ಕಳೆದ ಒಂದು ತಿಂಗಳಿಂದ ಎಲ್ಲರೂ ಹೊರಗೆ ಎಲ್ಲೂ ಹೋಗದೆ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್, ಮೆಟ್ರೋ, ಬಸ್ ವ್ಯವಸ್ಥೆ, ಹೋಟೆಲ್ ಎಲ್ಲವೂ ಬಂದ್ ಆಗಿದೆ. ಇದರೊಂದಿಗೆ ಜಿಮ್ ಕೂಡಾ ಬಂದ್ ಆಗಿರುವುದರಿಂದ ಯಾರಿಗೂ ವರ್ಕೌಟ್ ಮಾಡಲು ಹೊರಗೆ ಹೋಗಲಾಗುತ್ತಿಲ್ಲ.
ಅಭಿಮಾನಿಗಳಿಗೆ ಯೋಗಾಸನ ಪಾಠ ಮಾಡುತ್ತಿರುವ ಮಗಳು ಜಾನಕಿ...! - Magalu janaki fame Ganavi Fitness mantra
ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲೆಡೆ ಜಿಮ್ ಬಂದ್ ಆಗಿದ್ದು ಎಲ್ಲರೂ ಮನೆಯಲ್ಲೇ ವ್ಯಾಯಾಮದ ಮೊರೆ ಹೋಗಿದ್ದಾರೆ. 'ಮಗಳು ಜಾನಕಿ' ಖ್ಯಾತಿಯ ಗಾನವಿ ಲಕ್ಷ್ಮಣ್ ಕೂಡಾ ಯೋಗಾಸನ ಮಾಡುತ್ತಿದ್ದು ಆ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಫಿಟ್ ಆಗಿರಬೇಕು ಎಂದರೆ ದೇಹಕ್ಕೆ ವ್ಯಾಯಾಮ ಅಗತ್ಯ. ವ್ಯಾಯಾಮ ಬೇಕು ಎಂದರೆ ಜಿಮ್ಗೆ ಹೋಗಬೇಕು ಎಂದೇನಿಲ್ಲ. ಜಿಮ್ ಬಂದ್ ಆದರೇನಂತೆ ಮನೆಯಲ್ಲೇ ಆರಾಮವಾಗಿ ವರ್ಕೌಟ್ ಮಾಡಬಹುದು ಎನ್ನುತ್ತಾರೆ ಗಾನವಿ ಲಕ್ಷ್ಮಣ್, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಾಯಕಿ ಜಾನಕಿ ಆಗಿ ಮನೆ ಮಾತಾಗಿರುವ ಚಿಕ್ಕಮಗಳೂರಿನ ಚೆಲುವೆ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಯೋಗದ ಮೊರೆ ಹೋಗಿದ್ದಾರೆ. ಯೋಗಾಸನದಿಂದ ನಾವು ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಫಿಟ್ ಆಗಿರಬಹುದು ಎಂದು ಹೇಳುವ ಗಾನವಿ ಲಕ್ಷ್ಮಣ್, ಸೂರ್ಯ ಸಮಸ್ಕಾರ ಮಾಡುತ್ತಿರುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯ ನಮಸ್ಕಾರ ಮಾಡುವಾಗ ಸರಿಯಾಗಿ ಉಸಿರಾಡಬೇಕು. ಇದು ಬಹಳ ಮುಖ್ಯ ಎಂಬುದನ್ನು ಗಾನವಿ ತಮ್ಮ ವಿಡಿಯೋದಲ್ಲಿ ತೋರಿಸಿಕೊಟ್ಟಿದ್ದಾರೆ.