ಕರ್ನಾಟಕ

karnataka

ETV Bharat / sitara

ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ದಿವ್ಯಾ ವಾಗುಕರ್‌ - geetha serial

'ಮಾಂಗಲ್ಯಂ ತಂತು ನಾನೇನ' ಧಾರಾವಾಹಿಯ ಬಳಿಕ ಕಿರುತೆರೆಯಿಂದ ದೂರವಿದ್ದ ದಿವ್ಯಾ ವಾಗುಕರ್, ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ಬಣ್ಣ ಹಚ್ಚಲಿದ್ದಾರೆ.

ದಿವ್ಯಾ ವಾಗುಕರ್
ದಿವ್ಯಾ ವಾಗುಕರ್

By

Published : Mar 27, 2021, 1:13 PM IST

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನ' ಧಾರಾವಾಹಿಯಲ್ಲಿ ಶ್ರಾವಣಿ ಆಗಿ ನಟಿಸಿ ಧಾರಾವಾಹಿ ಲೋಕದಲ್ಲಿ ಮನೆ ಮಾತಾದ ದಿವ್ಯಾ ವಾಗುಕರ್ ಸಣ್ಣ ಗ್ಯಾಪ್ ತೆಗೆದುಕೊಂಡ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ.

ದಿವ್ಯಾ ವಾಗುಕರ್

ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ದಿವ್ಯಾ ವಾಗುಕರ್ ಬಣ್ಣ ಹಚ್ಚಲಿದ್ದು, ದಾಸವಾಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಭಿನ್ನ ಕಥೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ 'ಗೀತಾ' ಧಾರಾವಾಹಿಯು ಇತ್ತೀಚೆಗಷ್ಟೇ ಯಶಸ್ವಿಯಾಗಿ 300 ಸಂಚಿಕೆಗಳನ್ನು ಪೂರೈಸಿತ್ತು. ಇದೀಗ ದಾಸವಾಳ ಪಾತ್ರದ ಆಗಮನವಾಗಿದ್ದು, ಇದರಿಂದ ಕತೆಗೆ ಹೊಸ ಟ್ವಿಸ್ಟ್ ದೊರೆಯಲಿದೆ.

ದಿವ್ಯಾ ವಾಗುಕರ್

ಪ್ರವಾಸಕ್ಕೆಂದು ಬಂದ ವಿಜಯ್ ಮತ್ತು ಗೀತಾ ಕಾಡಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ದಾರಿಗಾಗಿ ಹುಡುಕಾಡುತ್ತಿರುವಾಗ ಕಾಡು ಮನುಷ್ಯರ ಕೈಗೆ ಸಿಕ್ಕಿ ಬೀಳುತ್ತಾರೆ. ಕಾಡು ಮನುಷ್ಯರ ನಾಯಕಿ ದಾಸವಾಳಗೆ ವಿಜಯ್ ಮೇಲೆ ಪ್ರೀತಿ ಉಂಟಾಗುತ್ತದೆ. ಮಾತ್ರವಲ್ಲದೆ ಆಕೆ ವಿಜಯನನ್ನು ಮದುವೆಯಾಗಬೇಕು ಎಂದು ಬಯಸುತ್ತಾಳೆ. ಅದಕ್ಕೆ ಸಿದ್ಧತೆ ಕೂಡಾ ನಡೆದಿರುತ್ತದೆ. ಆದರೆ ಮದುವೆ ನಡೆಯುತ್ತಾ? ಅದಕ್ಕೆ ಗೀತಾ ಬಿಡುತ್ತಾಳಾ? ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ದಿವ್ಯಾ ವಾಗುಕರ್

ಇನ್ನು 'ಮಾಂಗಲ್ಯಂ ತಂತು ನಾನೇನ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ದಿವ್ಯಾ ವಾಗುಕರ್, ಬಳಿಕ ಕಿರುತೆರೆಯಿಂದ ದೂರವಿದ್ದರು. ಇದೀಗ ದಾಸವಾಳ ಪಾತ್ರಧಾರಿಯಾಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ABOUT THE AUTHOR

...view details