ಕರ್ನಾಟಕ

karnataka

ETV Bharat / sitara

‘ಅವಿ ಮಿಸ್​ ಯು!’ ಬಿಗ್​ಬಾಸ್​ ಮನೆಯಲ್ಲಿ ನಗು ಅರಳಿಸಿದ ದಿವ್ಯಾ ಉರುಡುಗಾ ಧ್ವನಿ - Big boss kannada updates

ಹಾಯ್.. ಸರ್ಪೈಸ್ ಅಂತ ದಿವ್ಯ ಉರುಡುಗಾ ವಾಯ್ಸ್​ ನೋಟ್​ ಆರಂಭವಾಗುತ್ತಿದ್ದಂತೆ ದೊಡ್ಡಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣವಾಯಿತು.

Divya uruduga voice note in big boss news
ಬಿಗ್​ಬಾಸ್​ ಮನೆಯಲ್ಲಿ ನಗು ಅರಳಿಸಿದ ದಿವ್ಯಾ ಉರುಡುಗಾ ಧ್ವನಿ

By

Published : May 12, 2021, 8:18 AM IST

ಬಿಗ್ ಬಾಸ್ ಕೊನೆಯ ದಿನದ ಮೊದಲ ಸಂಚಿಕೆ‌ ಭಾವನಾತ್ಮಕವಾಗಿತ್ತು. ಅದರಲ್ಲೂ ‘ಈ ಭೂಮಿ ಬಣ್ಣದ ಬುಗರಿ’ ಹಾಡಿನೊಂದಿಗೆ ದಿನ ಆರಂಭವಾಯಿತು. ‌ನಂತರ ಬಿಗ್ ಬಾಸ್ ಕೂಡ ಮಾತನಾಡಿ ಮನೆಯ ಸದಸ್ಯರ‌ ತಲೆಗೆ ಹುಳವೊಂದನ್ನು ಬಿಟ್ಟರು.

ಮನೆ ಮಂದಿಗೆಲ್ಲಾ ದಿವ್ಯ ಉರುಡುಗ ಅವರನ್ನು ಮಿಸ್ ಮಾಡಿಕೊಳ್ಳೋದಕ್ಕಿಂತ ಹೆಚ್ಚಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ಇತ್ತು. ಹೀಗಾಗಿ ಚಕ್ರವರ್ತಿ ಕಣ್ಮಣಿ ಬಳಿ ಮನವಿ ಮಾಡಿದ್ದರು. ಅದರಂತೆ ದಿವ್ಯಾ ವಾಯ್ಸ್ ನೋಟ್ ಬರುತ್ತಿದ್ದಂತೆ ಮನೆ ಮಂದಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು.

"ಹಾಯ್.. ಸರ್ಪೈಸ್ ಅಂತ ದಿವ್ಯ ಮಾತು ಶುರು ಮಾಡಿದರು. ದಿವ್ಯ ಮಾತಾಡುತ್ತಾ ಎಲ್ಲರನ್ನು ವಿಚಾರಿಸಿಕೊಂಡ್ರು. ನೀವೆಷ್ಟು ಮಿಸ್ ಮಾಡಿಕೊಳ್ತಿರೋ ನಾನು ನಿಮ್ಮನ್ನೆಲ್ಲಾ ಅಷ್ಟೇ ಮಿಸ್ ಮಾಡಿಕೊಳ್ತೀನಿ. ಶುಭಾ ಅಕ್ಕ ನಿನ್ನ ತುಂಬಾ ಮಿಸ್ ಮಾಡ್ಕೋಳ್ತೀನಿ. ನಾನಿಲ್ಲ ಅಂದಾಗ ನೀನು ಅತ್ತಿದ್ದು ನೋಡಿ ನಂಗು ಅಳು ಬಂತು. ಈಗ ಯಾರನ್ನ ಗೋಳೊಯ್ಕೋಳ್ತೀಯಾ ಎಂದರು."

