ಕರ್ನಾಟಕ

karnataka

ETV Bharat / sitara

ಕನ್ನಡ ಕಿರುತೆರೆಯಲ್ಲಿ ನಿಮ್ಮನ್ನು ರಂಜಿಸಲು ಬರ್ತಿದ್ದಾರೆ 'ಗೀತ ಗೋವಿಂದಂ' - Selfie shurumadida love story

ಟಾಲಿವುಡ್​​​​ನಲ್ಲಿ ದಾಖಲೆ ನಿರ್ಮಿಸಿದ್ದ 'ಗೀತ ಗೋವಿಂದಂ' ಸಿನಿಮಾ ಕನ್ನಡಕ್ಕೆ ಡಬ್ ಆಗಿದೆ. ಜುಲೈ 26 ರಂದು ಸಂಜೆ 5 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸೆಲ್ಫಿ ಶುರುಮಾಡಿದ ಲವ್ ಸ್ಟೋರಿ' ಹೆಸರಿನಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

Selfie shurumadida love story
ಗೀತ ಗೋವಿಂದಂ

By

Published : Jul 23, 2020, 1:35 PM IST

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ 'ಗೀತ ಗೋವಿಂದಂ' ಸಿನಿಮಾ ಕೇಳಿದರೆ ಆ ಸಿನಿಮಾ ಹಾಡುಗಳನ್ನು ನಮಗೇ ಗೊತ್ತಿಲ್ಲದಂತೆ ಗುನುಗುವುದು ಖಂಡಿತ. ಸಿನಿಮಾ ಹಾಡುಗಳು, ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕೆಮಿಸ್ಟ್ರಿ ಎಲ್ಲವೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು.

'ಸೆಲ್ಫಿ ಶುರುಮಾಡಿದ ಲವ್ ಸ್ಟೋರಿ'

ಇದೀಗ 'ಗೀತ ಗೋವಿಂದಂ' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ. ಅದೂ ಕೂಡಾ 'ಸೆಲ್ಫಿ ಶುರುಮಾಡಿದ ಲವ್ ಸ್ಟೋರಿ' ಹೆಸರಿನಲ್ಲಿ. ತೆಲುಗಿನ ಈ ಬ್ಲಾಕ್​​​ಬಸ್ಟರ್ ಸಿನಿಮಾವನ್ನು ನೀವು ಇನ್ನೂ ನೋಡಿಲ್ಲವಾದರೆ ಇದೀಗ ಮನೆಯಲ್ಲೇ ಕುಳಿತು ಎಂಜಾಯ್ ಮಾಡಬಹುದು. ಈ ಮೂಲಕ ತೆಲುಗು ಚಿತ್ರರಂಗದ ಈ ಮುದ್ದಾದ ಜೋಡಿ ಕನ್ನಡಿಗರಿಗೂ ಮನರಂಜನೆ ನೀಡಲು ಮುಂದಾಗಿದೆ.

ಕನ್ನಡಕ್ಕೆ ಡಬ್ ಆಯ್ತು 'ಗೀತ ಗೋವಿಂದಂ'

ಇದೇ ಭಾನುವಾರ, ಅಂದರೆ ಜುಲೈ 26 ರಂದು ಸಂಜೆ 5 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೆಲ್ಫಿ ಶುರುಮಾಡಿದ ಲವ್ ಸ್ಟೋರಿ ಪ್ರಸಾರವಾಗಲಿದೆ. ಗೀತಾ ಆರ್ಟ್ಸ್​​ ಬ್ಯಾನರ್​​​ ಮೂಲಕ ಅಲ್ಲು ಅರವಿಂದ್ ನಿರ್ಮಾಣದ ಈ ಚಿತ್ರವನ್ನು ಪರಶುರಾಮ್ ನಿರ್ದೇಶಿಸಿದ್ದರು. 15 ಆಗಸ್ಟ್ 2018 ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾ ಬಾಕ್ಸ್​ ಆಫೀಸಿನಲ್ಲೂ ಒಳ್ಳೆ ಕಲೆಕ್ಷನ್ ಮಾಡಿ ಟಾಲಿವುಡ್​​ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. ಬಿಡುಗಡೆಯಾದ 12 ದಿನಗಳಲ್ಲಿ 102 ಕೋಟಿ ರೂಪಾಯಿ ಲಾಭ ಗಳಿಸಿತ್ತು.

ABOUT THE AUTHOR

...view details