ಕರ್ನಾಟಕ

karnataka

ETV Bharat / sitara

ಬಿಗ್​ ಬಾಸ್​ ಮನೆಯ ಒಂದು ಮೊಟ್ಟೆಯ ಕಥೆ: ನಿನ್ನ ಚರಿತ್ರೆ ಬಿಚ್ಚಿಡ್ತೀನಿ ಎಂದು ಪ್ರಶಾಂತ್ ಹೇಳಿದ್ದು ಯಾರಿಗೆ? - Big boss kannada latets news

ಗ್ಯಾಸ್​ಅನ್ನು ಮೂವರು ಮಾತ್ರ ಬಳಕೆ ಮಾಡಬೇಕು ಎಂದು ಬಿಗ್ ​ಬಾಸ್​ ಆದೇಶಿಸಿದರು. ಊಟಕ್ಕಾಗಿ ಮನೆಯ ಸದಸ್ಯರು ಮೊಟ್ಟೆಯ ಮೊರೆ ಹೋದರು. ಆಗ ಪ್ರಶಾಂತ್ ಸಂಬರಗಿ ಹಾಗೂ ನಿಧಿ ಸುಬ್ಬಯ್ಯ ಅವರ ನಡುವಿನ ಜಗಳ ತಾರಕಕ್ಕೇರಿದೆ.

Big boss kannada news
ಬಿಗ್​ಬಾಸ್​ ಕನ್ನಡ ಸುದ್ದಿ

By

Published : Apr 23, 2021, 7:12 AM IST

ಪ್ರಶಾಂತ್ ಸಂಬರಗಿ ಹಾಗೂ ನಿಧಿ ಸುಬ್ಬಯ್ಯ ಅವರ ಮುಸುಕಿನ ಗುದ್ದಾಟ ಬಿಗ್​ಬಾಸ್​ ಮನೆಯಲ್ಲಿ ತಾರಕಕ್ಕೇರಿದೆ. ಟಾಸ್ಕ್​ನಲ್ಲಿ ಎಡವಟ್ಟು ಮಾಡಿಕೊಂಡಿದ್ದ ಪರಿಣಾಮ ಮನೆಯ ಸದಸ್ಯರು ಗ್ಯಾಸ್ ಬಳಸಿ ಆಹಾರ ಪದಾರ್ಥ ತಿನ್ನುವಂತಿರಲಿಲ್ಲ. ಹೀಗಾಗಿ, ಮೊಟ್ಟೆ ಬೇಯಿಸಿಕೊಂಡು ಸದಸ್ಯರು ಹೊಟ್ಟೆ ತುಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಆದರೆ, ಪ್ರಶಾಂತ್ ಸಂಬರಗಿ ತಿಂದ ಒಂದು ಮೊಟ್ಟೆ ಇಬ್ಬರ ನಡುವಿನ ಜಗಳಕ್ಕೆ ನಾಂದಿ ಹಾಡಿತು.

ಚಂದ್ರಚೂಡ್​, ಶಮಂತ್, ದಿವ್ಯಾ, ವೈಷ್ಣವಿ

ಬಿಗ್​ ಬಾಸ್​ ಮನೆಯಲ್ಲಿ ನೀಡುವ ಟಾಸ್ಕ್​ ಗೆಲ್ಲಬೇಕು ಎನ್ನುವ ಕಾರಣಕ್ಕೆ ದೈಹಿಕವಾಗಿ ಬಲಾಡ್ಯರಾದ ಮಂಜು ಪಾವಗಡ, ರಾಜೀವ್​ ಹಾಗೂ ಅರವಿಂದ್​ ಟಾಸ್ಕ್​ನಲ್ಲಿ ಹೆಚ್ಚೆಚ್ಚು ಪಾಲ್ಗೊಂಡಿದ್ದಾರೆ. ಐದು ಟಾಸ್ಕ್​ಗಳ ಪೈಕಿ ಮೂರು ಟಾಸ್ಕ್​ನಲ್ಲಿ ಇವರೇ ಆಟವಾಡಿದ್ದಾರೆ. ಇದನ್ನು ಬಿಗ್​ ಬಾಸ್​ ಗಮನಿಸಿದ್ದರು.

