ರಿಯಾಲಿಟಿ ಶೋ
ಒಂದೆರಡು ತಿಂಗಳ ಹಿಂದೆಯೇ 'ಜೀನ್ಸ್' ಕಾರ್ಯಕ್ರಮದ ಅದ್ಭುತ ಪ್ರೊಮೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಅದು ಯಾವಾಗ ಪ್ರಸಾರವಾಗಲಿದೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಶೋ ಆಡಿಶನ್ ಕೂಡಾ ಶೀಘ್ರದಲ್ಲಿ ನಡೆಯಲಿದೆ.
ಈ ಧಾರಾವಾಹಿಗಳ ಸಾಲಿಗೆ ಇದೀಗ 'ಜೀನ್ಸ್'ರಿಯಾಲಿಟಿ ಶೋ ಕೂಡಾ ಸೇರಿದೆ. ಒಂದೆರಡು ತಿಂಗಳ ಹಿಂದೆಯೇ'ಜೀನ್ಸ್' ಕಾರ್ಯಕ್ರಮದ ಅದ್ಭುತ ಪ್ರೊಮೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತ್ತು. ಅದು ಯಾವಾಗ ಪ್ರಸಾರವಾಗಲಿದೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಶೋ ಆಡಿಶನ್ ಕೂಡಾ ಶೀಘ್ರದಲ್ಲಿ ನಡೆಯಲಿದೆ. ಆದರೆ, ಈ ಕಾರ್ಯಕ್ರಮ ಕೇವಲ ಅವಳಿ ಜವಳಿಗಳಿಗೆ ಮೀಸಲಾಗಿದೆ.
ನೀವು ಅವಳಿ ಜವಳಿಗಳೇ? ಅವನು ಯಾರು, ಇವನು ಯಾರು? ಅವಳಾ ಇವಳಾ ಎಂಬ ಕನ್ಫೂಶನ್ ನಿಮ್ಮನ್ನು ನೋಡಿದವರಿಗೆ ಅಗುತ್ತದೆಯೇ? ಅದು ಇರಲಿ ಬಿಡಿ, ಈಗ ನೀವು ಗಮನ ಹರಿಸಬೇಕಾದದ್ದು ಒಂದು ವೇಳೆ ನೀವು ಅವಳಿ ಜವಳಿಗಳಾಗಿದ್ದಲ್ಲಿ ನೀವೂ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮ ನಂಬರನ್ನು 9538868274 ಈ ಮೊಬೈಲ್ ನಂಬರ್‌ಗೆ ವಾಟ್ಸ್ಆ್ಯಪ್ ಮಾಡಿದರೆ ಸಾಕು. ಫೋಟೋದೊಂದಿಗೆ ಸ್ವವಿವರ ಕಡ್ಡಾಯವಾಗಿ ಕೂಡಾ ಇರಬೇಕು.