ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆಗೆಂದು ಬಿಗ್ ಬಾಸ್ ಮನೆಯಿಂದ ಕನ್ಫೆಷನ್ ರೂಂ ಮೂಲಕ ಹೊರಬಂದಿರುವ ದಿವ್ಯಾ ಉರುಡುಗ ಮತ್ತೆ ದೊಡ್ಡ ಮನೆಗೆ ಬರುವುದು ಅನುಮಾನವಾಗಿದೆ.
ದಿವ್ಯಾ ಉರುಡುಗ ಮತ್ತೆ ಬಿಗ್ ಬಾಸ್ ಮನೆ ಪ್ರವೇಶಿಸುವುದು ಅನುಮಾನ? - ಕನ್ನಡ ಬಿಗ್ ಬಾಸ್ 8
ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್ ಮನೆಯಿಂದ ಹೊರಬಂದಿರುವುದು ಮನೆಯ ಸದಸ್ಯರಿಗೆ ಬೇಸರ ಉಂಟು ಮಾಡಿದೆ.

ಗುರುವಾರದ ಎಪಿಸೋಡ್ನಲ್ಲಿ ದಿವ್ಯ ಉರುಡುಗ ಅವರ ಸೂಟ್ಕೇಸ್ ಅನ್ನು ಸ್ಟೋರ್ ರೂಂಗೆ ತಂದಿಡುವಂತೆ ಬಿಗ್ ಬಾಸ್ ಆದೇಶಿಸಿದರು. ಇದು ಅರವಿಂದ್ ಹಾಗೂ ಮನೆಯ ಎಲ್ಲಾ ಸದಸ್ಯರಿಗೂ ಬೇಸರ ಉಂಟುಮಾಡಿದೆ. ಮನೆಯಿಂದ ಹೋದವರು ಮತ್ತೆ ಬರುವುದಿಲ್ಲ ಎಂದು ಬೇಸರದಿಂದ ಮನೆಯ ಸದಸ್ಯರು ಕಣ್ಣೀರು ಹಾಕಿದರು.
ಚಿಕಿತ್ಸೆಗಾಗಿ ಮನೆಯಿಂದ ಹೊರ ಬಂದಿರುವ ದಿವ್ಯ ಉರುಡುಗ ಅವರು ಮತ್ತೆ ಮನೆ ಒಳಗೆ ಹೋಗುವುದು ಅನುಮಾನವಾಗಿದೆ. ಈಗಾಗಲೇ ಕೊರೊನಾ ಹೆಚ್ಚಾಗಿದ್ದು, ದಿವ್ಯ ಆಸ್ಪತ್ರೆಗೆ ಹೋದ ನಂತರ ಚಿಕಿತ್ಸೆ ಪಡೆದು ಕ್ವಾರಂಟೈನ್ ಆಗಬೇಕಿದೆ. ಅಷ್ಟರೊಳಗೆ ಬಿಗ್ ಬಾಸ್ ಮನೆಯಲ್ಲಿ 80 ಕ್ಕೂ ಹೆಚ್ಚು ದಿನಗಳು ಕಳೆದುಹೋಗಿರುತ್ತದೆ.
ವಾಹಿನಿಯು ಶೀಘ್ರವಾಗಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.