ಕರ್ನಾಟಕ

karnataka

ETV Bharat / sitara

ಕೊನೆ ವಾರದ ಡಬಲ್ ಎಲಿಮಿನೇಷನ್ : ಶುಭಾ ನಂತ್ರ ಎಲಿಮಿನೇಟ್ ಆಗೋದು ಇವರೇ! - ಬಿಗ್​ಬಾಸ್ ಸೀಸನ್ 8

ವಾರಾಂತ್ಯದ ಮೊದಲ ಎಪಿಸೋಡ್​ನಲ್ಲಿ ನಟಿ ಶುಭಾ ಪೂಂಜಾ ಹೊರಬಂದರೆ, ಎರಡನೇ ಎಪಿಸೋಡ್​ನಲ್ಲಿ ಮತ್ತೊಬ್ಬರು ಎಲಿಮಿನೇಟ್ ಆಗಲಿದ್ದಾರೆ.

double-elimination-last-week-of-bigg-boss-8
ಕೊನೆ ವಾರದ ಡಬಲ್ ಎಲಿಮಿನೇಷನ್ : ಶುಭಾ ನಂತ್ರ ಎಲಿಮಿನೇಟ್ ಆಗೋದು ಇವರೇ!

By

Published : Jul 31, 2021, 10:54 PM IST

ಬಿಗ್​ಬಾಸ್ ಸೀಸನ್ 8ರ ಕೊನೆಯ ವಾರದಲ್ಲಿ ಡಬಲ್ ಎಲಿಮಿನೇಷನ್ ನಡೆದಿದೆ. 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್​ನಲ್ಲಿ ಸುದೀಪ್ ಹೇಳಿರುವಂತೆ ಡಬಲ್ ಎಲಿಮಿನೇಷನ್ ನಡೆಯಲಿದ್ದು, ಎರಡು ದಿನ ಬಳಿಕ ಈ ಪ್ರಕಿಯೆ ನಡೆಯಲಿದೆ.

ವಾರಾಂತ್ಯದ ಮೊದಲ ಎಪಿಸೋಡ್​ನಲ್ಲಿ ನಟಿ ಶುಭಾ ಪೂಂಜಾ ಹೊರಬಂದರೆ, ಎರಡನೇ ಎಪಿಸೋಡ್​ನಲ್ಲಿ ಶಮಂತ್ ಬ್ರೋ ಗೌಡ ಎಲಿಮಿನೇಟ್ ಆಗಲಿದ್ದಾರೆ.

ಬಿಗ್​ಬಾಸ್ ಮನೆಯ ಲಕ್ಕಿ ಸ್ಟಾರ್ ಎಂದೇ ಖ್ಯಾತರಾಗಿದ್ದ ಶಮಂತ್, ಸೆಕೆಂಡ್ ಇನ್ನಿಂಗ್ಸ್​ನಲ್ಲಿ ತಮ್ಮ ಆಟದ ಶೈಲಿ ಬದಲಿಸಿಕೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಇಷ್ಟು ದಿನ ಮನೆಯಲ್ಲಿ ಇರಲು ಹಾಗೂ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಉತ್ತಮ ಆಟ ಆಡಲು ಪ್ರಶಾಂತ್ ಸಂಬರಗಿ ಅವರು ಶೇಕಡಾ 30ರಷ್ಟು ಸಲಹೆ ಸಹಾಯವಾಗಿದೆ ಎಂದು ಸುದೀಪ್ ಅವರೊಂದಿಗೆ ಶಮಂತ್ ಹಂಚಿಕೊಂಡರು. ಮೂರು ಬಾರಿ ಮನೆಯಿಂದ ಹೊರಹೋಗುವ ಸನ್ನಿವೇಶ ಬಂದು ಕೂಡಲೇ ಕೂದಲೆಳೆಯಿಂದ ಪಾರಾಗಿದ್ದ ಶಮಂತ್ ಕೊನೆಗೂ ಮನೆಯಿಂದ ಹೊರಬರಲಿದ್ದಾರೆ.

ಶಮಂತ್

ಮುಂದಿನ ಎರಡು ದಿನಗಳ ಬಳಿಕ ಮತ್ತೊಂದು ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಮತ್ತೊಬ್ಬ ಸ್ಪರ್ಧಿ ಹೊರಬರಲಿದ್ದು, ನಂತರ ಮನೆಯಲ್ಲಿ ಐದು ಮಂದಿ ಉಳಿಯಲಿದ್ದಾರೆ.

ಇದನ್ನೂ ಓದಿ:'ಗಾಯಗೊಂಡ ಸಿಂಹ'ಕ್ಕೆ ಬಿಡುಗಡೆ ಮುನ್ನವೇ ಡಿಮ್ಯಾಂಡ್ : ಕೋಟಿ ಕೋಟಿ ಬೆಲೆ ಬಾಳುವ ಕೆಜಿಎಫ್ ಚಾಪ್ಟರ್-2

ABOUT THE AUTHOR

...view details