ಕರ್ನಾಟಕ

karnataka

ETV Bharat / sitara

'ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್' ಖ್ಯಾತಿಯ ಬೆಕ್ಕು ಸಾವು - ಬಾಬ್ ಬೆಕ್ಕು ಸಾವು

2012 ರಲ್ಲಿ ಲಂಡನ್​ನಲ್ಲಿ ಬೆಸ್ಟ್​ ಸೆಲ್ಲರ್​ ಎನಿಸಿಕೊಂಡಿದ್ದ 'ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್ ' ಪುಸ್ತಕ ಮತ್ತು ಅದೇ ಹಸರಿನ ಚಲನಚಿತ್ರಕ್ಕೆ ಪ್ರೇರಣೆಯಾಗಿದ್ದ. ವಿವಿಧ ವೇದಿಕೆಗಳಲ್ಲಿ ಮಿಂಚಿದ್ದ ಬಾಬ್ ಹೆಸರಿನ ಬೆಕ್ಕು ಮೃತಪಟ್ಟಿದೆ.

Famous feline of 'A Street Cat Named Bob' dies at 14
ಜೇಮ್ಸ್ ಬೋವೆನ್ ಮತ್ತು ಬಾಬ್

By

Published : Jun 18, 2020, 2:49 PM IST

ಲಂಡನ್ :ಚೇತರಿಸಿಕೊಳ್ಳುತ್ತಿರುವ ಮಾದಕ ವ್ಯಸನಿಯೊಂದಿಗೆ ಸಂಬಂಧ ಹೊಂದಿದ್ದ 'ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್ ' ಪುಸ್ತಕ ಮತ್ತು ಚಲನಚಿತ್ರಗಳಿಗೆ ಪ್ರೇರಣೆಯಾಗಿದ್ದ 'ಬಾಬ್'​ ಹೆಸರಿನ ಬೆಕ್ಕು ತನ್ನ 14 ನೇ ವಯಸ್ಸಿನಲ್ಲಿ ಮೃತಪಟ್ಟಿದೆ.

ಜೇಮ್ಸ್ ಬೋವೆನ್ ಮತ್ತು ಬಾಬ್

ಬಾಬ್ ಮೃತಪಟ್ಟ ಬಗ್ಗೆ ಪ್ರಕಾಶಕರಾದ ಹೊಡ್ಡರ್ ಮತ್ತು ಸ್ಟೌಟನ್ ಖಚಿತಪಡಿಸಿದ್ದು, ಅದು ಅಸಾಧರಾಣ ಬೆಕ್ಕಾಗಿತ್ತು ಮತ್ತು ಅದನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

2007 ರಲ್ಲಿ ಲಂಡನ್​ನ ಬೀದಿಯಲ್ಲಿ ಗಾಯಗೊಂಡು ಬಿದ್ದಿದ್ದ ಬಾಬ್​ ಅನ್ನು ಸಂಗೀತಗಾರ ಜೇಮ್ಸ್ ಬೋವೆನ್ ಮನೆಗೆ ತಂದು ಸಾಕಿದ್ದರು. ಬಳಿಕ ಜೇಮ್ಸ್ ಮತ್ತು ಬಾಬ್ ಜೋಡಿ ಲಂಡನ್​ನ ಬೀದಿಗಳಲ್ಲಿ ಮಿಂಚಿತ್ತು. ಬಾಬ್ ಎಷ್ಟು ಫೇಮಸ್​ ಆಗಿತ್ತು ಎಂದರೆ ಲಂಡನ್​ನ ಬೀದಿಯಿಂದ ರೆಡ್​ ಕಾರ್ಪೆಟ್​ ಪ್ರಥಮ ಪ್ರದರ್ಶನಗಳಲ್ಲಿ ತಾರೆಯಾಗಿ ಕಾಣಿಸಿಕೊಂಡಿತ್ತು.

ಜೇಮ್ಸ್ ಬೋವೆನ್ ಮತ್ತು ಬಾಬ್

ಬ್ರಿಟಿಷ್​ ರಾಜಧಾನಿಯ ಸುತ್ತಮತ್ತಲಿನಲ್ಲಿ ಮನೆಯಿಲ್ಲದವರಿಗೆ ಸಹಾಯ ಮಾಡುವ 'ದಿ ಬಿಗ್ ಇಶ್ಯೂ' ಎಂಬ ನಿಯತಕಾಲಿಕೆಯನ್ನು ಬೋವೆನ್ ಮಾರಾಟ ಮಾಡುತ್ತಿದ್ದರು. ಈ ವೇಳೆ, ಬಾಬ್ ಬೊವೆನ್​ಗೆ ಸಿಕ್ಕಿತ್ತು. 2012 ರಲ್ಲಿ ಈ ಬೆಕ್ಕಿನ ಕುರಿತ ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್ 'ಎಂಬ ಮ್ಯಾಗಝಿನ್ ಪ್ರಕಟಗೊಂಡಿತ್ತು. ಈ ಪುಸ್ತಕ ಲಂಡನ್​ನಲ್ಲಿ ಅತೀ ಹೆಚ್ಚು ಮಾರಾಟವಾಯಿತು ಮತ್ತು ದಿ ಬೆಸ್ಟ್​ ಸೆಲ್ಲರ್​ ಬುಕ್ ಎನಿಸಿಕೊಂಡಿತು. ಬಳಿಕ ಇದೇ ಹೆಸರಿನಲ್ಲಿ ಒಂದು ಚಲನಚಿತ್ರವೂ ನಿರ್ಮಾಣವಾಯಿತು. ಈ ಚಲನಚಿತ್ರದಲ್ಲಿ ಸ್ವತಃ ಬಾಬ್ ಪಾತ್ರ ನಿರ್ವಹಿಸಿತ್ತು.

ABOUT THE AUTHOR

...view details