ಕಿರುತೆರೆಯ ರೌಡಿಬೇಬಿ ಅಲಿಯಾಸ್ 'ಗಟ್ಟಿಮೇಳ'ದ ಅಮೂಲ್ಯ, ಧಾರಾವಾಹಿಪ್ರಿಯರಿಗೆ ಚೆನ್ನಾಗಿ ಪರಿಚಯವಿರುತ್ತಾರೆ. ಇಂದು ಈ ನಟಿಗೆ ಹುಟ್ಟುಹಬ್ಬದ ಸಂಭ್ರಮ. ಅಮೂಲ್ಯ ಆಗಿ ಖ್ಯಾತರಾಗಿರುವ ಇವರ ನಿಜ ಹೆಸರು ನಿಶಾ ರವಿಕೃಷ್ಣನ್. ಒಂದೆಡೆ ಕುಟುಂಬದವರು ಅಮೂಲ್ಯ ಹುಟ್ಟುಹಬ್ಬ ಆಚರಿಸಿದ್ದರೆ, ಧಾರಾವಾಹಿ ತಂಡ ಕೂಡಾ ಅವರ ಬರ್ತಡೇಯನ್ನು ಸೆಟ್ನಲ್ಲೇ ಆಚರಿಸಿದೆ.
ಗಟ್ಟಿಮೇಳದ ನಟಿಗೆ ಬರ್ತ್ಡೇ ಸಂಭ್ರಮ ಚಿಂಟು ಟಿವಿಯಲ್ಲಿ ನಿರೂಪಣೆ ಮಾಡುವ ಮೂಲಕ ನಿಶಾ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ನಂತರ ಅವರಿಗೆ ಆ್ಯಕ್ಟಿಂಗ್ನಲ್ಲಿ ಆಸಕ್ತಿ ಬಂದಿದ್ದರಿಂದ ಸ್ಟಾರ್ ಸುವರ್ಣ ವಾಹಿನಿಯ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಧಾರಾವಾಹಿಯಲ್ಲಿ ಪ್ರಪಂಚಕ್ಕೆ ಕಾಲಿಟ್ಟರು. ಮೊದಲ ಧಾರಾವಾಹಿಯಲ್ಲಿ ನಿಶಾ ಪೋಷಕ ನಟಿಯಾಗಿ ಅಭಿನಯಿಸಿದರೂ ವೀಕ್ಷಕರ ಮೆಚ್ಚುಗೆ ಪಡೆದರು.
'ಗಟ್ಟಿಮೇಳ' ಧಾರಾವಾಹಿ ನಿಶಾ ಅವರಿಗೆ ಹೆಸರು ತಂದುಕೊಡ್ತು. ಅಮೂಲ್ಯ ಪಾತ್ರದಲ್ಲಿ ನಟಿಸುತ್ತಿರುವ ಆವರ ಆ್ಯಕ್ಟಿಂಗ್ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ 'ಫೇವರೆಟ್ ಆ್ಯಕ್ಟರ್ ಇನ್ ಲೀಡ್ ರೋಲ್ ಫೀಮೇಲ್' ಪ್ರಶಸ್ತಿ ಪಡೆದದ್ದೇ ಇದಕ್ಕೆ ಸಾಕ್ಷಿ. ರವಿಕೃಷ್ಣನ್ ಮತ್ತು ಉಷಾ ದಂಪತಿಯ ಮುದ್ದಿನ ಮಗಳಾದ ನಿಶಾ ಇಂದು ಬಣ್ಣದ ಜಗತ್ತಿನಲ್ಲಿ ಕಂಗೊಳಿಸುತ್ತಿದ್ದಾರೆ ಎಂದರೆ ಅದಕ್ಕೆ ಅಪ್ಪನೇ ಕಾರಣ.
ನಿಶಾ ಬಣ್ಣದ ಲೋಕಕ್ಕೆ ಬರಲು ಅವರ ತಂದೆಯೇ ಕಾರಣ ನಿಶಾ ತಂದೆ ರವಿಕೃಷ್ಣನ್ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದದ್ದೇ ನಿಶಾಗೆ ಪ್ರೇರಣೆ. ಮಂಡ್ಯ ರಮೇಶ್ ಅವರ ತಂಡದಲ್ಲಿ ಒಬ್ಬರಾದ ರವಿಕೃಷ್ಣನ್ ಅವರು ಒಂದಷ್ಟು ವೇದಿಕೆಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದರು. ಇದರಿಂದ ಪ್ರೇರಣೆ ಪಡೆದ ಮಗಳು ಕೂಡಾ ನಿರೂಪಕಿಯಾಗಿ ಕಿರುತೆರೆಗೆ ಬಂದು ಇಂದು ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡ ಕಿರುತೆರೆಯ ರೌಡಿಬೇಬಿಯಾಗಿ ವೀಕ್ಷಕರ ಮನ ಕದ್ದಿರುವ ಬಜಾರಿ ಬೆಡಗಿಗೆ ಹುಟ್ಟುಹಬ್ಬದ ಶುಭಾಶಯಗಳು.
ಅಮೂಲ್ಯ ಎಂದೇ ಫೇಮಸ್ ಆಗಿರುವ ನಿಶಾ