ಕಳೆದ ವಾರ 'ಕಾಮಿಡಿ ಕಿಲಾಡಿಗಳು' ಫಿನಾಲೆ ಕಾರ್ಯಕ್ರಮ ಜರುಗಿದ್ದು ಮೂಲಗಳ ಪ್ರಕಾರ ರಾಕೇಶ್ ಪೂಜಾರಿ ಈ ಸೀಸನ್ ವಿನ್ನರ್ ಆಗಿದ್ದರೆ, ರನ್ನರ್ ಪಟ್ಟ ಸಂತೋಷ್ ಅವರಿಗೆ ದೊರಕಿದೆ ಎನ್ನಲಾಗುತ್ತಿದೆ. ಕಳೆದ ವಾರ ನಡೆದಿದ್ದ ಕಾರ್ಯಕ್ರಮ ಇಂದು ಸಂಜೆ 6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಇಂದು ಸಂಜೆ 'ಕಾಮಿಡಿ ಕಿಲಾಡಿಗಳು' ಗ್ಯ್ರಾಂಡ್ ಫಿನಾಲೆ ಪ್ರಸಾರ...ಯಾರಿರಬಹುದು ವಿನ್ನರ್...? - Comedy Kiladigalu grand finale will telecast today
ಕಳೆದ ವರ್ಷ ಆಗಸ್ಟ್ನಲ್ಲಿ ಆರಂಭವಾಗಿದ್ದ ' ಕಾಮಿಡಿ ಕಿಲಾಡಿಗಳು' ಸೀಸನ್ 3ರಲ್ಲಿ ಕರ್ನಾಟಕದ ವಿವಿಧೆಡೆಯಿಂದ ಕಲಾವಿದರು ಬಂದಿದ್ದರು. ಪ್ರತಿ ವಾರವೂ ನಾನಾ ಬಗೆಯ ಹಾಸ್ಯದ ಮೂಲಕ ಕಿರುತೆರೆ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದ ' ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಅಂತಿಮ ಘಟ್ಟ ತಲುಪಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಆರಂಭವಾಗಿದ್ದ ' ಕಾಮಿಡಿ ಕಿಲಾಡಿಗಳು' ಸೀಸನ್ 3ರಲ್ಲಿ ಕರ್ನಾಟಕದ ವಿವಿಧೆಡೆಯಿಂದ ಕಲಾವಿದರು ಬಂದಿದ್ದರು. ಪ್ರತಿ ವಾರವೂ ನಾನಾ ಬಗೆಯ ಹಾಸ್ಯದ ಮೂಲಕ ಕಿರುತೆರೆ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದ ' ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಅಂತಿಮ ಘಟ್ಟ ತಲುಪಿದೆ. ಕಳೆದ 6 ತಿಂಗಳಿಂದ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮದಲ್ಲಿ 13 ಸ್ಪರ್ಧಿಗಳು ಕಲಾವಿದರಾಗಿ ಭಾಗವಹಿಸಿದ್ದರು. ವಾರಾಂತ್ಯದಲ್ಲಿ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದ್ದ ಈ ಶೋನಲ್ಲಿ 'ಕಾಮಿಡಿ ಕಿಲಾಡಿ' ಪಟ್ಟ ಯಾರಿಗೆ ಸಿಗಲಿದೆ ಎಂಬ ವೀಕ್ಷಕರ ಕುತೂಹಲಕ್ಕೆ ಅಂತೂ ಬ್ರೇಕ್ ಬೀಳಲಿದೆ.
ವೀಕೆಂಡ್ ವಿತ್ ರಮೇಶ್ ಖ್ಯಾತಿಯ ರಮೇಶ್ ಅರವಿಂದ್ ಮತ್ತು ಗಟ್ಟಿಮೇಳ, ನರಗುಂದ ಬಂಡಾಯ ಚಿತ್ರದ ನಾಯಕ ರಕ್ಷ್ ಈ ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 'ಕಾಮಿಡಿ ಕಿಲಾಡಿಗಳು ' ಶೋ ಕಳೆದೆರಡು ಸೀಸನ್ಗಳಲ್ಲಿ ಭಾಗವಹಿಸಿದ ಸ್ಪರ್ಧಿಗಳು ಈಗಾಗಲೇ ಬೆಳ್ಳಿತೆರೆಯಲ್ಲೂ ಮಿಂಚುತ್ತಿದ್ದಾರೆ. ಇದೀಗ ಈ ಸೀಸನಿನ ಯಾವ ಸ್ಪರ್ಧಿಗಳು ನಟನಾಲೋಕಕ್ಕೆ ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿ ಬರಲಿರುವ ಈ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ನವರಸ ನಾಯಕ ಜಗ್ಗೇಶ್, ವಿಕಟಕವಿ ಯೋಗರಾಜ್ ಭಟ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಭಾಗವಹಿಸಲಿದ್ದಾರೆ.