ಕರ್ನಾಟಕ

karnataka

ETV Bharat / sitara

73ನೇ ವಸಂತಕ್ಕೆ ಕಾಲಿಟ್ಟ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ - undefined

ಕನ್ನಡ ನಾಡನ್ನು ಕೊಂಡಾಡುವ ಅನೇಕರಲ್ಲಿ ಎಸ್​​​​.ಪಿ.ಬಿ ಸಹ ಒಬ್ಬರು. ಅವರನ್ನು ಸೂಪರ್ ಪ್ಲೇ ಬ್ಯಾಕ್ ಸಿಂಗರ್ ಎಂದು ಜನ ಪ್ರೀತಿಯಿಂದ ಕರೆಯುತ್ತಾರೆ. ಈ ದಿಗ್ಗಜ ಗಾಯಕನಿಗೆ ಇಂದು ಜನ್ಮದಿನದ ಸಂಭ್ರಮ.

ಎಸ್.ಪಿ ಬಾಲಸುಬ್ರಮಣ್ಯಂ

By

Published : Jun 4, 2019, 9:37 AM IST

ಫೇಮಸ್​ ಗಾಯಕ ಡಾ. ಎಸ್.ಪಿ.ಬಾಲಸುಬ್ರಮಣ್ಯಂ ಇಂದು 73ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರ ಹಾಡುಗಳ ಸಂಖ್ಯೆ ಅಪಾರ. ಹಾಗೇ ಅವರು ಗಳಿಸಿರುವ ಅಭಿಮಾನಿಗಳ ಸಂಖ್ಯೆಯೂ ಸಹ ಲೆಕ್ಕವಿಲ್ಲದಷ್ಟು. ಇದುವರೆಗೆ 16 ಭಾಷೆಗಳಲ್ಲಿ 40000 ಹಾಡುಗಳನ್ನು ಹಾಡಿರುವ ಎಸ್​​​​.ಪಿ.ಬಿ ಗಿನ್ನಿಸ್ ದಾಖಲೆ ಸಹ ಬರೆದವರು.

ಆರಂಭದಲ್ಲಿ ಸಂಗೀತ ನಿರ್ದೇಶಕ ಎಂ.ರಂಗರಾವ್ ಅವರ ಸಹಾಯದಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಿದ ಎಸ್​​​.ಪಿ.ಬಿ, ಕನ್ನಡ ಹಾಡುಗಳಷ್ಟೆ ಕನ್ನಡ ನಾಡನ್ನು ಸಹ ಪ್ರೀತಿಸಿದವರು. ನನ್ನ ಮುಂದಿನ ಜನ್ಮ ಏನಿದ್ದರೂ ಕನ್ನಡ ನಾಡಿನಲ್ಲೇ ಎನ್ನುವಷ್ಟರ ಮಟ್ಟಿಗೆ ಅವರು ಪ್ರೀತಿ ತೋರುತ್ತ ಬಂದಿದ್ದಾರೆ ಈ ಶ್ರೀಪತಿ ಪಂಡಿತಾರದ್ಯುಲ ಬಾಲಸುಬ್ರಮಣ್ಯ.

ಎಸ್.ಪಿ.ಬಾಲಸುಬ್ರಮಣ್ಯಂ

1967ರಲ್ಲಿ ‘ನಕ್ಕರೆ ಅದೇ ಸ್ವರ್ಗ’ ಚಿತ್ರದಿಂದ ಕನ್ನಡ ಚಲನಚಿತ್ರದ ಸಂಗೀತ ಕ್ಷೇತ್ರದಲ್ಲಿ ಪಯಣ ಪ್ರಾರಂಭಿಸಿದ ಎಸ್​​​.ಪಿ.ಬಿ, 52 ವರ್ಷಗಳಿಂದ ಕನ್ನಡ ಸಿನಿಮಾಗಳಿಗೆ ಹಾಡುತ್ತಲೇ ಬರುತ್ತಿದ್ದಾರೆ. ಗಾಯನದ ಜತೆಗೆ ನಟನೆ, ಸಂಗೀತ ನಿರ್ದೇಶನ ಸಹ ಮಾಡಿದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಹಲವಾರು ಶಿಷ್ಯಂದಿರನ್ನು ಹುಟ್ಟು ಹಾಕಿದವರು.

ಇವರು ನಟಿಸಿದ್ದ ಒಂದು ಸಿನಿಮಾಗೆ ಡಾ. ರಾಜಕುಮಾರ್​ ಒಂದು ಹಾಡು ಹೇಳಿದ್ದಾರೆ. ಸಂಗೀತ ಕಲಿತವನಲ್ಲ ಎಂದು ಹೇಳುತ್ತಲೇ ಎಸ್​ಪಿಬಿ ಅವರು ‘ಶಂಕರಾಭರಣ’ ಸಿನಿಮಾಗೆ ಹಾಡಿದ್ದು ಯಾರು ತಾನೇ ಮರೆಯಲಿಕ್ಕೆ ಸಾಧ್ಯ. ನಾನು ಘಂಟಸಾಲ ಅವರ ಶಿಷ್ಯ ಎನ್ನುವ ಎಸ್​​ಪಿಬಿ, ಮಹಮ್ಮದ್ ರಫಿ ಹಾಗೂ ದಕ್ಷಿಣ ಭಾರತದ ಎಸ್​​​.ಜಾನಕಿ ಅವರನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details