ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕನ್ನಡ ಚಿತ್ರರಂಗದಕ್ಕೆ ಬರೋದು ಹೊಸತೇನಲ್ಲ. ಸದ್ಯ ಇಲ್ಲೊಂದು ಐಟಿ ಉದ್ಯೋಗಿಗಳ ತಂಡ ಸೈನ್ಸ್ ಫಿಕ್ಷನ್ ಕಥೆ ಆಧರಿಸಿರುವ 'ಕಾನ್ಸೀಲಿಯಂ' ಎಂಬ ಸಿನಿಮಾ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದೆ.
ಈಗಾಗಲೇ ಟ್ರೈಲರ್ ಹಾಗೂ ಪೋಸ್ಟರ್ನಿಂದಲೇ ಗಮನ ಸೆಳೆಯುತ್ತಿರುವ ಕಾನ್ಸೀಲಿಯಂ ಸಿನಿಮಾದ ಟ್ರೈಲರ್, ಇಂಗ್ಲಿಷ್ ಸಿನಿಮಾದಂತೆ ಇದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ವೈಜ್ಞಾನಿಕ ಕಾಲ್ಪನಿಕ ಸಿನಿಮಾ ಅಂದ್ರೆ ತಪ್ಪಿಲ್ಲ. ಐಟಿ ಉದ್ಯೋಗಳು ನಿರ್ಮಿಸುತ್ತಿರುವ ಈ ಸಿನಿಮಾ ಡಿಎನ್ಎ, ಸ್ಪೇಸ್, ಟೆಕ್ನಾಲಜಿ ಎಂಬ ಹಲವಾರು ವಿಷಯಗಳನ್ನ ಒಳಗೊಂಡಿದೆ.
ಯುವ ನಿರ್ದೇಶಕ ಸಮರ್ಥ್ ಚೊಚ್ಚಲ ಸಿನಿಮಾದಲ್ಲಿ ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೇಳಲು ಹೊರಟ್ಟಿದ್ದಾರೆ. ಹಲವಾರು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಅನುಭವ ಇರುವ, ಮಂಡ್ಯದ ಪ್ರತಿಭೆ. ಸಮರ್ಥ್ ಈ ಚಿತ್ರದ ನಿರ್ದೇಶನದ ಜತೆಗೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಕಾನ್ಸೀಲಿಯಂ ಅನ್ನೋದು ಲ್ಯಾಟಿನ್ ಪದ. ಇದರ ಅರ್ಥ ಪ್ಲಾನಿಂಗ್, ಜಡ್ಜಮೆಂಟ್ ಹಾಗೂ ಅಡ್ವೈಸ್. ಈ ಸಿನಿಮಾದಲ್ಲಿ ಪ್ರೀತಂ, ಮನೆದೇವರು ಧಾರಾವಾಹಿ ಖ್ಯಾತಿಯ ಅರ್ಚನಾ ಲಕ್ಷ್ಮಿ ನರಸಿಂಹ ಸ್ವಾಮಿ, ಲವ್ ಮಾಕ್ಟೇಲ್ ಖ್ಯಾತಿಯ ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಶಂಕರ್ ನಾಗ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ, ಜಗದೀಶ್ ಮಲ್ನಾಡ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸೀತಾರಾಮ್ ಶಾಸ್ತ್ರಿ ಪ್ರೊಡಕ್ಷನ್ ಅಡಿ ತಯಾರಾಗಿರುವ ಕಾನ್ಸೀಲಿಯಂ ಚಿತ್ರದಲ್ಲಿ, ರೇಷ್ಮಾ ರಾವ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಶೂಟಿಂಗ್ ಮುಗಿಸಿರುವ ಕಾನ್ಸೀಲಿಯಂ ಸಿನಿಮಾ ಇದೇ ಡಿ.10ಕ್ಕೆರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಫಸ್ಟ್ ಲುಕ್, ಟೀಸರ್ ಮೂಲಕ ಸೌಂಡ್ ಮಾಡುತ್ತಿರುವ ಕಾನ್ಸೀಲಿಯಂ ಸ್ಟಾರ್ ನಟರ ಸಿನಿಮಾಗಳಿಗೆ ಪೈಪೋಟಿ ಕೊಡುವ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ:ರಾಜ್ಯದ 30 ಥಿಯೇಟರ್ಗಳಲ್ಲಿ ಎಸ್ಎಸ್ ರಾಜಮೌಳಿಯ RRR ಸಿನಿಮಾದ ಟ್ರೈಲರ್ ಅನಾವರಣ!