ಬಿಗ್ಬಾಸ್ ಮನೆಯಲ್ಲಿ ಕೊರೊನಾ ವೈರಸ್ ಕಾಟ ಆರಂಭವಾಗಿದೆ. ಇದೇನಪ್ಪಾ ಸ್ಪರ್ಧಿಗಳನ್ನು 14 ದಿನಗಳ ಕಾಲ ಕ್ವಾರಂಟೈನ್ನಲ್ಲಿಟ್ಟು ಎಲ್ಲಾ ಪರೀಕ್ಷಿಸಿದ ನಂತರವಷ್ಟೇ ತಾನೇ ಒಳಗೆ ಬಿಟ್ಟಿದ್ದು ಎಂದುಕೊಳ್ಳಬೇಡಿ. ಇದು ಸ್ಪರ್ಧಿಗಳಿಗೆ ನೀಡಿದ್ದ ಟಾಸ್ಕ್ ಅಷ್ಟೇ. 9ನೇ ದಿನ ಕೂಡಾ ಸ್ಪರ್ಧಿಗಳು ತಮಗೆ ನೀಡಲಾಗಿದ್ದ ಟಾಸ್ಕನ್ನು ವಾದ-ವಿವಾದದಿಂದಲೇ ಮುಗಿಸಿದರು.
ಬಿಗ್ ಬಾಸ್ ಮನೆಯಲ್ಲೂ ಶುರುವಾಯ್ತು ಕೊರೊನಾ ವೈರಸ್ ಕಾಟ...! - Big boss contestant Bro gowda
ಪ್ರಶಾಂತ್ ಸಂಬರಗಿ ನಿನ್ನೆಯ ಸ್ಪರ್ಧೆಯಲ್ಲಿ ಆಟ ಆಡುವ ಭರದಲ್ಲಿ ಕೆಲವರಿಗೆ ಪೆಟ್ಟಾಗುವಂತೆ ಮಾಡಿದರು. ಕೊರೊನಾ ವೈರಸ್ ಟಾಸ್ಕ್ನಲ್ಲಿ ಕೆಲವರು ಆಟದ ನಿಯಮಗಳನ್ನು ಮುರಿದಿದ್ದರಿಂದ ಅವರು ಅಟದಿಂದ ಹೊರಗೆ ಇರುವಂತೆ ಬಿಗ್ ಬಾಸ್ ಆದೇಶಿಸಿದ್ದು ಕಂಡುಬಂತು.
ಇದನ್ನೂ ಓದಿ:ಕಲಾ ನಿರ್ದೇಶಕ, ಕ್ಯಾಮರಾಮ್ಯಾನ್ ಬಗ್ಗೆ 'ರಾಬರ್ಟ್' ಚಿತ್ರತಂಡ ಹೇಳಿದ್ದೇನು...?
ನಿನ್ನೆ ಸ್ಪರ್ಧಿಗಳಿಗೆ ಕೊರೋನಾ ವೈರಸ್, ಲಾಕ್ಡೌನ್ ಟಾಸ್ಕ್ ನೀಡಲಾಗಿತ್ತು. ಕೊರೊನಾ ವೈರಸ್ ಮನುಷ್ಯರನ್ನು ದಾಳಿ ಮಾಡದಂತೆ ತಡೆಯುವುದು ಆಟದ ಉದ್ದೇಶವಾಗಿತ್ತು. ಮನುಷ್ಯ ಗುಂಪಿನ ಇಬ್ಬರು ಸದಸ್ಯರಾದ ಚಂದ್ರಕಲಾ ಹಾಗೂ ಗೀತಾ ವೈರಸ್ ಅಟ್ಯಾಕ್ ಆಗಿದ್ದರಿಂದ ಕ್ವಾರಂಟೈನ್ಗೆ ಒಳಗಾಗಿದ್ದರು. ಈ ಆಟದಲ್ಲಿ ಕೂಡಾ ಪ್ರಶಾಂತ್ ಸಂಬರಗಿ ಬಹಳ ವೈಲೆಂಟ್ ಆಗಿ ನಡೆದುಕೊಂಡರು. ಆಟ ಆಡುವ ಭರದಲ್ಲಿ ಕೆಲವರಿಗೆ ಪೆಟ್ಟಾಗುವಂತೆ ಮಾಡಿದರು. ಈ ವಿಚಾರ ಬ್ರೋ ಗೌಡ ಅವರನ್ನು ಕೆರಳಿಸಿ ಸಂಬರಗಿ ವಿರುದ್ಧ ಕಿಡಿ ಕಾರಿದರು. "ನಿಮಗೆ ನಾಚಿಕೆ ಆಗಬೇಕು, ನನಗಿಂತ ನೀವು ದೊಡ್ಡವರು ಎಂಬ ಕಾರಣಕ್ಕೆ ಸುಮ್ಮನೆ ಬಿಡುತ್ತಿದ್ದೇನೆ" ಎಂದು ಪ್ರಶಾಂತ್ ವಿರುದ್ಧ ಹರಿಹಾಯ್ದರು. ಬ್ರೋ ಗೌಡ ಅವರೊಂದಿಗೆ ಅರವಿಂದ್ ಹಾಗೂ ವಿಶ್ವನಾಥ್ ಕೂಡಾ ಸೇರಿಕೊಂಡರು. ಆದರೆ ಪ್ರಶಾಂತ್ ಮಾತ್ರ ತಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಕುಳಿತಿದ್ದರು. ಈ ನಡುವೆ ಆಟದ ನಿಯಮಗಳನ್ನು ಮುರಿದ ಕಾರಣ ಮನುಷ್ಯ ಗುಂಪಿನ ಮಂಜು, ಚಂದ್ರಕಲಾ, ಶುಭಾ ಪೂಂಜಾ ಆಟದಿಂದ ಅರ್ಧಗಂಟೆ ಹೊರಗಿರುವಂತೆ ಬಿಗ್ಬಾಸ್ಗೆ ಆದೇಶಿಸಿದ್ದು ಕಂಡುಬಂತು.