ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಹಲವು ನಿರ್ಬಂಧಗಳನ್ನು ವಿಧಿಸಿ ಸರ್ಕಾರವು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಈಗಾಗಲೇ ಧಾರಾವಾಹಿಯ ಫ್ರೆಷ್ ಎಪಿಸೋಡ್ಗಳು ಕೂಡಾ ಪ್ರಸಾರವಾಗುತ್ತಿವೆ. ಕಲಾವಿದರು ಕೂಡಾ ಎಲ್ಲಾ ಮುನ್ನೆಚರಿಕೆ ತೆಗೆದುಕೊಂಡು ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ.
ಲಾಕ್ಡೌನ್ ನಂತರದ ಶೂಟಿಂಗ್ ದಿನಗಳ ಅನುಭವ ಹಂಚಿಕೊಂಡ ಮೋಕ್ಷಿತಾ - Moskhita pai from Paru serial
ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಧಾರಾವಾಹಿ ಚಿತ್ರೀಕರಣದ ಸ್ಥಳದಲ್ಲಿ ಕೊರೊನಾ ವೈರಸ್ ಹರಡದಂತೆ ಹೇಗೆ ಮುನ್ನೆಚರಿಕೆ ವಹಿಸಲಾಗುತ್ತಿದೆ ಎಂಬುದರ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ.
![ಲಾಕ್ಡೌನ್ ನಂತರದ ಶೂಟಿಂಗ್ ದಿನಗಳ ಅನುಭವ ಹಂಚಿಕೊಂಡ ಮೋಕ್ಷಿತಾ corona safety measurement in Paru shooting set](https://etvbharatimages.akamaized.net/etvbharat/prod-images/768-512-7761513-879-7761513-1593094820178.jpg)
'ಪಾರು' ಖ್ಯಾತಿಯ ಮೋಕ್ಷಿತಾ ಪೈ ಕೂಡಾ ಲಾಕ್ಡೌನ್ ನಂತರದ ಶೂಟಿಂಗ್ ದಿನಗಳ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 'ಚಿತ್ರೀಕರಣ ನಡೆಯುತ್ತಿರುವ ಜಾಗದಲ್ಲಿ ಬಹಳ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ಧಾರಾವಾಹಿ ಎಂದ ಮೇಲೆ ತುಂಬಾ ಜನರು ತಂತ್ರಜ್ಞರು ಇರುತ್ತಾರೆ. ಆದರೆ ಇದೀಗ ಶೂಟಿಂಗ್ ಸೆಟ್ನಲ್ಲಿ ಮೊದಲಿಗಿಂತ ಕಡಿಮೆ ಜನರು ಇರುತ್ತಾರೆ. ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಶೂಟಿಂಗ್ ಸೆಟ್ನಲ್ಲಿ ಪ್ರತಿ ಮೂರು ಗಂಟೆಗೊಮ್ಮೆ ಎಲ್ಲರ ಟೆಂಪ್ರೇಚರ್ ಚೆಕ್ ಮಾಡಲಾಗುತ್ತಿದೆ. ಜೊತೆಗೆ ಚಿತ್ರೀಕರಣ ನಡೆಯುವ ಸ್ಥಳವನ್ನು ಮೂರು ಗಂಟೆಗೊಮ್ಮೆ ಸ್ಯಾನಿಟೈಸ್ ಮಾಡಲಾಗುತ್ತದೆ. ಎಲ್ಲಾ ಕಲಾವಿದರು ಕಡ್ಡಾಯವಾಗಿ ಮಾಸ್ಕ್ ಹಾಗೂ ಗ್ಲೌಸ್ ಧರಿಸುತ್ತಾರೆ. ಇದರಿಂದ ಕೊರೊನಾ ವೈರಸ್ ಒಕ್ಕರಿಸುವ ಭಯವಿರುವುದಿಲ್ಲ ಎನ್ನುತ್ತಾರೆ ಮೋಕ್ಷಿತಾ.
ಧಾರಾವಾಹಿ ನಿರ್ಮಾಪಕರು ನಮ್ಮೆಲ್ಲರ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದಾರೆ. ಶೂಟಿಂಗ್ ಸೆಟ್ಗೆ ನಾವು ಊಟ ತೆಗೆದುಕೊಂಡು ಹೋಗುತ್ತಿರಲಿಲ್ಲ. ನಿರ್ಮಾಪಕರೇ ನಮ್ಮೆಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲ ನಮ್ಮೆಲ್ಲರ ಹಿತದೃಷ್ಟಿಯಿಂದ ಹೊರಾಂಗಣ ಚಿತ್ರೀಕರಣ ಮಾಡದೆ ಒಳಾಂಗಣ ಚಿತ್ರೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದ್ದರು ಎಂದು ಪಾರು ಅಲಿಯಾಸ್ ಮೋಕ್ಷಿತಾ ಲಾಕ್ಡೌನ್ ನಂತರದ ಶೂಟಿಂಗ್ ದಿನಗಳ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.