ಕರ್ನಾಟಕ

karnataka

ETV Bharat / sitara

ಬೆಡ್​​​​​​​​​​​ ರೂಂಗಾಗಿ ಮನೆಯವರ ಹೋರಾಟ ಅಂತ್ಯಗೊಳ್ಳಲಿದ್ಯಾ....? - Big boss Bedroom war

ಅರವಿಂದ್ ಹಾಗೂ ದಿವ್ಯ ಉರುಡುಗ ಬಳಿ ಇರುವ ರೀಚಾರ್ಜ್​ ಯಂತ್ರವನ್ನು ಹಿಂತಿರುಗಿಸುವಂತೆ ಹೇಳಲಾದರೂ ಇಬ್ಬರೂ ಹಿಂತಿರುಗಿಸಿಲ್ಲ. ಜೊತೆಗೆ ಶಮಂತ್ ಬೆಡ್​​ ರೂಂ ಬಿಡಲು ಹೇಳುವಂತೆ ಮನೆಯ ಸದಸ್ಯರು ಬಿಗ್​ ಬಾಸ್ ಬಳಿ ಮನವಿ ಮಾಡಿಕೊಂಡಿದ್ದು ಮನೆಯವರ ಹೋರಾಟ ಇಂದು ಅಂತ್ಯಗೊಳ್ಳಲಿದ್ಯಾ ಕಾದು ನೋಡಬೇಕು.

Big boss 8
ಬಿಗ್ ಬಾಸ್ ಸೀಸನ್ 8

By

Published : Mar 17, 2021, 12:40 PM IST

ಬಿಗ್ ಬಾಸ್ ಸೀಸನ್ 8 ರಲ್ಲಿ ದಿನದಿಂದ ದಿನಕ್ಕೆ‌ ಟ್ವಿಸ್ಟ್ ಸಿಗುತ್ತಿದೆ.‌ ಮೊನ್ನೆಯಷ್ಟೇ ಮನೆಯ ಸದಸ್ಯರು ಶಮಂತ್ ವಿರುದ್ಧ ತಿರುಗಿ ಬಿದ್ದಿದ್ದರು. ನಂತರ ಬಿಗ್ ಬಾಸ್ ಬಳಿ ಬೆಡ್ ರೂಂ ಬಿಟ್ಡುಕೊಡುವಂತೆ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಟಾಸ್ಕ್ ಗೆದ್ದಿದ್ದ ಅರವಿಂದ್ ಹಾಗೂ ದಿವ್ಯ ಉರುಡುಗ ರಿಚಾರ್ಜ್ ಯಂತ್ರವನ್ನು ಹಿಂದಿರುಗಿಸುವಂತೆ ಹೇಳಲಾಗಿತ್ತು. ಆದರೆ, ಅರವಿಂದ್ ಹಾಗೂ ದಿವ್ಯಾ ಉರುಡುಗ ಹಿಂದಿರುಗಿಸಲು ನಿರಾಕರಿಸಿದ್ದಾರೆ.

ಬಿಗ್ ಬಾಸ್ ಸೀಸನ್ 8
ದಿವ್ಯ ಉರುಡುಗ, ಅರವಿಂದ್

ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ

ಅರವಿಂದ್ ಹಾಗೂ ದಿವ್ಯ ನಿರ್ಧಾರದ ಬಗ್ಗೆ ಮನೆಯ ಎಲ್ಲಾ ಸದಸ್ಯರು ಗುಸುಗುಸು ಮಾತನಾಡುತ್ತಲೇ ಇದ್ದಾರೆ. ಆದರೆ, ಅರವಿಂದ್ ಹಾಗೂ ದಿವ್ಯ ಮಾತ್ರ ಯಂತ್ರ ಬೇರೆ ಯಾರ ಬಳಿ ಇದ್ದಿದ್ದರೂ ಬಿಟ್ಟುಕೊಡುತ್ತಿರಲಿಲ್ಲ. ಮುಂದಿನ ವಾರ ಕೊಟ್ಟರೂ, ಕೊಡದಿದ್ದರೂ ನಮ್ಮನ್ನು ನಾಮಿನೇಟ್ ಮಾಡುತ್ತಾರೆ ಎಂದು ಮಾತನಾಡಿಕೊಂಡರು. ಶುಭಾ ಪೂಂಜಾ ಹಾಗೂ ನಿಧಿ ಹೆಚ್ಚು ತಲೆಕೆಡಿಸಿಕೊಂಡಿದ್ದು, ವಯಸ್ಸಾದವರ ಬಗ್ಗೆ ಯೋಚಿಸಬೇಕು ಎಂದಿದ್ದಾರೆ.ಇತ್ತ, ಗೀತಾ, ದಿವ್ಯ ಸುರೇಶ್, ವಿಶ್ವನಾಥ್ ಎಲ್ಲರೂ ಅರವಿಂದ್ ಅವರ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಅರವಿಂದ್ ಹಾಗೂ ದಿವ್ಯ ಉರುಡುಗ ಕ್ಯಾಮರಾ ಮುಂದೆ ಬಂದು ನಾವು ಪ್ರಾಕ್ಟಿಕಲ್ ಆಗಿ ಯೋಚಿಸಿದ್ದೇವೆ ಈಗಾಗಲೇ ನಾಮಿನೇಟ್ ಕೂಡಾ ಆಗಿದ್ದೇವೆ. ಹೀಗಾಗಿ ಕೊಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಮನೆಯ ಸದಸ್ಯರು ಹಾಗೂ ಬಿಗ್ ಬಾಸ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಶಮಂತ್ ಗೌಡ

ABOUT THE AUTHOR

...view details