ಕನ್ನಡದ ಹೆಸರಾಂತ ರಿಯಾಲಿಟಿ ಶೋಗಳ ಪೈಕಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಾಧಿಪತಿಯೂ ಒಂದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಇದೀಗ ಬಹು ದೊಡ್ಡ ಬದಲಾವಣೆಯಾಗಿದೆ.
ಹೌದು. ಅಪ್ಪು ಬದಲಾಗಿ ಬೇರೊಬ್ಬರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಆ ನಿರೂಪಕಿ ಬೇರಾರೂ ಅಲ್ಲ, ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್. ಹೌದು, ಪುನೀತ್ ರಾಜ್ ಕುಮಾರ್ ಅವರ ಜಾಗದಲ್ಲಿ ಇದೀಗ ರಚಿತಾ ರಾಮ್ ಕುಳಿತುಕೊಂಡಿದ್ದಾರೆ. ಪ್ರತಿ ವಾರ ಹಾಟ್ ಸೀಟ್ನಲ್ಲಿ ಕುಳಿತವರಿಗೆ ಪವರ್ ಸ್ಟಾರ್ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ, ಈ ಬಾರಿಯ ವಿಶೇಷ ಅಂದ್ರೆ ಅಪ್ಪು ಹಾಟ್ ಸೀಟ್ನಲ್ಲಿ ಕುಳಿತುಕೊಳ್ಳಲಿದ್ದಾರೆ. ಅವರಿಗೆ ಪ್ರಶ್ನೆಗಳನ್ನು ಕೇಳಲು ರಚಿತಾ ರಾಮ್ ತಯಾರಾಗಿದ್ದಾರೆ. ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಹಾಟ್ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ.