ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ವಚನಾ ಆಗಿ ನಟಿಸುತ್ತಿದ್ದ ದಿಶಾ ಮದನ್, ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿರುವುದು ಕಿರುತೆರೆಪ್ರಿಯರಿಗೆ ತಿಳಿದ ವಿಚಾರ. ದಿಶಾ ಮದನ್ ಮತ್ತು ಶಶಾಂಕ್ ದಂಪತಿ ಪುತ್ರ ವಿಯಾನ್ಗೆ ಈಗ ಒಂದು ವರ್ಷ ತುಂಬಿದ್ದು ಮಗನ ಹುಟ್ಟುಹಬ್ಬವನ್ನು ದಿಶಾ ದಂಪತಿ ಸರಳವಾಗಿ ಆಚರಿಸಿದ್ದಾರೆ.
ಮುದ್ದು ಮಗನ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ ದಿಶಾ ಮದನ್ - French biryani actress Disha madan
ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಮಿಂಚುತ್ತಿರುವ ದಿಶಾ ಮದನ್ ತಮ್ಮ ಮುದ್ದು ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ಕಳೆದ ವಾರ ತಮ್ಮ ಫಾರ್ಮ್ಹೌಸ್ನಲ್ಲಿ ಆಚರಿಸಿದ್ದಾರೆ. ಮಗನ ಹುಟ್ಟುಹಬ್ಬ ಹಾಗೂ ಆಯುಷ್ಯ ಹೋಮದ ಫೋಟೋಗಳನ್ನು ದಿಶಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಫಾರ್ಮ್ಹೌಸ್ನಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸಿದ ದಿಶಾ ಮದನ್, ಹುಟ್ಟುಹಬ್ಬದ ಫೊಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದಂದು ದಿಶಾ, ಮಗನ ಹೆಸರಲ್ಲಿ ಆಯುಷ್ಯ ಹೋಮವನ್ನು ಕೂಡಾ ಮಾಡಿದ್ದಾರೆ. ಈ ಪೂಜೆಯಲ್ಲಿ ದಿಶಾ ಹಾಗೂ ಪತಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಜೊತೆಗೆ ಮುದ್ದು ಕಂದನಿಗೂ ಸಾಂಪ್ರದಾಯಿಕ ಉಡುಗೆ ತೊಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಇರುವ ದಿಶಾ ಮದನ್, ತಮ್ಮ ಪುತ್ರ ವಿಯಾನ್ ಹೆಸರಿನಲ್ಲಿ ಕೂಡಾ ಇನ್ಸ್ಟಾಗ್ರಾಮ್ ಅಕೌಂಟ್ ತೆರೆದಿದ್ದಾರೆ. ಇದಕ್ಕೆ ಬುಬ್ಬಾವಿ ಎಂದು ಹೆಸರಿಟ್ಟಿದ್ದಾರೆ. ವಿಯಾನ್ಗೆ ಈಗಾಗಲೇ 26 ಸಾವಿರಕ್ಕೂ ಅಧಿಕ ಫಾಲೋವರ್ಸ್ಗಳಿದ್ದಾರೆ. ಮಗನ ಮೊದಲ ವರ್ಷದ ಹುಟ್ಟುಹಬ್ಬ ಹಾಗೂ ಮಗು ಆಗುವ ಮುಂಚಿನ ಫೋಟೋಗಳನ್ನು ಮತ್ತೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ದಿಶಾ, 'ತಾಯ್ತನ ನಿಜಕ್ಕೂ ಒಂದು ಸುಂದರ ಅನುಭವ' ಎಂದು ಹೇಳಿಕೊಂಡಿದ್ದಾರೆ.