ತೆಲುಗು ಬಿಗ್ಬಾಸ್ 3ನೇ ಸೀಸನ್ ಜುಲೈನಲ್ಲಿ ಆರಂಭವಾಗಲಿದೆ. ಇನ್ನು ಈ ಸೀಸನ್ನಲ್ಲಿ ಯಾವ ಸೆಲಬ್ರಿಟಿಗಳು ಭಾಗವಹಿಸಬಹುದು ಎಂಬ ಲೆಕ್ಕಾಚಾರ ಬಹಳ ದಿನಗಳಿಂದ ನಡೆಯುತ್ತಲೇ ಇದೆ.
ತೆಲುಗು ಬಿಗ್ಬಾಸ್-3 ರಲ್ಲಿ ಟೆನಿಸ್ ಆಟಗಾರ್ತಿ ಜ್ವಾಲಾಗುಟ್ಟಾ...?
ಜುಲೈನಲ್ಲಿ ಆರಂಭವಾಗುವ ತೆಲುಗು ಬಿಗ್ಬಾಸ್-3 ರಲ್ಲಿ ಬ್ಯಾಂಡ್ಮಿಂಟನ್ ಆಟಗಾರ್ತಿ ಜ್ವಾಲಾಗುಟ್ಟಾ ಕೂಡಾ ಭಾಗವಹಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದು ಸುಳ್ಳುಸುದ್ದಿ, ನಾನು ಬಿಗ್ಬಾಸ್ನಲ್ಲಿ ಭಾಗವಹಿಸುತ್ತಿಲ್ಲ ಎಂದು ಜ್ವಾಲಾಗುಟ್ಟಾ ತಮ್ಮ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಮೊದಲ ಸೀಸನನ್ನು ಜ್ಯೂ. ಎನ್ಟಿಆರ್ ನಿರೂಪಣೆ ಮಾಡಿದರೆ ಎರಡನೇ ಸೀಸನ್ಗೆ ನ್ಯಾಚುರಲ್ ಸ್ಟಾರ್ ನಾಣಿ ಹೋಸ್ಟ್ ಆಗಿ ಆಯ್ಕೆಯಾಗಿದ್ದರು. ಆದರೆ ಎರಡನೇ ಸೀಸನ್ನಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಾಣಿ ವಿಫಲರಾದರು ಎಂಬ ಮಾತು ಎಲ್ಲೆಡೆ ಕೇಳಿ ಬಂದಿತ್ತು. ಆದ್ದರಿಂದ ಆಯೋಜಕರು ಮೂರನೇ ಸೀಸನ್ ನಿರೂಪಣೆ ಮಾಡಲು ಸೂಕ್ತ ಸ್ಟಾರ್ ಹುಡುಕಾಟದಲ್ಲಿದ್ದರು. ಕೊನೆಗೂ ಆ ಸ್ಥಾನಕ್ಕೆ ಅಕ್ಕಿನೇನಿ ನಾಗಾರ್ಜುನ ಬಂದಿದ್ದು 3ನೇ ಸೀಸನ್ ಅವರ ಸಾರಥ್ಯದಲ್ಲಿ ನಡೆಯಲಿದೆ.
ಇನ್ನು 3ನೇ ಸೀಸನ್ಗೆ ಬ್ಯಾಡ್ಮಿಂಟನ್ ತಾರೆ ಜ್ವಾಲಾಗುಟ್ಟಾ ಕೂಡಾ ಬರಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಈ ಬಗ್ಗೆ ಸ್ವತ: ಜ್ವಾಲಾ ಸ್ಪಷ್ಟನೆ ನೀಡಿದ್ದು 'ಬಿಗ್ಬಾಸ್-3 ರಲ್ಲಿ ನಾನು ಭಾಗವಹಿಸುತ್ತಿಲ್ಲ ಅವೆಲ್ಲಾ ಸುಳ್ಳುಸುದ್ದಿ' ಎಂದು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಮೂಲಗಳ ಪ್ರಕಾರ ಬಿಗ್ಬಾಸ್ನಲ್ಲಿ ಭಾಗವಹಿಸಲು ಜ್ವಾಲಾ ದೊಡ್ಡ ಮೊತ್ತವನ್ನು ಡಿಮ್ಯಾಂಡ್ ಮಾಡಿದ ಕಾರಣ ಆಯೋಜಕರೇ ಅವರನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಶ್ರೀಮುಖಿ, ವರುಣ್ ಸಂದೇಶ್, ವಿವಾ ಹರ್ಷ, ಆರ್ಜೆ ಹೇಮಂತ್ ಹಾಗೂ ಇನ್ನಿತರರು ಮೂರನೇ ಸೀಸನ್ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.