ಬಿಗ್ ಬಾಸ್ ಮನೆಯಿಂದ ಈಗಾಗಲೇ ಐವರು ಸ್ಪರ್ಧಿಗಳು ಹೊರ ಹೋದರೆ, ಮೂವರು ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಿರುವಾಗಲೇ ಆರನೇ ವಾರದ ಎಲಿಮಿನೇಷನ್ ಕೂಡ ಹತ್ತಿರವಾಗಿದೆ. 15 ಸ್ಪರ್ಧಿಗಳ ಪೈಕಿ ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲಿದ್ದಾರೆ ಎನ್ನಲಾಗ್ತಿದೆ.
ಹೌದು, ಈ ಕುರಿತು ಶುಭಾ ಕೂಡ ಮಾತನಾಡಿದ್ದರು. ಇಬ್ಬರು ಮನೆ ಒಳಗೆ ಬಂದಿದ್ದಾರೆ ಎಂದರೆ ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದನ್ನು ಕೇಳಿ ದಿವ್ಯಾ ಹಾಗೂ ನಿಧಿ ಭಯಗೊಂಡಿದ್ದರು. ಅದಕ್ಕೆ ಪುಷ್ಟಿ ನೀಡುವಂತೆ ಸುದೀಪ್ ನಿನ್ನೆಯ ಎಪಿಸೋಡ್ ಕೊನೆಯಲ್ಲಿ ಹೇಳಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ. ಸ್ವತಃ ಸುದೀಪ್ ಅವರೇ ಡಬಲ್ ನಾಮಿನೇಷನ್ ಬಗ್ಗೆ ಬಹಿರಂಗಪಡಿಸಿದ್ದಾರೆ.