ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನ ತನಿಖೆ ನಡೆಯುತ್ತಿದೆ. ಈ ನಡುವೆ ಒಬ್ಬೊಬ್ಬರು ಕಲಾವಿದರು ಒಂದೊಂದು ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಿರುತೆರೆ ನಟ ರಕ್ಷ್ ಕೂಡಾ ಈ ವಿಚಾರವಾಗಿ ಮಾತನಾಡಿದ್ದಾರೆ.
ಒಬ್ಬರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ದೂಷಿಸುವುದು ತಪ್ಪು...ರಕ್ಷ್ - ಗಟ್ಟಿಮೇಳ ಖ್ಯಾತಿಯ ರಕ್ಷ್
ಕನ್ನಡ ಚಿತ್ರರಂಗದ ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಿರುತೆರೆ ನಟ ರಕ್ಷ್, ದಯವಿಟ್ಟು ಕಲಾವಿದರ ಬಗ್ಗೆ ಏನೂ ತಿಳಿಯದೆ ತೀರ್ಮಾನಕ್ಕೆ ಬರಬೇಡಿ ಎಂದು ಮನವಿ ಮಾಡಿದ್ದಾರೆ.
'ಕಲಾವಿದರ ಬಗ್ಗೆ ಏನೂ ಅರಿಯದೆ ಯಾವ ತೀರ್ಮಾನಕ್ಕೂ ಬರಬೇಡಿ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಬಗ್ಗೆ ಎಲ್ಲರೂ ಮಾತನಾಡುವುದನ್ನು ಕೇಳಿ ಬೇಸರವಾಗುತ್ತಿದೆ. ದಯವಿಟ್ಟು ಜವಾಬ್ದಾರಿಯುತವಾಗಿ ವರ್ತಿಸಿ, ಜಾಗರೂಕತೆಯಿಂದ ಇರಿ. ಅಪಾಯಕಾರಿ ಚಟುವಟಿಕೆಗಳಿಂದ ದೂರವಿರಿ. ಐದು ಬೆರಳುಗಳು ಒಂದೇ ರೀತಿ ಇರಲಾರದು. ಕಲಾವಿದರು ಜೀವನದಲ್ಲಿ ಮೈಲಿಗಲ್ಲು ಸಾಧಿಸೋಕೆ ಒಂದೊಂದು ಸೆಕೆಂಡ್ ಕಷ್ಟಪಡುತ್ತಾರೆ ಎಂದಿದ್ದಾರೆ. ಒಬ್ಬರ ಬಗ್ಗೆ ಏನೂ ಸರಿಯಾಗಿ ತಿಳಿದುಕೊಳ್ಳದೆ ಅವರ ನಡತೆಯನ್ನು ನಿರ್ಧರಿಸುವಂತ ಕೆಲಸ ಮಾಡಬೇಡಿ' ಎಂದು ರಕ್ಷ್ ಮನವಿ ಮಾಡಿದ್ದಾರೆ.
ಕಿರುತೆರೆ ನಟ ಚಂದನ್ ಕುಮಾರ್, ಆಶಿತಾ ಚಂದಪ್ಪ ಹಾಗೂ ಇನ್ನಿತರರು ಕೂಡಾ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗವನ್ನು ದೂಷಿಸಬೇಡಿ ಎಂದು ಮನವಿ ಮಾಡಿದ್ದರು.