ಕರ್ನಾಟಕ

karnataka

ETV Bharat / sitara

ಏಕಾಏಕಿ ಹೆಚ್ಚಾಯ್ತು ಹಾಟ್​​ ಬ್ಯೂಟಿಗಳ ಫ್ಯಾನ್ಸ್​ ಲಿಸ್ಟ್​​​.. ಅಭಿಮಾನಕ್ಕೆ ಥ್ಯಾಂಕ್ಸ್​​​​ ಎಂದ ನಟಿಮಣಿಯರು.. - Divya Suresh Instagram

ಮೋಕ್ಷಿತಾ ಪೈ ಅವರು ಕೆಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ ಮೋಕ್ಷಿತಾ ಪೈ ಇನ್ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ 300 ಸಾವಿರ ಫಾಲೋವರ್ಸ್ ಪಡೆದಿದ್ದು, ಅಭಿಮಾನಿಗಳ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ..

divya-uruduga-divya-suresh-mokshitha-pai
divya-uruduga-divya-suresh-mokshitha-pai

By

Published : May 17, 2021, 7:45 PM IST

Updated : May 17, 2021, 8:09 PM IST

ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಹಾಗೂ ಪಾರು ಧಾರವಾಹಿ ಖ್ಯಾತಿಯ ಮೋಕ್ಷಿತಾ ಪೈ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದ್ದು, ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ದಿವ್ಯಾ ಉರುಡುಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೇಲೆ ಅವರ ಫಾಲೋವರ್ಸ್ ಸಂಖ್ಯೆ ಜಾಸ್ತಿ ಆಗಿದೆ. ಅವರ ಹೆಸರಲ್ಲಿ ಫ್ಯಾನ್ಸ್ ಪೇಜ್​ಗಳು ಹೆಚ್ಚಾಗ್ತಿವೆ. ಇದೀಗ ದಿವ್ಯಾ ಉರುಡುಗ ಅವರು ಇನ್ಸ್ಟಾಗ್ರಾಮ್ ಪೇಜ್​ನಲ್ಲಿ 400 ಸಾವಿರ ಫಾಲೋವರ್ಸ್ ಪಡೆದಿದ್ದಾರೆ.

ಮೂಲತಃ ತೀರ್ಥಹಳ್ಳಿಯವರಾದ ದಿವ್ಯಾ ಉರುಡುಗ ಅವರು ಹುಲಿರಾಯ ಚಿತ್ರದ ಮೂಲಕ ಬಣ್ಣದ ಪ್ರಯಾಣವನ್ನು ಪ್ರಾರಂಭಿಸಿದರು. ದಿವ್ಯಾ ಇದುವರೆಗೆ ಧ್ವಜ ಮತ್ತು ಫೇಸ್ 2 ಫೇಸ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ದಿವ್ಯಾ ಸುರೇಶ್ ಕೂಡ ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ದಿವ್ಯಾ ಸುರೇಶ್ ಅವರು ಬಿಗ್ ಬಾಸ್ ಮನೆಗೆ ಹೋದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಇವರ ಫಾಲೋವರ್ಸ್ ಸಂಖ್ಯೆ ಕೂಡ ಜಾಸ್ತಿ ಆಗಿದೆ.

ಮೂಲತಃ ಮಾಡೆಲ್ ಆಗಿರುವ ದಿವ್ಯಾ ನಟನೆಯಲ್ಲಿ ಮಾತ್ರವಲ್ಲ, ಕ್ರೀಡೆಯಲ್ಲೂ ಮುಂದಿದ್ದಾರೆ. ಹೌದು ದಿವ್ಯಾ ಸುರೇಶ್ ಕಬಡ್ಡಿ ಆಟಗಾರ್ತಿ ಕೂಡ ಹೌದು. ದಿವ್ಯಾ ಸುರೇಶ್ ಈವರೆಗೆ ಸಪ್ತಪದಿ, ಜೋಡಿಹಕ್ಕಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸದ್ಯ ದಿವ್ಯಾ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ 150 ಸಾವಿರ ಫಾಲೋವರ್ಸ್ ಪಡೆದಿದ್ದು, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪಾರು ಖ್ಯಾತಿಯ ಮೋಕ್ಷಿತಾ ಪೈ ಅವರು ಸಹ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇವರಿಗೂ ತಮ್ಮದೇ ಆದ ಅಭಿಮಾನಿ ಬಳಗವಿದ್ದು, ಮೋಕ್ಷಿತಾ ಪೈ ಟಿಕ್ ಟಾಕ್ ವಿಡಿಯೋಗಳು, ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ.

ಮೋಕ್ಷಿತಾ ಪೈ ಅವರು ಕೆಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ ಮೋಕ್ಷಿತಾ ಪೈ ಇನ್ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ 300 ಸಾವಿರ ಫಾಲೋವರ್ಸ್ ಪಡೆದಿದ್ದು, ಅಭಿಮಾನಿಗಳ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Last Updated : May 17, 2021, 8:09 PM IST

ABOUT THE AUTHOR

...view details