ಕರ್ನಾಟಕ

karnataka

ETV Bharat / sitara

‘ಪಾರು’ ಧಾರಾವಾಹಿಯನ್ನು ಹಿಂದಿಕ್ಕಿ ಮತ್ತೆ ನಂ.1 ಸ್ಥಾನ ಪಡೆದ ‘ಗಟ್ಟಿಮೇಳ’ - ನಾಯಕನಾಗಿ ರಕ್ಷ್, ನಾಯಕಿಯಾಗಿ ನಿಶಾ ರವಿಚಂದ್ರನ್

ಸದ್ಯ ಎಲ್ಲಾ ವಾಹಿನಿಗಳಲ್ಲಿ ಚಿತ್ರೀಕರಣಗೊಂಡಿರುವ ಸಂಚಿಕೆಗಳು ಪ್ರಸಾರವಾಗುತ್ತಿವೆ. ಮುಂದಿನ ಸೋಮವಾರದಿಂದ ಹೊಸ ಕಂತುಗಳು ಪ್ರಸಾರವಾಗುತ್ತದೆಯಾ ಅಥವಾ ಕಳೆದ ವರ್ಷದಂತೆ ಈ ಬಾರಿಯೂ ಹಳೆಯ ಸಂಚಿಕೆಗಳನ್ನು ಪ್ರಸಾರ ಮಾಡುತ್ತಾರಾ ಕಾದು ನೋಡಬೇಕಿದೆ..

gattimela serial beat to paru kannada serial
‘ಗಟ್ಟಿಮೇಳ’

By

Published : May 22, 2021, 9:19 PM IST

Updated : May 24, 2021, 9:18 PM IST

ಬೆಂಗಳೂರು :ಕಳೆದ ವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಪಾರು’ ಧಾರವಾಹಿ ಟಾಪ್ ಒನ್ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ‘ಪಾರು’ ಧಾರಾವಾಹಿಯನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿರುವುದು ಅದೇ ವಾಹಿನಿಯಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ’ ಧಾರಾವಾಹಿ.

ಓದಿ: ದಿ ಇಮ್ಮಾರ್ಟಲ್ ಅಶ್ವತ್ಥಾನ ಮಾ : ಚಿತ್ರೀಕರಣಕ್ಕೆ ಸಿದ್ಧರಾಗುತ್ತಿರುವ ವಿಕ್ಕಿ ಮತ್ತು ಸಾರಾ

ಈ ವಾರ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯಾಳ ಹುಟ್ಟುಹಬ್ಬವನ್ನು ನಾಯಕ ವೇದಾಂತ್ ಸರಳವಾಗಿಯಾದರೂ, ಅದ್ಭುತವಾಗಿ ಆಚರಿಸಿದ್ದನು.

‘ಪಾರು’ ಧಾರಾವಾಹಿ

ನಾಯಕಿಗೆ ಹತ್ತಾರೂ ಉಡುಗೊರೆಗಳ ಜೊತೆಗೆ ಮನೆಯವರು ಕಳುಹಿಸಿರುವ ಸಂದೇಶಗಳನ್ನು ಅಮೂಲ್ಯಾಗೆ ತೋರಿಸುತ್ತಾ, ಆಕೆಗೆ ಮೇಲಿಂದ ಮೇಲೆ ಸರ್ ಪ್ರೈಸ್ ನೀಡುವ ವೇದಾಂತ್ ನೋಡಿ ಅಮೂಲ್ಯಾ ಮನಸೋತಿದ್ದಳು.

‘ಪಾರು’ ಧಾರಾವಾಹಿ

ಈಗ ಸದ್ಯದ ಟಿಆರ್​ಪಿ ನೋಡಿದರೆ ಪ್ರೇಕ್ಷಕರು ಕೂಡ ಅಮೂಲ್ಯಾಳ ಹುಟ್ಟುಹಬ್ಬದ ಆಚರಣೆಯನ್ನು ನೋಡಿ ಮನಸೋತಿದ್ದಾರೆ. ಸದ್ಯ ಟಾಪ್ ಒನ್ ಸ್ಥಾನದಲ್ಲಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕನಾಗಿ ರಕ್ಷ್, ನಾಯಕಿಯಾಗಿ ನಿಶಾ ರವಿಚಂದ್ರನ್ ನಟಿಸಿದ್ದಾರೆ.

ಪ್ರತಿ ಬಾರಿ ವೀಕ್ಷಕರಿಗಾಗಿ ಒಂದಲ್ಲಾ ಒಂದು ವಿಶೇಷತೆಗಳನ್ನು ಹೊತ್ತುತರುತ್ತಿರುವ ಗಟ್ಟಿಮೇಳ ಧಾರಾವಾಹಿ ತಂಡ, ಪ್ರೇಮಿಗಳ ದಿನಾಚರಣೆಯ ವಿಶೇಷ ಸಂಚಿಕೆಯನ್ನು ತಾಜ್ ಮಹಲ್ ಎದುರು ಚಿತ್ರೀಕರಿಸಿತ್ತು.

ಟಾಪ್ 2ನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಂಗಳ ಗೌರಿ ಮದುವೆ, ಟಾಪ್ 3ನೇ ಸ್ಥಾನದಲ್ಲಿ ಪಾರು, ಟಾಪ್ 4 ಸ್ಥಾನದಲ್ಲಿ ಸತ್ಯ, ಟಾಪ್ 5ನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಇದೆ. ಲಾಕ್​ಡೌನ್ ಆಗಿರುವ ಕಾರಣ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತಗೊಂಡಿದೆ.

ಸದ್ಯ ಎಲ್ಲಾ ವಾಹಿನಿಗಳಲ್ಲಿ ಚಿತ್ರೀಕರಣಗೊಂಡಿರುವ ಸಂಚಿಕೆಗಳು ಪ್ರಸಾರವಾಗುತ್ತಿವೆ. ಮುಂದಿನ ಸೋಮವಾರದಿಂದ ಹೊಸ ಕಂತುಗಳು ಪ್ರಸಾರವಾಗುತ್ತದೆಯಾ ಅಥವಾ ಕಳೆದ ವರ್ಷದಂತೆ ಈ ಬಾರಿಯೂ ಹಳೆಯ ಸಂಚಿಕೆಗಳನ್ನು ಪ್ರಸಾರ ಮಾಡುತ್ತಾರಾ ಕಾದು ನೋಡಬೇಕಿದೆ.

Last Updated : May 24, 2021, 9:18 PM IST

ABOUT THE AUTHOR

...view details