ಕರ್ನಾಟಕ

karnataka

ETV Bharat / sitara

ಕನ್ನಡ ಬಿಗ್ ಬಾಸ್​ ಎಲ್ಲ ಸೀಸನ್​ಗಳ ವಿಜೇತರು, ರನ್ನರ್​ ಅಪ್​ ಆದವರು - ಬಿಗ್​ಬಾಸ್ ಸೀಸನ್ ವಿಜೇತರು

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್​ಗೆ ಜನ ಕಾಯುತ್ತಿದ್ದಾರೆ. ಈಗಾಗಲೇ ಯಶಸ್ವಿ ಆರು ಸೀಸನ್​ಗಳನ್ನು ಬಿಗ್ ಬಾಸ್ ಮುಗಿಸಿದ್ದು, ಕಳೆದ ಬಾರಿ ವಿಜೇತರಾದವರು ಯಾರೆಂದು ಇಲ್ಲಿದೆ ನೋಡಿ.

ಬಿಗ್​ಬಾಸ್ ಸೀಸನ್ ವಿಜೇತರು

By

Published : Sep 29, 2019, 5:01 AM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಹೆಸರಾಂತ ರಿಯಾಲಿಟಿ 'ಶೋ ಬಿಗ್ ಬಾಸ್'ಗಾಗಿ ಜನ ಕಾಯುತ್ತಿದ್ದಾರೆ. ಈಗಾಗಲೇ ಯಶಸ್ವಿ ಆರು ಸೀಸನ್​ಗಳನ್ನು ಮುಗಿಸಿರುವ ಬಿಗ್ ಬಾಸ್ ಈ ವರ್ಷ ಏಳನೇ ಸೀಸನ್​ಗೆ ಕಾಲಿಡಲಿದೆ.

ಮನೆ ಮಂದಿಯನ್ನೆಲ್ಲ ಒಟ್ಟಿಗೆ ಟಿವಿ ಮುಂದೆ ಕುಳ್ಳಿರಿಸುವ ಈ ಕಾರ್ಯಕ್ರಮ ವಾರದ ಅಂತ್ಯದಲ್ಲಿ ಕೊಡುವ ಮಜಾವೇ ಬೇರೆ. ನೂರು ದಿನಗಳು ಅದು ಹೇಗೆ ಕಳೆಯುತ್ತದೆ ಎಂದು ಗೊತ್ತೇ ಆಗುವುದಿಲ್ಲ. ಮೊನ್ನೆ ಮೊನ್ನೆ ಆರಂಭವಾಯಿತು, ಅಷ್ಟು ಬೇಗ ಕಾರ್ಯಕ್ರಮ ಮುಗಿದು ಹೋಯಿತಾ ಎಂದು ಅನ್ನಿಸಿಬಿಡುತ್ತದೆ. ಆದ್ರೆ ಇದೀಗ ಮತ್ತೆ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಆರಂಭವಾಗುತ್ತದೆ. ಕಳೆದ ಆರು ಸೀಸನ್​ಗಳಲ್ಲಿ ಬಿಗ್ ಬಾಸ್ ವಿಜೇತರ ಮತ್ತು ರನ್ನರ್​ ಅಪ್​ ಪಟ್ಟಪಡೆದವರ ಪಟ್ಟಿ ಇಲ್ಲಿದೆ.

ಕಳೆದ ಆರು ಸೀಸನ್​ನಲ್ಲಿ ಬಿಗ್ ಬಾಸ್ ವಿಜೇತರು ಮತ್ತು ರನ್ನರ್​ ಅಪ್​:

ಬಿಗ್ ಬಾಸ್ ಸೀಸನ್-1: ವಿಜಯ ರಾಘವೇಂದ್ರ - ವಿಜೇತ, ಅರುಣ್ ಸಾಗರ್ - ರನ್ನರ್ ಅಪ್

ಬಿಗ್ ಬಾಸ್ ಸೀಸನ್-2: ಅಕುಲ್ ಬಾಲಾಜಿ - ವಿಜೇತ , ಸೃಜನ್ ಲೋಕೇಶ್ - ರನ್ನರ್ ಅಪ್

ಬಿಗ್ ಬಾಸ್ ಸೀಸನ್-3: ಶೃತಿ - ವಿಜೇತೆ, ಚಂದನ್ ಕುಮಾರ್ - ರನ್ನರ್ ಅಪ್

ಬಿಗ್ ಬಾಸ್ ಸೀಸನ್-4: ಪ್ರಥಮ್ - ವಿಜೇತ, ಕಿರಿಕ್ ಕೀರ್ತಿ - ರನ್ನರ್ ಅಪ್

ಬಿಗ್ ಬಾಸ್ ಸೀಸನ್ -5: ಚಂದನ್ ಶೆಟ್ಟಿ - ವಿಜೇತ, ದಿವಾಕರ್ - ರನ್ನರ್ ಅಪ್

ಬಿಗ್ ಬಾಸ್ ಸೀಸನ್ 6: ಶಶಿಕುಮಾರ್ - ವಿಜೇತ, ನವೀನ್ ಸಂಜು - ರನ್ನರ್ ಅಪ್

ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 7 ಆರಂಭವಾಗಲಿದ್ದು, ಈಗಾಗಲೇ ಪ್ರೋಮೋ ಬಿಡುಗಡೆಯಾಗಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಸೀಸನ್​ನಲ್ಲಿ ಯಾರು ಮನೆಯೊಳಗೆ ಹೋಗುತ್ತಾರೆ, ಯಾರು ಗೆಲ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details