ಜಗ್ಗ, ಜಗನ್ ಎಂದೇ ಕರೆಯಲ್ಪಡುವ ಇವರು ತಮ್ಮ ಹೊಸ ಲುಕ್ ಅನ್ನು ಇನ್ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೇ ಸ್ಫೂರ್ತಿಯಾಗುವಂತೆ ‘ಹೋರಾಟವನ್ನು ನಿಲ್ಲಿಸಲು ನಿರಾಕರಿಸುವ ವ್ಯಕ್ತಿಗೆ ಜಯ ಯಾವಾಗಲು ಸಾಧ್ಯ’ ಎಂದು ಬರೆದಿದ್ದಾರೆ.
ಡಿಫರೆಂಟ್ ಲುಕ್ನಲ್ಲಿ ಸೀತಾ ವಲ್ಲಭ ಜಗನ್ನಾಥ್ - ನಟ ಜಗನ್ನಾಥ್,
ಕನ್ನಡ ಕಿರುತೆರೆಯ ಖ್ಯಾತ ನಟ ಜಗನ್ನಾಥ್ ಈಗ ತಮ್ಮ ದೇಹದಾಕಾರವನ್ನು ಬದಲಾಯಿಸಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
![ಡಿಫರೆಂಟ್ ಲುಕ್ನಲ್ಲಿ ಸೀತಾ ವಲ್ಲಭ ಜಗನ್ನಾಥ್ Sita Vallabha actor Jaganaath, different look in Sita Vallabha actor Jaganaath, actor Jaganaath, actor Jaganaath news, ಸೀತಾ ವಲ್ಲಭ ಜಗನ್ನಾಥ್, ಡಿಫರೆಂಟ್ ಲುಕ್ನಲ್ಲಿ ಸೀತಾ ವಲ್ಲಭ ಜಗನ್ನಾಥ್, ನಟ ಜಗನ್ನಾಥ್, ನಟ ಜಗನ್ನಾಥ್ ಸುದ್ದಿ,](https://etvbharatimages.akamaized.net/etvbharat/prod-images/768-512-11517463-thumbnail-3x2-rr.jpg)
ಡಿಫರೆಂಟ್ ಲುಕ್ನಲ್ಲಿ ಸೀತಾ ವಲ್ಲಭ ಜಗನ್ನಾಥ್
ತಮ್ಮ ಸಿಕ್ಸ್ ಪ್ಯಾಕ್ನಿಂದಾಗಿ ಇಂಡಸ್ಟ್ರಿಯಲ್ಲಿ ಗಮನ ಸೆಳೆದಿರುವ ಜಗನ್ನಾಥ್ ಅವರ ಈ ಫೋಟೋಗೆ ಗೆಳೆಯ ಕಾರ್ತಿಕ್ ಜಯರಾಮ್ ಕಮೆಂಟ್ ಹಾಕಿದ್ದಾರೆ. ‘ಫೆಂಟಾಸ್ಟಿಕ್ ಸರೋಜಾ, ತುಂಬಾ ಗೌರವ ಉಂಟಾಗುತ್ತಿದೆ’ ಎಂದಿದ್ದಾರೆ.
ಆಶಿತಾ ಚಂದ್ರಪ್ಪ ಕೂಡಾ ಓಹೋ ಎಂದಿದ್ದಾರೆ. ಸೀತಾ ವಲ್ಲಭದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಜಗನ್ನಾಥ್ ಟಿವಿ ಪ್ರೊಡಕ್ಷನ್ ಆರಂಭಿಸಿ ರಕ್ಷಾ ಬಂಧನ ಧಾರಾವಾಹಿ ನಿರ್ಮಿಸಿದ್ದರು.