ಬಾರ್ವಾನಿ (ಮಧ್ಯಪ್ರದೇಶ):ಮಧ್ಯಪ್ರದೇಶದ ಬಾರ್ವಾನಿಯಲ್ಲಿ ಟೆಲಿವಿಷನ್ ತಾರೆ ಮುನ್‌ಮುನ್ ದತ್ತಾ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಾಗಿದೆ. ದೂರುದಾರ ಮನೀಶ್ ಸಂಖಲೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದರಲ್ಲಿ ದತ್ತಾ ಅವರು ಜಾತಿಯ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋಮವಾರ ಮುನ್‌ಮುನ್ ದತ್ತಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆರಂಭಿಸಿದ್ದು, ನೆಟ್ಟಿಗರು ಅಸಮಾಧಾನ ಹೊರಕುತ್ತಿದ್ದಾರೆ. "ತಾರಕ್ ಮೆಹ್ತಾ ಕಾ ಓಲ್ಟಾ ಚಷ್ಮಾ" ಚಿತ್ರದಲ್ಲಿ ಬಬಿತಾ ಪಾತ್ರದಿಂದ ಹೆಸರುವಾಸಿಯಾದ ಮುನ್‌ಮುನ್ ಈ ಎಲ್ಲ ಬೆಳವಣಿಗೆಗಳ ಬಳಿಕ ಶೀಘ್ರದಲ್ಲೇ ಕ್ಷಮೆಯಾಚಿಸಿದರು.
ವಿಡಿಯೋದಲ್ಲಿ, ಮುಮ್ಮುನ್ ಅವರು ನಿರ್ದಿಷ್ಟ ಸಮುದಾಯವನ್ನು ಉಲ್ಲೇಖಿಸಿದಾಗ ಮೇಕಪ್ ಬಗ್ಗೆ ಮಾತನಾಡುತ್ತಿದ್ದರು. "ನಾನು ಚೆನ್ನಾಗಿ ಕಾಣಲು ಇಷ್ಟಪಡ್ತೀನಿ. ಹೀಗಾಗಿ ನಾನು ಸ್ವಲ್ಪ ಮೇಕಪ್ ಮಾಡಿಕೊಂಡಿದ್ದೇನೆ. ಯೂಟ್ಯೂಬ್‌ನಲ್ಲಿ ಕಾಣಿಸಿಕೊಳ್ಳಲು ಚೆನ್ನಾಗಿ ಕಾಣಿಸಿಕೊಳ್ಳಬೇಕು ಅಂತ ಬಯಸಿದ್ದೇನೆ. ನನಗೆ ಆ ಜಾತಿಯವರ ರೀತಿ ಕಾಣಿಸಲು ಇಷ್ಟವಿಲ್ಲ" ಎಂದು ಹೇಳಿದರು. ಈ ಕಾಮೆಂಟ್ ವ್ಯಾಪಕ ಕೋಲಾಹಲವನ್ನು ಸೃಷ್ಟಿಸಿತು ಮತ್ತು ಬಳಿಕ ಮುನ್‌ಮುನ್ ಈ ಬಗ್ಗೆ ಕ್ಷಮೆಯಾಚಿಸಿದರು.