ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾದ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶಾಲಿನಿ ಸತ್ಯನಾರಾಯಣ್ ಅವರ ಸಾರಥ್ಯದಲ್ಲಿ ಸೊಗಸಾಗಿ ಮೂಡಿ ಬರುತ್ತಿರುವ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ.
ವೇದಾ ಕೃಷ್ಣಮೂರ್ತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡು ತಮ್ಮ ಈ ಸಂತಸ ಹಂಚಿಕೊಂಡಿದ್ದಾರೆ."ಸುವರ್ಣ ಸೂಪರ್ ಸ್ಟಾರ್ ವೇದಿಕೆಯಲ್ಲಿ ಉತ್ತಮ ಸಮಯ ಕಳೆದೆ. ತುಂಬಾ ಸಂತಸವಾಯಿತು. ವಂದನಾ ರಾಜ್ ಈ ಔಟ್ ಫಿಟ್ ಡಿಸೈನ್ ಮಾಡಿದ್ದಕ್ಕೆ ಧನ್ಯವಾದ" ಎಂದು ಬರೆದು ಕೊಂಡಿದ್ದಾರೆ.