"ಬಳಿಕ ವೈಶ್ ನೀನು ನಂಗೆ ಹುಷಾರಿಲ್ಲ ಅಂದಾಗ ಎಷ್ಟು ಚೆನ್ನಾಗ್ ನೋಡ್ಕೊಂಡೆ. ಪ್ರಶಾಂತ್ ಬ್ರೋ ಸೆಕೆಂಡ್ ಟೈಮ್ ಕ್ಯಾಪ್ಟನ್ ಆಗಿದ್ದೀರಾ, ಕಂಗ್ರಾಟ್ಸ್ ಹಾಗೇ ಕ್ಯಾಪ್ಟನ್ ಆದಾಗ ನಂಗೆ ಡೆಡಿಕೇಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಅಂದ್ರು. ಆಮೇಲೆ ಶಾಮ ನಿನ್ ಸಾಂಗ್ ಇಷ್ಟ ಆಯ್ತು ಎಂದು ಶಮಂತ್​ನ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನೀನು ಮತ್ತು ರಘು ಪ್ರಾರ್ಥನೆ ಮಾಡಿದ್ದು ಇಷ್ಟ ಆಯ್ತು ಎಂದು ಹೇಳಿದರು."

"ಮಂಜ ಸಿಗೋ ನಿನಗೆ ಮಾಡ್ತೀನಿ. ಸ್ಟ್ರೆಚ್ಚರ್ ಸ್ಟ್ರೆಚ್ಚರ್ ಅಂತ ಹೇಳಿ ಅದ್ರಲ್ಲೆ ಕಳ್ಸಿದ್ದಿಯಾ ಅಂದರು. ‌ಎಲ್ಲರನ್ನೂ ವಿಚಾರಿಸಿಕೊಂಡ ನಂತರ ಕೊನೆಯದಾಗಿ ಅರವಿಂದ್ ಅವರಿಗೆ ಹಾಯ್ ಅವಿ.. ಹೇಗಿದ್ದೀರಾ? ಎಂದರು ಆ ಧ್ವನಿಯಲ್ಲೇ ತುಂಬಾ ಮಿಸ್ ಮಾಡಿಕೊಳ್ಳುತ್ತಿರುವ ಭಾವ ಅಡಗಿತ್ತು."

"‌ನಿಮ್ಮ ಬಗ್ಗೆ ಏನ್ ಹೇಳಿದ್ರು ಎಷ್ಟ್ ಹೇಳಿದ್ರು ಕಡಿಮೆ. ಖುಷಿ-ಬೇಜಾರು ಏನೇ ಆದರೂ ನನ್ನ ಹತ್ತಿರ ಹೇಳಿಕೊಳ್ಳುತ್ತಾ ಇದ್ರಿ. ನಂಗೊತ್ತು ನಾನ್ ಇಲ್ಲ ಅಂದ್ರೆ ಬೇಜಾರಾಗಿರ್ತೀರಾ. ಯಾವಾಗ್ಲೂ ನಗ್ತಾ ಇರಿ, ಗೇಮ್ ಚೆನ್ನಾಗಿ ಆಡಿ, ತುಂಬಾ ಮಿಸ್ ಮಾಡ್ಕೋಳ್ತಾ ಇದ್ದೀನಿ. ಆರಾಮಾಗಿ ಇದ್ದೀನಿ. ಉಡುಪಿ ಹೊಟೇಲ್ ಬಗ್ಗೆ ಥಿಂಕ್ ಮಾಡಿ, ಪ್ರೀತಿ ಇರಲಿ. ಮಿಸ್ ಯು ಆಲ್, ಆದಷ್ಟು ಬೇಗ ಸಿಗುತ್ತೇನೆ ಎಂದರು."

ಅರವಿಂದ್ ಕಣ್ಮಣಿ ಬಳಿ ಧನ್ಯವಾದ ಹೇಳಿದರು. ವೀಕೆಂಡ್​ ಎಪಿಸೋಡ್​ನಲ್ಲಿ ದಿವ್ಯ ಹಾಗೂ ಅರವಿಂದ್ ಮ್ಯಾಚಿಂಗ್ ಡ್ರೆಸ್ ಹಾಕಿಕೊಳ್ಳುವ ಪ್ಲ್ಯಾನ್ ಮಾಡಿದ್ದರು. ಆದರೆ, ಅನಾರೋಗ್ಯದ ಕಾರಣ ದಿವ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅರವಿಂದ್ ಒಬ್ಬರೇ ಅದೇ ಡ್ರೆಸ್ ಹಾಕೊಂಡಿದ್ದರು.

ABOUT THE AUTHOR

...view details