ಕರ್ನಾಟಕ

karnataka

ETV Bharat / sitara

ತೆಲುಗು ಬಿಗ್​​ ಬಾಸ್​​​​​​ನಲ್ಲಿ ಭಾಗಹಿವಹಿಸುತ್ತಿದ್ದಾರಾ ಕನ್ನಡತಿ ಐಶ್ವರ್ಯ ಪಿಸ್ಸೆ...? - Telugu Agnisakshi actress Aishwarya

ಕನ್ನಡ ಧಾರಾವಾಹಿ ಮೂಲಕ ಕರಿಯರ್ ಆರಂಭಿಸಿ ತೆಲುಗು ಧಾರಾವಾಹಿಗಳಲ್ಲೂ ಮಿಂಚುತ್ತಿರುವ ಐಶ್ವರ್ಯ ಪಿಸ್ಸೆ ಇದೀಗ ತೆಲುಗು ಬಿಗ್ ಬಾಸ್​​​ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

Aishwarya Pissay
ಐಶ್ವರ್ಯ ಪಿಸ್ಸೆ

By

Published : Aug 20, 2020, 5:04 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಾಯಕಿ ಪಾರ್ವತಿ ಆಗಿ ಅಭಿನಯಿಸಿದ್ದ ಐಶ್ವರ್ಯ ಪಿಸ್ಸೆ, ಈಗ ತೆಲುಗು ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ತೆಲುಗಿನ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಐಶ್ವರ್ಯ ಅಭಿನಯಿಸುತ್ತಿದ್ದಾರೆ.

ಧಾರಾವಾಹಿ ಹೊರತುಪಡಿಸಿ ಐಶ್ವರ್ಯ ಪಿಸ್ಸೆ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ. ತೆಲುಗು ಬಿಗ್​​ ಬಾಸ್​​​​​​​​ಗೆ ಐಶ್ವರ್ಯ ಸ್ಪರ್ಧಿಯಾಗಿ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತೆಲುಗಿನಲ್ಲಿ ಬಿಗ್ ಬಾಸ್ ಶೋಗೆ ಚಾಲನೆ ಸಿಕ್ಕಿದೆ. ಈಗಾಗಲೇ ಪ್ರೋಮೋ ಶೂಟಿಂಗ್ ನಡೆದಿದೆ. ನಾಗಾರ್ಜುನ ನಿರೂಪಣೆಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್​​​​​​​​​​​​​ನಲ್ಲಿ ಐಶ್ವರ್ಯ ಪಿಸ್ಸೆ ಭಾಗವಹಿಸುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಐಶ್ವರ್ಯ, ಇದೆಲ್ಲಾ ಸುಳ್ಳು ಸುದ್ದಿ ಎನ್ನುತ್ತಿದ್ದಾರೆ.

ಐಶ್ವರ್ಯ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ಕ್ರಿಯೇಟ್ ಆಗಿದ್ದು ಈ ಪೇಜ್ ಮೂಲಕ ಐಶ್ವರ್ಯ ಬಿಗ್​ ಬಾಸ್ ಹೋಗಲಿದ್ದಾರೆ ಎನ್ನಲಾಗಿತ್ತು. ಇದು ಅರಿವಾಗುತ್ತಿದ್ದಂತೆ ಐಶ್ವರ್ಯ, ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಅಭಿಮಾನಿಗಳಿಗೆ ಈ ಬಗ್ಗೆ ತಿಳಿಸಿದ್ದಾರೆ. ಇದು ನಕಲಿ ಖಾತೆ, ಇದರಿಂದ ನಿಮಗೆ ಯಾವುದೇ ಸಂದೇಶ ಬಂದಲ್ಲಿ ಇಗ್ನೋರ್ ಮಾಡಿ ಎಂದು ಹೇಳಿದ್ದಾರೆ. ಐಶ್ವರ್ಯ ಇತ್ತೀಚೆಗೆ ಪತಿ ಹರಿ ವಿನಯ್ ಜೊತೆ 'ಇಸ್ಮಾರ್ಟ್ ಶಂಕರ್​' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details