ಐದರಲ್ಲಿ ಮೂರು ಟಾಸ್ಕ್​​ನ್ನು ರಾಜೀವ್​, ಮಂಜು ಹಾಗೂ ಅರವಿಂದ್​ ಆಡಿರುವುದರಿಂದ ಅವರೇ ಸ್ಟ್ರಾಂಗ್​ ಎಂದು ಮನೆಯವರು ಒಪ್ಪಿಕೊಂಡಂತೆ ಆಗಿದೆ. ಹೀಗಾಗಿ, ಗ್ಯಾಸ್​ಅನ್ನು ಈ ಮೂವರು ಮಾತ್ರ ಬಳಕೆ ಮಾಡಬೇಕು ಎಂದು ಆದೇಶಿಸಿದರು. ಇದನ್ನು ಕೇಳಿ ಮನೆ ಮಂದಿ ಶಾಕ್​ ಆದರು.

ಮಂಜು, ರಾಜೀವ್, ಅರವಿಂದ್

ನಂತರ, ಊಟಕ್ಕಾಗಿ ಮನೆಯ ಸದಸ್ಯರು ಮೊಟ್ಟೆಯ ಮೊರೆ ಹೋದರು. ಪ್ರಶಾಂತ್ ಸಂಬರಗಿ ಅವರು ಎರಡು ಮೊಟ್ಟೆ ತಿಂದರು ಎಂಬ ನಿಧಿ ಆರೋಪಕ್ಕೆ ಜಗಳ ಶುರುವಾಯಿತು. ನನ್ನನ್ನು ಮೊಟ್ಟೆ ಕಳ್ಳ ಅಂತ ಮಾಡಬೇಡಿ. ನೀವೆಲ್ಲಾ ಹಾಲಿನಲ್ಲಿ ಸ್ನಾನ ಮಾಡಿಕೊಂಡು ಬಂದವರು, ಪರಿಶುದ್ಧರು ಅಂತ ಪ್ರಶಾಂತ್ ಅವರು ನಿಧಿ ಸುಬ್ಬಯ್ಯ, ದಿವ್ಯಾ ಉರುಡುಗ ಅವರನ್ನು ವ್ಯಂಗ್ಯ ಮಾಡಿದರು. ಅವರು ಮೊಟ್ಟೆ ತಿಂದಿದ್ದಕ್ಕೆ ಚೀಪ್ ಅಂತಾರೆ, ನಾನು ಆಕೆಯ ಚರಿತ್ರೆ ಹೇಳ್ತೀನಿ ಎಂದು ಪ್ರಶಾಂತ್ ಮೊಟ್ಟೆ ವಿಷಯವನ್ನು ವೈಯಕ್ತಿಕವಾಗಿ ತೆಗೆದುಕೊಂಡರು. ಇದು ಮನೆಯ ಸದಸ್ಯರಿಗೂ ಇರಿಸುಮುರಿಸು ಉಂಟು ಮಾಡಿತು. ಈ ರೀತಿ ಮಾತನಾಡಬೇಡಿ ಎಂದು ಬಹುತೇಕ ಸದಸ್ಯರು ಪ್ರಶಾಂತ್ ಅವರನ್ನು ಸಮಾಧಾನ ಮಾಡಲು ಯತ್ನಿಸಿದರು.

ಮನೆ ಕ್ಯಾಪ್ಟನ್ ಅರವಿಂದ್, ಪ್ರಶಾಂತ್ ಸಂಬರಗಿ ಅವರಿಗೆ ತಮ್ಮ ತಪ್ಪಿನ ಬಗ್ಗೆ ಹೇಳುವಾಗ ಪ್ರಶಾಂತ್, ನಾನು ಹೇಳಿದ್ದು 'ಈ ಮನೆಯಲ್ಲಿ' ನಿಧಿಯ ಚರಿತ್ರೆ ಹೇಳುತ್ತೇನೆಂದು ಮಾತು ಬದಲಾಯಿಸಿದರು. ಹಸಿವು ಹಾಗೂ ಊಟದ ವಿಷಯ ವೈಯಕ್ತಿಕ ವಿಚಾರಗಳಿಗೆ ಎಡೆಮಾಡಿಕೊಟ್ಟಿತು.

ABOUT THE AUTHOR

...view details