ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ನಾಯಕಿ ಆರತಿಯಾಗಿ ಅಭಿನಯಿಸಿದ್ದ ದೀಪಿಕಾ ಆ ಧಾರಾವಾಹಿ ಮುಕ್ತಾಯಗೊಂಡ ಕಾರಣ ಕಿರುತೆರೆಯಿಂದ ದೂರವಿದ್ದರು. ಇದೀಗ ಮತ್ತೆ ಅವರು ಮತ್ತೊಂದು ಧಾರಾವಾಹಿಯಲ್ಲಿ ಬ್ಯುಸಿ ಆಗಿದ್ದಾರೆ.
ಉದಯ ವಾಹಿನಿಯ 'ಸೇವಂತಿ' ಧಾರಾವಾಹಿಯ ಮೂಲಕ ದೀಪಿಕಾ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಸದಾ ಇನ್‌ಸ್ಟಾಗ್ರಾಮ್‌ನಲ್ಲಿ ಆ್ಯಕ್ಟಿವ್ ಆಗಿರುವ ದೀಪಿಕಾ ಆಗಾಗ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ದೀಪಿಕಾ ಅವರು ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು ಚಿತ್ರೀಕರಣದ ಕಷ್ಟವನ್ನು ತೋರಿಸಿದ್ದಾರೆ.
'ಸೇವಂತಿ' ಧಾರಾವಾಹಿಯ ಚಿತ್ರೀಕರಣದ ವಿಡಿಯೋ ಅದಾಗಿದ್ದು ನಾಯಕಿ 'ಸೇವಂತಿ' ತನ್ನ ಪತಿ ಅರ್ಜುನ್ ಜೊತೆ ಜಾಲಿ ಬೈಕ್ ರೈಡ್ ಹೋಗುವ ಸಂದರ್ಭ. ಈ ದೃಶ್ಯವನ್ನು ಸೆರೆಹಿಡಿಯಲು ತಂತ್ರಜ್ಞರು ಅದೆಷ್ಟು ಹರಸಾಹಸ ಮಾಡುತ್ತಾರೆ ಎಂಬುದನ್ನು ದೀಪಿಕಾ ಒಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಮಾತ್ರವಲ್ಲ ದೀಪಿಕಾ ಅವರ ಮುಖಭಾವವನ್ನು ಸೆರೆ ಹಿಡಿಯುವ ಸಲುವಾಗಿ ಬಹಳ ಕಷ್ಟಪಟ್ಟಿರುವ ಕ್ಯಾಮರಾಮ್ಯಾನ್ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮುಂದೆ ಕುಳಿತು ಚಿತ್ರೀಕರಣ ಮಾಡಿದ್ದಾರೆ.
ಸೇವಂತಿ ಧಾರಾವಾಹಿಯಲ್ಲಿ ಬ್ಯುಸಿ ಆಗಿರುವ ದೀಪಿಕಾ
ಈ ಅಪರೂಪದ ವಿಡಿಯೋವನ್ನು ದೀಪಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿ " ನೀವು ನೋಡಿದಷ್ಟು ಶೂಟಿಂಗ್ ಸುಲಭವಲ್ಲ. ತೆರೆಯ ಹಿಂದೆ ತಂತ್ರಜ್ಞರು ಎಷ್ಟು ಕಷ್ಟ ಪಡುತ್ತಿದ್ದಾರೆ ಎಂದು ನೋಡಿ. ಇದು ಸೇವಂತಿ ಧಾರಾವಾಹಿ ಚಿತ್ರೀಕರಣ' ಎಂದು ಬರೆದುಕೊಂಡಿದ್ದಾರೆ. 'ಕುಲವಧು' ಧಾರಾವಾಹಿಯಲ್ಲಿ ವೇದ್ ಮತ್ತು ಧನ್ಯಾ ಆಗಿ ಕಾಣಿಸಿಕೊಂಡಿದ್ದ ಈ ಜೋಡಿ ಇದೀಗ 'ಸೇವಂತಿ' ಧಾರಾವಾಹಿಯಲ್ಲಿ ಸೇವಂತಿ ಹಾಗೂ ಅರ್ಜುನ್ ಆಗಿ ಅಭಿನಯಿಸುತ್ತಿದ್ದಾರೆ.