ಕರ್ನಾಟಕ

karnataka

ETV Bharat / sitara

ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಫೈರಿಂಗ್​ ಸ್ಟಾರ್ ಹುಚ್ಚ ವೆಂಕಟ್ - ಫೈರಿಂಗ್​ ಸ್ಟಾರ್ ಹುಚ್ಚ ವೆಂಕಟ್

ಬಿಗ್ ಬಾಸ್ ಸೀಸನ್ -3 ರ ಸ್ಪರ್ಧಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದ ಹುಚ್ಚ ವೆಂಕಟ್ ಇದೀಗ ಬಹು ದಿನಗಳ ನಂತರ ಕಿರುತೆರೆಗೆ ಮರಳಿದ್ದಾರೆ. ಈಗಾಗಲೇ ಲೈಫ್ ಓಕೆ ಕಾರ್ಯಕ್ರಮದ ಪ್ರೋಮೋಗಳು ಇನ್​​ಸ್ಟಾಗ್ರಾಂನಲ್ಲಿ ಹರಿದಾಡುತ್ತಿವೆ.

Firing Star huccha Venkat
ಫೈರಿಂಗ್​ ಸ್ಟಾರ್ ಹುಚ್ಚ ವೆಂಕಟ್

By

Published : Mar 21, 2021, 12:41 PM IST

ನಟ, ನಿರ್ಮಾಪಕ, ನಿರ್ದೇಶಕ, ಮಾಜಿ ಬಿಗ್ ಬಾಸ್ ಸ್ಪರ್ಧಿ ಹುಚ್ಚ ವೆಂಕಟ್ ಕಿರುತೆರೆಗೆ ಮರಳುತ್ತಿದ್ದಾರೆ. ಅಂದಹಾಗೆ, ಈ ಬಾರಿ ಹುಚ್ಚ ವೆಂಕಟ್ ನಿರೂಪಕರಾಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಖಾಸಗಿ ಕನ್ನಡ ಚಾನಲ್ ನಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಶೋ ಲೈಫ್ ಓಕೆ ಕಾರ್ಯಕ್ರಮದ ನಿರೂಪಕರಾಗಿ ಹುಚ್ಚ ವೆಂಕಟ್ ಕಾಣಿಸಿಕೊಳ್ಳಲಿದ್ದಾರೆ.

ಬಿಗ್ ಬಾಸ್ ಸೀಸನ್ -3 ರ ಸ್ಪರ್ಧಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದ ಹುಚ್ಚ ವೆಂಕಟ್ ಇದೀಗ ಬಹುದಿನಗಳ ನಂತರ ಕಿರುತೆರೆಗೆ ಮರಳಿದ್ದಾರೆ. ಈಗಾಗಲೇ ಲೈಫ್ ಓಕೆ ಕಾರ್ಯಕ್ರಮದ ಪ್ರೋಮೋಗಳು ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿವೆ. "ಜನರಿಗೆ ತಾವು ಹೋಗುತ್ತಿರುವ ದಾರಿ ತಪ್ಪು ಎಂಬುದು ತಿಳಿಯುವುದಿಲ್ಲ. ಆದರೂ ನಾನು ಅವರಿಗೆ ಸರಿಯಾದ ದಾರಿ ಯಾವುದು ಎಂಬುದ‌ನ್ನು ಈ ಶೋ ನಲ್ಲಿ ತಿಳಿಸಲಿದ್ದೇನೆ" ಎನ್ನುತ್ತಾರೆ ಹುಚ್ಚ ವೆಂಕಟ್.

ಓದಿ : 'ಯುವಸಂಭ್ರಮ'ಕ್ಕಾಗಿ ಉತ್ತರ ಕರ್ನಾಟಕಕ್ಕೆ ಹೊರಟ ಪವರ್ ಸ್ಟಾರ್​

ಹುಚ್ಚ ವೆಂಕಟ್ ತಮ್ಮದೇ ನಿರ್ದೇಶನದ ಸ್ವತಂತ್ರ ಪಾಳ್ಯ ಸಿನಿಮಾದಲ್ಲಿ ನಾಯಕರಾಗಿ ನಟಿಸಿದರು. ಮುಂದೆ ಹುಚ್ಚ ವೆಂಕಟ್, ಪರಪಂಚ, ಓ ಪ್ರೇಮವೇ, ಮಾಯಾಬಜಾರ್ 2016 ಸಿನಿಮಾದಲ್ಲಿ ಅಭಿನಯಿಸಿದ್ದ ಹುಚ್ಚ ವೆಂಕಟ್ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದು ಬಿಗ್ ಬಾಸ್ ಸ್ಪರ್ಧಿಯಾದ ಬಳಿಕವೇ. ಇದೀಗ ನಿರೂಪಕರಾಗಿ ಕಿರುತೆರೆಗೆ ಮರಳಲಿರುವ ಹುಚ್ಚ ವೆಂಕಟ್ ನಿರೂಪಣಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

ABOUT THE AUTHOR

...view details