ಕರ್ನಾಟಕ

karnataka

ETV Bharat / sitara

ಮತ್ತೆ ಕಿರುತೆರೆಯತ್ತ ಬರಲಿದ್ದಾರಾ ವಿಜಯ್ ಸೂರ್ಯ...? - Small screen actor Vijay surya

ನಟ ವಿಜಯ್ ಸೂರ್ಯ ಸದ್ಯಕ್ಕೆ ಬೆಳ್ಳಿತೆರೆಯಲ್ಲಿ ಬಹಳ ಬ್ಯುಸಿ ಇದ್ದಾರೆ. 'ವೀರಪುತ್ರ' ಚಿತ್ರದಲ್ಲಿ ನಟಿಸುತ್ತಿರುವ ವಿಜಯ್ ಸೂರ್ಯ ಅವರಿಗೆ ಕಿರುತೆರೆಯಿಂದ ಕೂಡಾ ಬಹಳ ಅವಕಾಶಗಳು ಒದಗಿ ಬರುತ್ತಿದೆ. ಆದರೆ ಅವರು ಮತ್ತೆ ಕಿರುತೆರೆಗೆ ಮರಳಲಿದ್ದಾರಾ...ಇಲ್ಲವಾ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

Vijay surya
ವಿಜಯ್ ಸೂರ್ಯ

By

Published : Dec 1, 2020, 2:11 PM IST

'ಅಗ್ನಿಸಾಕ್ಷಿ' ಧಾರಾವಾಹಿಯ ಸಿದ್ಧಾರ್ಥ್ ಆಗಿ ನಟಿಸಿ ಕನ್ನಡ ಕಿರುತೆರೆಯಲ್ಲೇ ಹೆಚ್ಚು ಅಭಿಮಾನಿ ಬಳಗವನ್ನು ಪಡೆದ ವಿಜಯ್ ಸೂರ್ಯ ಅವರ ಮುದ್ದಾದ ನಗುವಿಗೆ ಹೆಣ್ಣುಮಕ್ಕಳು ಫಿದಾ ಆಗಿರುವುದಂತೂ ನಿಜ. ಈ ಚಾಕೊಲೇಟ್ ಹೀರೋ ಅಗ್ನಿಸಾಕ್ಷಿಯಿಂದ ಹೊರಬರುತ್ತಿರುವ ಸುದ್ದಿ ಕೇಳಿದಾಗ ಅಭಿಮಾನಿಗಳಿಗೆ ಬೇಸರವಾಗಿದ್ದಂತೂ ನಿಜ. ಆದರೆ ಅವರು ಮತ್ತೊಂದು ಧಾರಾವಾಹಿಯಲ್ಲಿ ನಟಿಸುತ್ತಿರುವ ವಿಚಾರ ತಿಳಿದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದರು.

ವಿಜಯ್ ಸೂರ್ಯ

ಅಗ್ನಿಸಾಕ್ಷಿಯಿಂದ ಹೊರಬಂದ ವಿಜಯ್ ಸೂರ್ಯ, ಪ್ರೇಮಲೋಕ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತೆ ಅಭಿಮಾನಿಗಳು ಮತ್ತೆ ಮೆಚ್ಚಿನ ನಟನನ್ನು ನೋಡಿ ಖುಷಿಯಾಗಿದ್ದರು. ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿರುವ ವಿಜಯ್ ಸೂರ್ಯ 'ವೀರಪುತ್ರ' ಚಿತ್ರದಲ್ಲಿ ಮಾಸ್​​​​​​​​​ ಪಾತ್ರ ಮಾಡುತ್ತಿದ್ದಾರೆ. ಈ ಮೂಲಕ ಅವರು ಬೆಳ್ಳಿತೆರೆಯಲ್ಲಿ ಬಹಳ ಬ್ಯುಸಿ ಇದ್ದಾರೆ. ಇತ್ತೀಚೆಗಷ್ಟೇ ವಿಜಯ್ ಸೂರ್ಯ ಫಸ್ಟ್​​​ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿತ್ತು. ಈ ರೀತಿಯ ಪಾತ್ರವನ್ನು ಮಾಡಲು ನಾನು ಬಹಳ ವರ್ಷಗಳಿಂದ ಕಾಯುತ್ತಿದ್ದೆ ಎಂದು ವಿಜಯ್ ಸೂರ್ಯ ಹೇಳಿಕೊಂಡಿದ್ದಾರೆ. ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ವಿಜಯ್ ಸೂರ್ಯ ಅವರಿಗೆ ಕಿರುತೆರೆಯಿಂದ ಕೂಡಾ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿದೆ. ಇಷ್ಟು ದಿನ ಸಿನಿಮಾಗಳಲ್ಲಿ ಬ್ಯುಸಿ ಇದ್ದ ವಿಜಯ್ ಸೂರ್ಯ, ಮಗ ಹಾಗೂ ಕುಟುಂಬದೊಂದಿಗೆ ಕಾಲ ಕಳೆಯಲು ಬಯಸುತ್ತಿದ್ದಾರೆ. ಜೊತೆಗೆ 'ವೀರಪುತ್ರ' ಸಿನಿಮಾ ಬಗ್ಗೆ ಗಮನ ಹರಿಸಬೇಕು ಎಂದುಕೊಂಡಿದ್ದಾರೆ. ಇಷ್ಟಿರುವಾಗ ಅವರು ಮತ್ತೆ ಕಿರುತೆರೆಗೆ ವಾಪಸ್ ಬರಲಿದ್ದಾರಾ...ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ಬೆಳ್ಳಿತೆರೆಯಲ್ಲಿ ಬ್ಯುಸಿ ಇರುವ ಗುಳಿಕೆನ್ನೆ ಹುಡುಗ

ABOUT THE AUTHOR

...view details