ಕರ್ನಾಟಕ

karnataka

ETV Bharat / sitara

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಸೀಸನ್​​​​​​​​​​​​​​ 2ರ ವಿನ್ನರ್​​​ಗಳು ಇವರು - ಡಿಂಪನ ಹಾಗೂ ಅನೂಪ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್​​​​​​​​​​​​​​ 2 ವಿಜೇತರು

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಫ್ಯಾಮಿಲಿ ವಾರ್ ಸೀಸನ್ 2ರ ನಿಯಮದ ಪ್ರಕಾರ 20 ಸುತ್ತುಗಳ ನಂತರ 10 ಜೋಡಿಗಳ ನಡುವೆ ನೃತ್ಯ ಸ್ಪರ್ಧೆ ನಡೆಯಿತು. ನಂತರ ಸೆಮಿಫೈನಲ್​​​​​​​​​​​​​​​​ನಲ್ಲಿ 10 ಜೋಡಿಗಳ ಪೈಕಿ 5 ಜೋಡಿಗಳು ಮಾತ್ರ ಫೈನಲ್​​​​​​​​​​​​​​​​​​​​​​​​​​​​​​​​​​​​​​ಗೆ ತಲುಪಿದವು.

Dance Karnataka dance
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

By

Published : Jan 6, 2020, 1:23 PM IST

ರಾಜ್ಯದ ನೃತ್ಯ ಪ್ರೇಮಿಗಳ ಮನ ಗೆದ್ದಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಸೀಸನ್​​ 2ರ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಕೆಲವು ದಿನಗಳ ಹಿಂದೆ ಕೋಟೆ ನಾಡು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಜರುಗಿತ್ತು. ಈ ಕಾರ್ಯಕ್ರಮ ನಿನ್ನೆ ಸಂಜೆ 6.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಿದೆ.

ತೇಜಸ್​​, ಯುಕ್ತಿ ನಾಯ್ಡು

ಕನ್ನಡ ಕಿರುತೆರೆ ಇತಿಹಾಸದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಫ್ಯಾಮಿಲಿ ವಾರ್ ಸೀಸನ್ 2ಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಫಿನಾಲೆಯಲ್ಲಿ ಡ್ರಾಮಾ ಜ್ಯೂನಿಯರ್ಸ್ ತಂಡದ ಡಿಂಪನ ಮತ್ತು ಅನೂಪ್ ಜೋಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪ್ರತಿ ವಾರಾಂತ್ಯದಲ್ಲೂ ವಿಭಿನ್ನ ರೀತಿಯ ನೃತ್ಯದ ಮೂಲಕ ಪ್ರೇಕ್ಷಕರ ಮನ ಸೆಳೆಯುತ್ತಿದ್ದ ಸ್ಫರ್ಧಿಗಳು, ವೀಕ್ಷಕರು ಮಾತ್ರವಲ್ಲದೆ ತೀರ್ಪುಗಾರರ ಮನಸ್ಸನ್ನು ಗೆಲ್ಲುತ್ತಿದ್ದರು. 13 ಜೋಡಿಗಳಿಂದ ಆರಂಭವಾದ ಈ ಪಯಣ ಸುಮಾರು 22 ವಾರಗಳ ನಂತರ ಕೊನೆಯ ಹಂತ ತಲುಪಿದೆ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಫ್ಯಾಮಿಲಿ ವಾರ್ ಸೀಸನ್ 2ರ ನಿಯಮದ ಪ್ರಕಾರ 20 ಸುತ್ತುಗಳ ನಂತರ 10 ಜೋಡಿಗಳ ನಡುವೆ ನೃತ್ಯ ಸ್ಪರ್ಧೆ ನಡೆಯಿತು. ನಂತರ ಸೆಮಿಫೈನಲ್​​​​​​​​​ನಲ್ಲಿ 10 ಜೋಡಿಗಳ ಪೈಕಿ 5 ಜೋಡಿಗಳು ಮಾತ್ರ ಫೈನಲ್​​​​​​​​​​​​​​​​​​​​​​​​​​​​​​​​​​​​​​ಗೆ ತಲುಪಿದವು. ಅನೂಪ್ ಹಾಗೂ ಡಿಂಪನ, ಪ್ರೇಕ್ಷಿತ್ ಹಾಗೂ ಅನ್ವಿಷ, ತೇಜಸ್ ಹಾಗೂ ಯುಕ್ತಿನಾಯ್ಡು, ವಿವೇಕ್ ಹಾಗೂ ಹಿರಣ್ಮಯಿ ಮತ್ತು ಅದಿತಿ ಗ್ರಾಂಡ್ ಫಿನಾಲೆ ಹಂತವನ್ನು ತಲುಪಿದ್ದರು.

For All Latest Updates

TAGGED:

ABOUT THE AUTHOR

...view details