ಕರ್ನಾಟಕ

karnataka

ETV Bharat / sitara

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಾಮಿಡಿ ಕಿಲಾಡಿಗಳ ಮಹಾ ಸಂಗಮ - DKD and comedy kiladigalu Mahasangama

ಫೆಬ್ರವರಿ 28 ಭಾನುವಾರ ಸಂಜೆ 6 ಗಂಟೆಯಿಂದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಾಮಿಡಿ ಕಿಲಾಡಿಗಳ ಮಹಾಸಂಗಮ ಜರುಗಲಿದೆ. ಈ ಮೂಲಕ ಕಿರುತೆರೆಪ್ರಿಯರಿಗೆ ವಾಹಿನಿಯು ನಗು ಹಾಗೂ ನಾಟ್ಯದ ಮನರಂಜನೆ ನೀಡುತ್ತಿದೆ.

DKD and comedy kiladigalu Mahasangama
ಡಿಕೆಡಿ ಕಾಮಿಡಿ ಕಿಲಾಡಿಗಳ ಮಹಾಸಂಗಮ

By

Published : Feb 27, 2021, 1:07 PM IST

ವೀಕೆಂಡ್ ಬಂದರೆ ಸಾಕು ವಾಹಿನಿಗಳು ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಜನರಿಗೆ ಮನರಂಜನೆ ಒದಗಿಸುತ್ತವೆ. ಜೀ ಕನ್ನಡ ವಾಹಿನಿ ಕೂಡಾ ವೀಕ್ಷಕರಿಗೆ ಮನರಂಜನೆಯ ಔತಣವನ್ನು ಒದಗಿಸುವುದರಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಮಾತ್ರವಲ್ಲ ಸದಾ ಕಾಲ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನಮನ ಗೆಲುತ್ತಾ ಬಂದಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

ಇದನ್ನೂ ಓದಿ:'ಪೊಗರು' ಚಿತ್ರದಲ್ಲಿ ತಾರಾ ಪಾತ್ರ ಏನು...ಎಷ್ಟು ದೃಶ್ಯಗಳಲ್ಲಿ ತಾರಾ ಇದ್ದಾರೆ...?

ಈ ವಾರಾಂತ್ಯದಲ್ಲಿ ವೀಕ್ಷಕರಿಗೆ ಮತ್ತೊಮ್ಮೆ ಭರ್ಜರಿ ಮನರಂಜನೆ ನೀಡಲು ಜೀ ವಾಹಿನಿ ಸಿದ್ಧವಾಗಿದೆ. ಈ ವೀಕೆಂಡ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಶೋ ಮಹಾಸಂಗಮಕ್ಕೆ ಸಾಕ್ಷಿಯಾಗಲಿದೆ. ನೃತ್ಯದ ಮೂಲಕ ವೀಕ್ಷಕರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಾಮಿಡಿ ಮೂಲಕ ಜನರ ಮುಖದಲ್ಲಿ ಭರಪೂರ ನಗುವನ್ನು ಹರಿಸುವ ಕಾಮಿಡಿ ಕಿಲಾಡಿಗಳು ಸೇರಿ ವೀಕ್ಷಕರನ್ನು ಹೊಸ ಮನರಂಜನಾ ಲೋಕವನ್ನೇ ತೋರಿಸಲಿವೆ. ಕಿಲಾಡಿಗಳಿಗೆ ಹುರುಪು ತುಂಬುವ ತೀರ್ಪುಗಾರರು ಹಾಗೂ ಡ್ಯಾನ್ಸರ್​​​ಗಳನ್ನು ಪ್ರೋತ್ಸಾಹಿಸುವ ಡಿಕೆಡಿ ಜಡ್ಜ್​​ಗಳು ಇಲ್ಲಿ ಒಂದಾಗುತ್ತಿರುವುದು ವಿಶೇಷ. ವಿಭಿನ್ನ ಪ್ರಹಸನಗಳಿಂದ ಪ್ರೇಕ್ಷಕರನ್ನು ನಗಿಸಲು ಕಿಲಾಡಿಗಳು ಸಜ್ಜಾಗಿದ್ದರೆ , ಇತ್ತ ವಿಭಿನ್ನ ಸ್ಟೆಪ್ಸ್​​​ ಮೂಲಕ ರಂಜಿಸಲು ನೃತ್ಯ ಪ್ರತಿಭೆಗಳು ತಯಾರಾಗಿದ್ದಾರೆ. ಅಂದ ಹಾಗೆ ಈ ಮಹಾಸಂಗಮ ಸಂಚಿಕೆ ಇದೇ ಭಾನುವಾರ ಸಂಜೆ 6ಕ್ಕೆ ಪ್ರಸಾರವಾಗಲಿದೆ. ಒಟ್ಟಾರೆಯಾಗಿ ಈ ವಾರ ನಗು ಹಾಗೂ ನಾಟ್ಯದ ದರ್ಬಾರು ಜನಮನ ರಂಜಿಸಲಿದೆ.

ABOUT THE AUTHOR

...view details