ಕರ್ನಾಟಕ

karnataka

ETV Bharat / sitara

ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುತ್ತಿರುವವರು ಯಾರು ಗೊತ್ತಾ? - Do you know who is going home from Bigg Boss this week

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿರುವ 14 ಜನ ಸದಸ್ಯರಲ್ಲಿ 13 ಜನ ನಾಮಿನೇಟ್ ಆಗಿದ್ದರು. ಇವರಲ್ಲಿ ದಿವ್ಯಾ ಉರುಡುಗ, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ವೈಷ್ಣವಿ, ರಘು, ರಾಜೀವ್, ದಿವ್ಯಾ ಸುರೇಶ್ ಸೇಫ್ ಆಗಿದ್ದಾರೆ.

ಬಿಗ್​ ಬಾಸ್
ಬಿಗ್​ ಬಾಸ್

By

Published : Mar 28, 2021, 9:02 AM IST

ಬಿಗ್ ಬಾಸ್ ಮನೆಯಲ್ಲಿ 4ನೇ ಎಲಿಮಿನೇಷನ್​ ನಡೆಯುತ್ತಿದೆ. ಕಳೆದ ವಾರ ಮನೆಯಲ್ಲಿರುವ 14 ಜನ ಸದಸ್ಯರಲ್ಲಿ 13 ಜನ ನಾಮಿನೇಟ್ ಆಗಿದ್ದರು. ಇವರಲ್ಲಿ ಒಬ್ಬರು ಇಂದು ಮನೆಯಿಂದ ಹೊರ ಹೋಗುವುದು ಗ್ಯಾರಂಟಿ.

'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್​ನಲ್ಲಿ ಸುದೀಪ್ ಅವರು ಹೇಳಿದಂತೆ ಅತಿ ಹೆಚ್ಚು ಮತ ಪಡೆದವರು ಮೊದಲು ಸೇಫ್ ಆಗುತ್ತಾರೆ. ಅತಿ ಕಡಿಮೆ ಮತ ಪಡೆದವರು ಎಲಿಮಿನೇಟ್ ಆಗುತ್ತಾರೆ. ನಾಮಿನೇಟ್ ಆಗಿದ್ದ 13 ಸ್ಪರ್ಧಿಗಳ ಪೈಕಿ ಮಂಜು ಪಾವಗಡ ನಿರೀಕ್ಷೆಯಂತೆ ಪ್ರೇಕ್ಷಕರ ಮನಗೆದ್ದಿದ್ದು, ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ. ನಂತರ ದಿವ್ಯಾ ಉರುಡುಗ, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ವೈಷ್ಣವಿ, ರಘು, ರಾಜೀವ್, ದಿವ್ಯಾ ಸುರೇಶ್ ಸೇಫ್ ಆದರು.

ಮಂಜು ಪಾವಗಡ

ಇನ್ನು ಪ್ರಶಾಂತ್ ಸಂಬರಗಿ, ವಿಶ್ವನಾಥ್, ಶಮಂತ್, ಚಂದ್ರಕಲಾ ಹಾಗೂ ಶಂಕರ್ ಅಶ್ವಥ್ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಈ ಐವರ ಪೈಕಿ ಒಬ್ಬರು ಇಂದು ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ.

ಸಂತಸಗೊಂಡ ಶುಭಾ:

ಈ ನಡುವೆ ಶುಭಾ ಪೂಂಜಾ ಅವರಿಗೆ ಆಶ್ಚರ್ಯವೊಂದು ಕಾದಿತ್ತು. ಅವರ ಭಾವಿಪತಿ ಕರೆ ಮಾಡಿ ಮಾತನಾಡಿದ್ದಾರೆ. ಶುಭಾ ನಾನು ನಿನ್ನನ್ನು ನಿಜವಾಗಲೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಇದನ್ನು ಕೇಳಿದ ಶುಭಾ ತುಂಬಾ ಸಂತೋಷಗೊಂಡರು.

ಇದೇ ವೇಳೆ ವಿಶ್ವನಾಥ್ ಸಹ ಕಣ್ಣೀರು ಹಾಕಿದರು. ಅದಕ್ಕೆ ಸುದೀಪ್ ಅವರು ಶುಭಾ ಅವರ ಹುಡುಗ ಕರೆ ಮಾಡಿದ್ದಕ್ಕೆ ನೀನ್ಯಾಕೆ ಕಣ್ಣೀರು ಹಾಕಿದೆ ಎಂದು ವಿಶ್ವ ಅವರನ್ನು ಕೇಳಿದರು. ಅದಕ್ಕೆ ವಿಶ್ವ ಅವರು ನಮ್ಮ ತಂದೆ ನೆನಪಾಯಿತು ಎಂದರು.

ABOUT THE AUTHOR

...view details