ಕರ್ನಾಟಕ

karnataka

ETV Bharat / sitara

ಹೊಸ ರೂಪದಲ್ಲಿ 'ನಾಗಿಣಿ': ಹೊಸ ಸೀಸನ್ ಟೀಸರ್ ಬಿಡುಗಡೆ - ನಾಗಿನ್ ಟೀಸರ್ ಔಟ್​

ನಿರ್ದೇಶಕಿ ಮತ್ತು ನಿರ್ಮಾಪಕಿಯಾದ ಏಕ್ತಾ ಕಫೂರ್ ಬಿಗ್​ಬಾಸ್ ಕಾರ್ಯಕ್ರಮವೊಂದರಲ್ಲಿ ಘೋಷಣೆ ಮಾಡಿದಂತೆ ಹೊಸ ರೂಪದಲ್ಲಿ ಹಿಂದಿಯ ನಾಗಿಣಿ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಟೀಸರ್ ಬಿಡುಗಡೆಯಾಗಿದೆ.

Ekta Kapoor is back with another season of 'Naagin'
ಬದಲಾದ ಪ್ರಪಂಚದಲ್ಲಿ ನಾಗಿನ್​ ಕೂಡಾ ಬದಲಾಗುತ್ತಾಳೆ: ಆರನೇ ಸೀಸನ್​ನ ಟೀಸರ್ ನೋಡಿ

By

Published : Jan 4, 2022, 7:56 AM IST

ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಾಗಿನ್ ಧಾರಾವಾಹಿ ಸರಣಿ ಮತ್ತೊಮ್ಮೆ ಶೀಘ್ರದಲ್ಲಿಯೇ ಬರುತ್ತದೆ ಎಂದು ನಿರ್ದೇಶಕಿ ಮತ್ತು ನಿರ್ಮಾಪಕಿಯಾದ ಏಕ್ತಾ ಕಫೂರ್ ಬಿಗ್​ಬಾಸ್ ಕಾರ್ಯಕ್ರಮವೊಂದರಲ್ಲಿ ಘೋಷಣೆ ಮಾಡಿದ್ದರು. ಅದರಂತೆ ಈಗ ನಾಗಿನ್ ಧಾರಾವಾಹಿಯ ಆರನೇ ಸೀಸನ್​​ನ ಟೀಸರ್ ಹೊರಬಿದ್ದಿದೆ.

ಟೀಸರ್​​ನಲ್ಲಿ 2019ರಲ್ಲಿ ಪ್ರಪಂಚವು ಹೇಗೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಯಿತು. ಅದು ಹೇಗೆ ನಮ್ಮ ಜೀವನವನ್ನು ಬದಲಾಯಿಸಿದೆ ಎಂಬ ಧ್ವನಿ ಕೇಳಿಸುತ್ತದೆ. ಈ ಮೂಲಕ ಹೊಸದಾಗಿ ಬರಲಿರುವ ನಾಗಿನ್ ಸೀಸನ್ ಕೂಡಾ ಅತಿ ದೊಡ್ಡ ಬದಲಾವಣೆಯೊಂದಿಗೆ ಬರಲಿದೆ ಎಂದು ಸುಳಿವು ಟೀಸರ್ ಮೂಲಕ ನೀಡಲಾಗಿದೆ.

22 ಸೆಕೆಂಡ್​ಗಳ ಟೀಸರ್​ ಪ್ರಪಂಚ ಬದಲಾಗಿದೆ ಎಂದು ಹೇಳುವುದು ಮಾತ್ರವಲ್ಲದೇ, ಪ್ರತಿ ಸೀಸನ್​ಗಿಂತ ಈ ಸೀಸನ್ ಭಿನ್ನವಾಗಿರಲಿದೆ ಎಂದು ಗೊತ್ತಾಗುತ್ತದೆ. ಅಂದಹಾಗೆ ನಾಗಿನ್ ಹೊಸ ಸೀಸನ್​ನಲ್ಲಿ ಯಾರ್ಯಾರು ಇರುತ್ತಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಇದನ್ನೂ ಓದಿ:Photos: ಗೋವಾದಲ್ಲಿ ಹೊಸ ವರ್ಷ ಬರಮಾಡಿಕೊಂಡ ಸನ್ನಿ ಲಿಯೋನ್​

ABOUT THE AUTHOR

...view details