ಕರ್ನಾಟಕ

karnataka

ETV Bharat / sitara

ಬಿಗ್​ ಬಾಸ್​ ಮನೆಗೆ ಗುಂಡಮ್ಮ ಗೀತಾ ಭಾರತಿ.. ಒಳಹೋಗೋ ಮುನ್ನ ಎಫ್‌ಬಿನಲ್ಲಿ ಹೀಗೆ ಬರೆದಿದ್ದಾರೆ..

ಬಣ್ಣದ ಬದುಕಿನಗಲಕ್ಕೂ ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ 'ಧನ್ಯವಾದ' ಎಂಬ ಪದ ನಗಣ್ಯ. ಆದರೂ ನಿಮ್ಮ ಈ ಬೆಂಬಲ ನನ್ನ ಕಿರುತೆರೆಯ ಪಥದಲ್ಲಿ ಒಂದು ಮೈಲಿಗಲ್ಲು. ಅದಕ್ಕೆ ನಿಮಗೆ ನಾನು ಧನ್ನವಾದಗಳ ಸುರಿಮಳೆಯನ್ನಿಯಬೇಕು..

By

Published : Mar 1, 2021, 9:12 AM IST

Geetha barathi bhat
ಗೀತಾ ಭಾರತಿ

ಬ್ರಹ್ಮಗಂಟು ಧಾರಾವಾಹಿಯ ಗೀತಾಭಾರತಿ ಭಟ್ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಗೀತಾ ಭಾರತಿ ಭಟ್ ಅವರು 9ನೇ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟಿದ್ದು, ಇವರನ್ನು ಬೀಳ್ಗೊಡಲು ಅಮ್ಮ, ಅಪ್ಪ ಮತ್ತು ತಂಗಿ ಬಂದಿದ್ದರು.

ಮನೆಯೊಳಗೆ ಕಾಲಿಡುವ ಮುನ್ನ ಗೀತಾ ಭಾರತಿ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್ ಒಂದನ್ನು ಅಪ್​ಲೋಡ್ ಮಾಡಿದ್ದು ಜನರ ಬೆಂಬಲ ಕೋರಿದ್ದಾರೆ.

ಗೀತಾ ಭಾರತಿ ಫೇಸ್​ಬುಕ್​ ಬರಹ

"ಬಣ್ಣದ ಬದುಕಿನಗಲಕ್ಕೂ ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ 'ಧನ್ಯವಾದ' ಎಂಬ ಪದ ನಗಣ್ಯ. ಆದರೂ ನಿಮ್ಮ ಈ ಬೆಂಬಲ ನನ್ನ ಕಿರುತೆರೆಯ ಪಥದಲ್ಲಿ ಒಂದು ಮೈಲಿಗಲ್ಲು. ಅದಕ್ಕೆ ನಿಮಗೆ ನಾನು ಧನ್ನವಾದಗಳ ಸುರಿಮಳೆಯನ್ನಿಯಬೇಕು.

ನಿಮ್ಮ ಈ ಪ್ರೀತಿ, ಕಾಳಜಿ ಮತ್ತು ಬೆಂಬಲವನ್ನು ಅರಸುತ್ತಾ, ಬದುಕಿನ ಹೊಸ ಪಥ ಬಿಗ್​ಬಾಸ್​ನಲ್ಲೂ ಕಾಲಿರಿಸುತ್ತಿದ್ದೇನೆ. ಅಲ್ಲಿಯು ಕೂಡ ನಿಮ್ಮ ಈ ಬೆಂಬಲ ಪ್ರೀತಿಯನ್ನು ಕೊಟ್ಟು ನನ್ನನ್ನು ಕಾಯುವಿರೆಂದು ಆಶಿಸುವೆ. ತುಂಬು ಹೃದಯದಿಂದ ಎಂದೆದಿಗೂ ನಿಮ್ಮ ಈ ವಾತ್ಸಲ್ಯ ಭರಿತ ಪ್ರೀತಿಯನ್ನು ನಾನು ವಂದಿಸುತ್ತೇನೆ - ನಿಮ್ಮ ಗೀತಾ ಭಾರತಿ ಭಟ್" ಎಂದು ಅವರು ಬರೆದುಕೊಂಡಿದ್ದಾರೆ.

ABOUT THE AUTHOR

...view details