ಕರ್ನಾಟಕ

karnataka

ETV Bharat / sitara

ಕಿರುತೆರೆ, ಬೆಳ್ಳಿತೆರೆಯೊಂದಿಗೆ ಕಿರುಚಿತ್ರದಲ್ಲೂ ಕಮಾಲ್ ಮಾಡುತ್ತಿರುವ ದೀಕ್ಷಿತ್​​​​​ - Deekshit busy in movies

ಕಿರುತೆರೆ ಮೂಲಕ ಆ್ಯಕ್ಟಿಂಗ್ ಕರಿಯರ್ ಆರಂಭಿಸಿ ಸೂಪರ್ ಹಿಟ್ 'ದಿಯಾ' ಚಿತ್ರದ ರೋಹಿತ್ ಆಗಿ ಹೆಸರು ಮಾಡಿದ ದೀಕ್ಷಿತ್ ಶೆಟ್ಟಿ ಇದೀಗ 'ಓ ಫಿಶ್' ಎಂಬ ಕಿರುಚಿತ್ರದಲ್ಲೂ ನಟಿಸಿದ್ದಾರೆ.

Dia fame Deekshit shetty
ದೀಕ್ಷಿತ್​​​​​

By

Published : Aug 31, 2020, 5:34 PM IST

ಹಯವದನ ನಿರ್ದೇಶನದ 'ನಾಗಿಣಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಅಭಿನಯಿಸಿ ಕಿರುತೆರೆಪ್ರಿಯರ ಗಮನ ಸೆಳೆದಿದ್ದ ಕುಂದಾಪುರದ ಹುಡುಗ ದೀಕ್ಷಿತ್ ಶೆಟ್ಟಿ 'ದಿಯಾ' ಸಿನಿಮಾ ಮೂಲಕ ರಾಜ್ಯಾದ್ಯಂತ ಮನೆ ಮಾತಾಗುವ ಮೂಲಕ ಮೊದಲ ಚಿತ್ರದಲ್ಲೇ ಯಶಸ್ಸು ಪಡೆದ ಪ್ರತಿಭಾವಂತ ನಟ.

ಕುಂದಾಪುರದ ಹುಡುಗ ದೀಕ್ಷಿತ್ ಶೆಟ್ಟಿ

ಬೆಳ್ಳಿತೆರೆಯಲ್ಲಿ ಒಳ್ಳೆ ಅವಕಾಶ ಪಡೆಯುತ್ತಿರುವ ದೀಕ್ಷಿತ್ ಕೆಟಿಎಂ, ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಜೈಜಗದೀಶ್ ಪುತ್ರಿ ವೈನಿಧಿ ಜೊತೆ ಕೂಡಾ ತೆರೆ ಹಂಚಿಕೊಂಡಿದ್ದಾರೆ. ಆದರೆ ಇದು ಕಿರುಚಿತ್ರ. ವಿದ್ಯಾ ಬಿ. ರೆಡ್ಡಿ ನಿರ್ದೇಶನದ 'ಓ ಫಿಶ್' ಎಂಬ 10 ನಿಮಿಷದ ಕಿರುಚಿತ್ರದಲ್ಲಿ ದೀಕ್ಷಿತ್ ಹಾಗೂ ವೈನಿಧಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಓ ಫಿಶ್' ಕಿರುಚಿತ್ರದಲ್ಲಿ ದೀಕ್ಷಿತ್

'ನಾಗಿಣಿ' ಧಾರಾವಾಹಿ ನಂತರ ಬೆಳ್ಳಿತೆರೆಯಲ್ಲೇ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿರುವ ದೀಕ್ಷಿತ್, ಸಣ್ಣ ಗ್ಯಾಪ್ ನಡುವೆ ಕಿರುಚಿತ್ರದಲ್ಲೂ ಅಭಿನಯಿಸಿದ್ದಾರೆ. ನನಗೆ 'ಓ ಫಿಶ್' ಕಿರುಚಿತ್ರದ ಸ್ಕ್ರಿಪ್ಟ್ ಬಹಳ ಇಷ್ಟವಾದ ಕಾರಣ ಯೋಚಿಸದೆ ಒಪ್ಪಿಕೊಂಡೆ. ವಿದ್ಯಾ ಮತ್ತು ಅವರ ತಂಡದೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿಯ ವಿಚಾರ ಎಂದು ದೀಕ್ಷಿತ್ ಖುಷಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details