ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಗಿಣಿ' ಧಾರಾವಾಹಿಯಲ್ಲಿ ನಾಗಿಣಿ ಪಾತ್ರಕ್ಕೆ ಜೀವ ತುಂಬಿದ ಮುದ್ದು ಮುಖದ ಚೆಲುವೆ ಹೆಸರು ದೀಪಿಕಾ ದಾಸ್. ಈ ಬೆಡಗಿ ಇದೀಗ ಧಾರಾವಾಹಿಯಿಂದ ಹೊರ ಬರುವ ಮೂಲಕ ವೀಕ್ಷಕರಿಗೆ ಶಾಕ್ ನೀಡಿದ್ದಾರೆ.
'ನಾಗಿಣಿ' ಧಾರಾವಾಹಿಯಿಂದ ಹೊರಬಂದ ದೀಪಿಕಾ ಬಿಗ್ಬಾಸ್ ಮನೆಗೆ ಹೋಗ್ತಾರಾ?
ಅರಸಿ ಬಂದ ಅವಕಾಶಗಳಿಗೆಲ್ಲಾ ಅಸ್ತು ಎನ್ನದ ದೀಪಿಕಾ ತಮಗೆ ಬಂದ ಪಾತ್ರವನ್ನು ಆಯ್ಕೆ ಮಾಡುವಾಗ ಸಾಕಷ್ಟು ಆಲೋಚನೆ ಮಾಡುತ್ತಾರೆ. 'ನಾಗಿಣಿ' ಧಾರಾವಾಹಿಯಿಂದ ಹೊರಬಂದ ದೀಪಿಕಾ ಬಿಗ್ಬಾಸ್ಗೆ ಹೋಗುತ್ತಾರೆ ಎಂಬ ಸುದ್ದಿಯಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಇರುವ ದೀಪಿಕಾ ಅವರೇ ಸ್ವತಃ ಈ ವಿಷಯ ಹೇಳಿಕೊಂಡಿದ್ದಾರೆ. 'ಇನ್ನು ಮುಂದೆ ನಾನು ನಾಗಿಣಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿಲ್ಲ. ಧಾರಾವಾಹಿಯಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತೆ. ಸದಾ ನನಗೆ ಸಪೋರ್ಟ್ ಮಾಡುತ್ತಿದ್ದ ನಾಗಿಣಿ ಧಾರಾವಾಹಿ ತಂಡಕ್ಕೆ ನಾನು ಅದೆಷ್ಟು ಕೃತಜ್ಞತೆ ಹೇಳಿದರೂ ಸಾಲದು. ಜೊತೆಗೆ ಎಲ್ಲದಕ್ಕಿಂತಲೂ ಮುಖ್ಯವಾದುದು ಅಭಿಮಾನಿಗಳ ಪ್ರೀತಿ. ನಿಮ್ಮ ಪ್ರೀತಿಯಿಂದಲೇ ನಾನು ಇಂದು ಇಷ್ಟು ಎತ್ತರ ಬೆಳೆಯಲು ಸಾಧ್ಯವಾಯಿತು. ನಿಮ್ಮ ಪ್ರೀತಿಗೆ ಚಿರ ಋಣಿ' ಎಂದು ಬರೆದುಕೊಂಡಿದ್ದಾರೆ ದೀಪಿಕಾ. ಬಿಎಸ್ಸಿ ಪದವೀಧರೆಯಾಗಿರುವ ದೀಪಿಕಾ, ಶಾಲಾ-ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಿದ್ದರು. ಮುಂದೆ ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ದೀಪಿಕಾ, 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಟಿಸಿದ ಮೊದಲ ಧಾರಾವಾಹಿಯಲ್ಲೇ ಮನೆ ಮಾತಾಗಿರುವ ದೀಪಿಕಾ, ಧೂದ್ ಸಾಗರ್, ಡ್ರೀಮ್ ಗರ್ಲ್ ಸೇರಿದಂತೆ ಎಂಟು ಸಿನಿಮಾಗಳಲ್ಲಿ ಕೂಡಾ ಅಭಿನಯಿಸಿದ್ದಾರೆ.
ಅರಸಿ ಬಂದ ಅವಕಾಶಗಳಿಗೆಲ್ಲಾ ಅಸ್ತು ಎನ್ನದ ದೀಪಿಕಾ ತಮಗೆ ಬಂದ ಪಾತ್ರವನ್ನು ಆಯ್ಕೆ ಮಾಡುವಾಗ ಸಾಕಷ್ಟು ಆಲೋಚನೆ ಮಾಡುತ್ತಾರೆ. ಧಾರಾವಾಹಿಯಲ್ಲಿ ಪ್ರತಿದಿನ ಒಂದೇ ಪಾತ್ರ. ಆದರೆ ಸಿನಿಮಾದಲ್ಲಿ ಆ ರೀತಿ ಅಲ್ಲ ಎನ್ನುವ ದೀಪಿಕಾಗೆ ಅಮೃತಾಳಾಗಿ ಬದಲಾಗಲು ಮನಸ್ಸಿರಲಿಲ್ಲ. ನಿರ್ದೇಶಕರ ಒತ್ತಾಯದ ಮೇರೆಗೆ, ನಾಗಿಣಿ ಪಾತ್ರಕ್ಕೆ ಒಕೆ ಎಂದರಂತೆ. ನಾಗಿಣಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ದೀಪಿಕಾ ಧಾರಾವಾಹಿಯಿಂದ ಹೊರ ಬಂದಾಗಿದೆ. ಇದರ ಜೊತೆಗೆ ಬಿಗ್ಬಾಸ್ ಸೀಸನ್ 7ರ ಸ್ಫರ್ದಿಯಾಗಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. ಬಿಗ್ಬಾಸ್ ಆಗಲಿ, ಇಲ್ಲವೇ ಹೊಸ ಧಾರಾವಾಹಿಯೇ ಇರಲಿ. ಒಟ್ಟಾರೆಯಾಗಿ ನಾಗಿಣಿ, ಅಮೃತಳಾಗಿ ಮನ ಸೆಳೆದ ದೀಪಿಕಾ ಮತ್ತೊಮ್ಮೆ ಕಣ್ಣ ಮುಂದೆ ಬರಲಿ ಎಂಬುದೇ ಅಭಿಮಾನಿಗಳ ಆಶಯ.