ಹೈದರಾಬಾದ್: ನಟಿ ದಕ್ಷಾ ನಗರ್ಕರ್ ಅವರು ತೆಲುಗು ತಾರೆಯರೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ. ನಾಗಾರ್ಜುನ ಮತ್ತು ನಾಗ ಚೈತನ್ಯ ಅಭಿನಯದ 'ಬಂಗಾರ್ರಾಜು' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ ದಕ್ಷಾ ನಗರ್ಕರ್ ಅವರೊಂದಿಗೆ ವಿಶೇಷ ಬಾಂಧವ್ಯದ ಕುರಿತು ಹೇಳಿದ್ದಾರೆ.
ನಾಗ ಚೈತನ್ಯ ನನ್ನ ಮೊದಲ ಡಾನ್ಸ್ ಪಾರ್ಟನರ್ ಮತ್ತು ಅವರು ತುಂಬಾ ತಾಳ್ಮೆ ಇರುವ ವ್ಯಕ್ತಿ ಎಂದು ತನ್ನ ಸಂಭಾಷಣೆಯಲ್ಲಿ ಹೇಳಿದ್ದಾರೆ. ನಾನು ಹಾಡಿಗೆ ಪೂರ್ವಾಭ್ಯಾಸ ಮಾಡುವಾಗ, ಅವರು ತಾಳ್ಮೆಯಿಂದ ಕಾಯುತ್ತಿದ್ದರು ಎಂದು ಹೇಳಿದ್ದಾರೆ.