ಸ್ಟಾರ್ ನಟನ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಆ ನಟ ಅಥವಾ ಸ್ಟಾರ್ ನಟಿಯ ಎತ್ತರದ ಕಟೌಟ್ಗಳು ಥಿಯೇಟರ್ ಮುಂದೆ ರಾರಾಜಿಸುವುದು ಸಾಮಾನ್ಯ. ಆದರೆ ಇದೀಗ ಧಾರಾವಾಹಿಗಳಿಗೂ ಕಟೌಟ್ ಟ್ರೆಂಡ್ ಆರಂಭವಾಗಿದೆ.
ಧಾರಾವಾಹಿಗಳಿಗೂ ಬಂದು ಕಟೌಟ್ ಸಂಸ್ಕೃತಿ...ರಾಜ್ಯದ ಮನಗೆದ್ದ 'ಜೊತೆಜೊತೆಯಲಿ'
'ಜೊತೆಜೊತೆಯಲಿ' ಧಾರಾವಾಹಿಯಿಂದ ಕಟೌಟ್ ಟ್ರೆಂಡ್ ಆರಂಭವಾಗಿದೆ. ಧಾರಾವಾಹಿ ತಂಡವನ್ನು ಸ್ವಾಗತಿಸಲು ಅಭಿಮಾನಿಗಳು ಸುಮಾರು 60 ಅಡಿಯಷ್ಟು ಎತ್ತರದ ಅನಿರುದ್ಧ್ ಹಾಗೂ ಮೇಘ ಒಟ್ಟಿಗೆ ಇರುವ ಕಟೌಟನ್ನು ಸ್ಥಾಪಿಸಿದ್ದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅನಿರುದ್ಧ್ ಜತ್ಕರ್ ಹಾಗೂ ಮೇಘ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಗೆ ರಾಜ್ಯಾದ್ಯಂತ ಒಳ್ಳೆ ಪ್ರತಿಕ್ರಿಯೆ ದೊರೆತಿದೆ. ಇತ್ತೀಚೆಗೆ ಚಿತ್ರತಂಡ ಚಿತ್ರದುರ್ಗಕ್ಕೆ ಭೇಟಿ ನೀಡಿತ್ತು. ಧಾರಾವಾಹಿ ತಂಡವನ್ನು ಸ್ವಾಗತಿಸಲು ಅಭಿಮಾನಿಗಳು ಸುಮಾರು 60 ಅಡಿಯಷ್ಟು ಎತ್ತರದ ಅನಿರುದ್ಧ್ ಹಾಗೂ ಮೇಘ ಒಟ್ಟಿಗೆ ಇರುವ ಕಟೌಟನ್ನು ಸ್ಥಾಪಿಸಿದ್ದರು. ಚಿತ್ರದುರ್ಗದ ಧಾರಾವಾಹಿ ಜಾತ್ರೆಯಲ್ಲಿ 'ಜೊತೆಜೊತೆಯಲಿ' ತಂಡವನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು. ಮೆಚ್ಚಿನ ನಟ-ನಟಿಯರೊಂದಿಗೆ ಜನರು ಪೋಟೋ ತೆಗೆಸಿಕೊಂಡು ಖುಷಿ ಪಟ್ಟರು. ತೆರೆದ ವಾಹನದಲ್ಲಿ ಧಾರಾವಾಹಿ ತಂಡ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಕೂಡಾ ಮಾಡಿದರು. ಒಟ್ಟಿನಲ್ಲಿ ಈ ಧಾರಾವಾಹಿ ಹಲವು ವಿಶೇಷಗಳಿಗೆ ಕಾರಣವಾಗಿದೆ ಎನ್ನಬಹುದು. ಡಿಸೆಂಬರ್ 29 ಮಧ್ಯಾಹ್ನ 3 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.